ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಉತ್ತರ ಕರ್ನಾಟಕದವರಿಗೆ ವಿಪಕ್ಷ ನಾಯಕ ಸ್ಥಾನ ಸಿಗಬೇಕು-  ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ

ಬೆಂಗಳೂರು,: ವಿಪಕ್ಷ ನಾಯಕರ ಆಯ್ಕೆ ಸಂಬಂಧ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ವೀಕ್ಷಕರ ತಂಡ ಬೆಂಗಳೂರಿಗೆ ಆಗಮಿಸಿದೆ. ಇದೀಗ ಬಿಜೆಪಿ ನಾಯಕರ ವಿರುದ್ದ ಅಸಮಾಧಾನಗೊಂಡಿರುವ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನೆಗೆ ವೀಕ್ಷಕರ ತಂಡ ಭೇಟಿ ನೀಡಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿವಾಸಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ದುಷ್ಯಂತ ಗೌತಮ್ ಭೇಟಿ ನೀಡಿದರು. ವೀಕ್ಷಕರ ತಂಡಕ್ಕೆ ಶಾಸಕ ಯತ್ನಾಳ್ ಶಾಲು ಹೊದಿಸಿ ಸನ್ಮಾನಿಸಿದರು.

ವೀಕ್ಷಕರ ತಂಡ ಭೇಟಿ ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಬಾರದು  ಶಾಸಕಾಂಗ ಸಭೆಯಲ್ಲಿ ನಾನು ನನ್ನ ವಾದ ಮಂಡಿಸುವೆ. ಉತ್ತರ ಕರ್ನಾಟಕದವರಿಗೆ ವಿಪಕ್ಷ ನಾಯಕ ಸ್ಥಾನ ಸಿಗಬೇಕು . ಉತ್ತರ ಕರ್ನಾಟಕದವರೆಗ ಪ್ರಾತಿನಿದ್ಯ ಸಿಗಬೇಕು. ದಕ್ಷಿಣ ಕರ್ನಾಟಕದವರೇ ಅಧಿಕಾರ ಅನುಭವಿಸಬೇಕಾ ಎಂದು ಪ್ರಶ್ನಿಸಿದರು.

Related posts

ಶಿವಮೊಗ್ಗ ದಸರಾ: ಅ.15 ಹಾಗೂ ಅ.17ರಿಂದ 21ರ ವರೆಗೆ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ.

 ಬಿಜೆಪಿಯಲ್ಲಿ  ಶಾಸಕರಿಗೆ ಉಸಿರುಗಟ್ಟುವ ವಾತಾವರಣ:  ಕಾಂಗ್ರೆಸ್ ಗೆ ಯಾರೇ ಬಂದ್ರೂ ಸ್ವಾಗತ- ಸಚಿವ ರಾಮಲಿಂಗರೆಡ್ಡಿ ಆಹ್ವಾನ.

ನಾಡಿನ ಜನತೆಗೆ ವಿಜಯದಶಮಿಯ ಶುಭ ಕೋರಿದ ಸಿಎಂ ಸಿದ್ಧರಾಮಯ್ಯ.