ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನ.12 ಕ್ಕೆ ನಗರದಲ್ಲಿ ಅಂಟಿಗೆ ಪಂಟಿಗೆ ಜನಪದ ಕಲಾ ಪ್ರದರ್ಶನ.

ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ನವೆಂಬರ್ ೧೨ ರಂದು ಭಾನುವಾರ ಸಂಜೆ 06:00 ಗಂಟೆಗೆ ಶ್ರೀ ಕಾಲಭೈರವೇಶ್ವರ ದೇವಾಲಯ ಆವರಣದಲ್ಲಿ ಅಂಟಿಗೆ ಪಂಟಿಗೆ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು, ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಅನಿಲ್ ಕುಮಾರ್ ಎಸ್. ಭೂಮಾರೆಡ್ಡಿ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದು, ಬಿ.ಎ. ರಮೇಶ್ ಹೆಗಡೆ, ಡಾ.ಕಡಿದಾಳು ಗೋಪಾಲ್, ಎಂ.ಎ. ಹಿರಿಯಣ್ಣ ಹೆಗಡೆ, ಕೊಳಿಗೆ ವಾಸಪ್ಪಗೌಡ, ಭಾರತಿ ರಾಮಕೃಷ್ಣ, ಸುವರ್ಣ ಶಂಕರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ಬಂದ್ಯಾ ಗ್ರಾಮದ ಶ್ರೀ ನೀಲಕಂಠೇಶ್ವರ ದೇವಾಲಯದ ಯೋಗೇಂದ್ರ ಮತ್ತು ತಂಡದ ಸದಸ್ಯರು ಎರಡು ತಂಡಗಳಾಗಿ ವಿವಿಧ ಬಡಾವಣೆಗಳಿಗೆ ಸಂಚರಿಸಲಿವೆ. ಒಂದು ತಂಡ ಶರಾವತಿ ನಗರ, ವಿದ್ಯಾನಗರ, ಗಣಪತಿ ಲೇಔಟ್, ಎಲ್.ಬಿ.ಎಸ್. ನಗರ, ತಿಲಕ್ ನಗರ, ಚನ್ನಪ್ಪ ಲೇಔಟ್, ಗಾಂಧಿ ನಗರ, ಬಸವನಗುಡಿ, ರಾಜೇಂದ್ರ ನಗರ, ಸೂರ್ಯಲೇಔಟ್, ಪೋಲಿಸ್ ಚೌಕಿ, ವಿನೋಬನಗರ, ಶಿವಪ್ಪನಾಯಕ ಬಡಾವಣೆ, ಕಾಶಿಪುರ ಮುಖ್ಯ ರಸ್ತೆ ಒಳಗೊಂಡ ಸಂಚರಿಸುತ್ತದೆ. ಮತ್ತೊಂದು ತಂಡ ಎ.ಆರ್.ಬಿ. ಕಾಲೋನಿ, ಗೋಪಾಲಗೌಡ ಬಡಾವಣೆ, ಅಂಧರಶಾಲೆ ಹತ್ತಿರ, ಇಂಚರ ಶಾಲೆ ಹತ್ತಿರ, ಚಾಲುಕ್ಯ ನಗರ, ಗುಡ್ ಲಕ್ ಸರ್ಕಲ್, ಅಮೃತ ಲೇಔಟ್, ಶರಾವತಿ ನಗರ ಬಡಾವಣೆಗಳಲ್ಲಿ ಸಂಚರಿಸಲಿವೆ ಎಂದು ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಶೀಘ್ರದಲ್ಲಿ ಕೀಪ್ಯಾಡ್ ಮೊಬೈಲ್ ಫೋನ್ ಗಳಲ್ಲೂ ಯುಪಿಐ ಲಭ್ಯ..

ಇಲಿಯಾಸ್ ನಗರಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಮನವಿ.

ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ: ಟಿಕೆಟ್ ಸಿಗುವ ಭರವಸೆ ಇದೆ- ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ರಮೇಶ್ ಶೆಟ್ಟಿ