ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ತಮ್ಮ ಸಿದ್ಧಾಂತಕ್ಕೆ ಪೂರಕವಾಗಿರಲಿ ಎಂಬ ಆರಗ ಜ್ಞಾನೇಂದ್ರ ಪ್ರತಿಪಾದನೆ ಅತ್ಯಂತ ದೌರ್ಭಾಗ್ಯ-ಪಡುವಳ್ಳಿ ಹರ್ಷೇಂದ್ರಕುಮಾರ್

ಶಿವಮೊಗ್ಗ,: ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ತಮ್ಮ ಸಿದ್ಧಾಂತಕ್ಕೆ ಪೂರಕವಾಗಿರಬೇಕೆಂದು  ಶಾಸಕರಾದ ಆರಗ ಜ್ಞಾನೇಂದ್ರ ಮತ್ತವರ ಪಕ್ಷದವರು ಪ್ರತಿಪಾದಿಸಲು ಹೊರಟಿರುವುದು ಅತ್ಯಂತ ದೌರ್ಭಾಗ್ಯದ ಸಂಗತಿ ಎಂದು  ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಎಸ್ಸಿ ವಿಭಾಗದ ವಕ್ತಾರ ಪಡುವಳ್ಳಿ ಹರ್ಷೇಂದ್ರಕುಮಾರ್ ಹೇಳಿದ್ದಾರೆ.
ತಮ್ಮ ಮತೀಯ ಸಿದ್ಧಾಂತಕ್ಕೆ ಪೂರಕವಾಗಿ ಸಮ್ಮೇಳನ ನಡೆಯಬೇಕೆಂದು ಶಾಸಕರು ಬಯಸುತ್ತಿರುವುದು ಖಂಡನೀಯ. ಸಮ್ಮೇಳನದಲ್ಲಿ ಸನಾತನ ಸಂಸ್ಕೃತಿ, ಹಿಂದೂ ಧರ್ಮವನ್ನು ಹೀಯಾಳಿಸಬಾರದು, ಅವಹೇಳನ ಮಾಡಬಾರದು ಎಂದು ಎಚ್ಚರಿಕೆ ನೀಡಿರುವ ಶಾಸಕರು ರಾಷ್ಟ್ರ ಕವಿ ಕುವೆಂಪು ಅವರು  ಪ್ರತಿಪಾದಿಸಿದ ವಿಚಾರ ಕ್ರಾಂತಿಯ ಅರಿವಿಲ್ಲದ ಕನ್ನಡ ಸಾಹಿತ್ಯ ಮತ್ತು ಅದರ ಹೆಗ್ಗಳಿಕೆಯಾದ ವೈಚಾರಿಕ ಸಂವಾದವನ್ನೆ ನಿರಾಕರಿಸುತ್ತಾ ತಮ್ಮ ಬೌದ್ಧಿಕ ದಿವಾಳಿತನದ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಪತ್ರಕರ್ತರು, ಕವಿಗಳು, ವೈಚಾರಿಕ ಲೇಖಕರೂ ಆದ ಎನ್. ರವಿಕುಮಾರ್ (ಟೆಲೆಕ್ಸ್) ಅವರು ಸಾಹಿತ್ಯ ಸಮ್ಮೇಳನದ  ಕವಿಗೋಷ್ಟಿ ವಹಿಸುವುದನ್ನು ವಿರೋಧಿಸುತ್ತಿರುವ ಬಿಜೆಪಿಗರು ಎನ್.ರವಿಕುಮಾರ್ ಅವರು ಡಿ.ಬಿ.ಚಂದ್ರೇಗೌಡರ ಕುರಿತಾಗಿ ಬರೆದ ವಿಶ್ಲೇಷಣೆ ಯನ್ನು ಮುಂದಿಟ್ಟುಕೊಂಡು  ಅಪಪ್ರಚಾರಕ್ಕಿಳಿದಿರುವುದು ಖಂಡನೀಯ. ತೀರ್ಥಹಳ್ಳಿಯವರೇ ಆದ ಡಾ.ಯು.ಆರ್.ಅನಂತಮೂರ್ತಿ ಅವರು ವಿಧಿವಶರಾದಾಗ ಪಟಾಕಿ ಸಿಡಿಸಿ ಸಂಭ್ರಮಿಸಿದವರು, ಶರಣ ಸಾಹಿತ್ಯದ  ಮಹಾನ್ ವಿದ್ವಾಂಸರಾದ ಎಂ.ಎಂ ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಂಭ್ರಮಿಸಿದವರು ಈಗ ಸತ್ತವರ ಬಗ್ಗೆ ಹಗುರವಾಗಿ ಮಾತಾಡಬಾರದು ಎಂಬ ಉಪದೇಶ ಮಾಡುತ್ತಿರುವ ಶಾಸಕರು ಮತ್ತು ಅವರ ಬೆಂಬಲಿಗರು ಇಂತಹ ಸೋಗಲಾಡಿತನವನ್ನು ಬಿಡಬೇಕು.
ಶಾಸಕ ಆರಗ ಜ್ಞಾನೇಂದ್ರ ಮತ್ತವರ ಬೆಂಬಲಿಗರು ಅತ್ಯುತ್ತಮ ಕವಿ, ಬರಹಗಾರ,ರಾಜಕೀಯ ವಿಶ್ಲೇಷಕರಾದ ಎನ್ ರವಿಕುಮಾರ್ ಅವರನ್ನು ಹೀಯಾಳಿಸುತ್ತಿರುವುದರ ಹಿಂದೆ ದಲಿತ ವಿರೋಧಿ ಮನಃಸ್ಥಿತಿಯೂ ಅಡಗಿದೆ ಎಂದು ಗಂಭೀರವಾಗಿ ಆರೋಪಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕುವೆಂಪು ಅವರು ಹಾಕಿಕೊಟ್ಟ ವೈಚಾರಿಕ ಸಂವಾದ ಮತ್ತು ನಾಡು-ನುಡಿಯ ಪ್ರಗತಿಯ ರುಜಮಾರ್ಗವೇ ಆಗಿರುತ್ತದೆ. ಇಂತಹ ಸಮ್ಮೇಳನಕ್ಕೆ ಸಲ್ಲದ ಕಾರಣವೊಡ್ಡಿ ಮತೀಯ ಸಿದ್ಧಾಂತದಿಂದ  ಅಡ್ಡಿಪಡಿಸುವ ಮತೀಯ ಶಕ್ತಿಗಳ ನಡೆಯನ್ನು ಸಹಿಸಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ.

Related posts

ಐದು ವರ್ಷಗಳಲ್ಲಿ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅವಕಾಶ-ಸಚಿವ ಶರಣಪ್ರಕಾಶ್ ಪಾಟೀಲ್

ಕುವೆಂಪು ವಿವಿ ಜೊತೆ ಯೂಥ್ ಫಾರ್ ಸೇವಾ ಒಡಂಬಡಿಕೆ

ಕಲ್ಯಾಣ ಕರ್ನಾಟಕಕ್ಕೆ ಹೋಗಲು ಶಿಕ್ಷಕರ ಹಿಂದೇಟು: ಏಳು ಜಿಲ್ಲೆಗಳಿಗೆ ಬಂದಿದ್ದು ಮಾತ್ರ 74 ಶಿಕ್ಷಕರು.