ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪ್ರೊ.ಭಗವಾನ್ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ.

ಶಿವಮೊಗ್ಗ: ಪೆÇ್ರಫೆಸರ್ ಭಗವಾನ್ ಅವರು ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ಒಕ್ಕಲಿಗ ಸಮುದಾಯದ ಬಗ್ಗೆ ಕೀಳು ಮಟ್ಟದ ಭಾμÉಯನ್ನು ಉಪಯೋಗಿಸಿ ಮಾತನಾಡಿದ್ದಾರೆ. ಅವರನ್ನು ಕೂಡಲೇ ಜಾತಿ ನಿಂದನೆ ಆರೋಪದಡಿ ಬಂಧಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‍ಕುಮಾರ್ ಅವರಿಗ ಮನವಿ ಸಲ್ಲಿಸಲಾಯಿತು.
ಒಕ್ಕಲಿಗರು ಹೀನ ಜಾತಿಯವರು, ನೀಚರು ಎನ್ನುವ ಪದ ಬಳಸಿದ್ದಾರೆ. ಒಂದು ಹೆಜ್ಜೆ ಮುಂದು ಹೋಗಿ ಇದಕ್ಕೆ ರಾಷ್ಟ್ರಕವಿ ಯುಗದ ಕವಿ ಕುವೆಂಪು ಹೆಸರನ್ನು ತಳಕು ಹಾಕಿದ್ದಾರೆ. ಕುವೆಂಪು ತಮ್ಮ ಗದ್ಯ ಕಾವ್ಯದಲ್ಲಿ ಈ ಪದಗಳನ್ನು ಯಾವ ಉದ್ದೇಶಕ್ಕೆ ಬಳಸಿದ್ದರೊ ಗೊತ್ತಿಲ್ಲ ಆದರೆ ಪೆÇ್ರಫೆಸರ್ ಭಗವಾನ್ ಅದೇ ವಿಷಯವನ್ನು ಇಟ್ಟುಕೊಂಡು ಈಗ ಸಮಾಜದ ಸಾಮರಸ್ಯವನ್ನು ಕದಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ಒಕ್ಕಲಿಗ ಸಮುದಾಯದವರು ರಾಜ್ಯ ಹಾಗೂ ರಾಷ್ಟ್ರದಲ್ಲಿ ತನ್ನದೇ ಆದ ಚಾಫು ಮೂಡಿಸಿದ್ದಾರೆ. ಪ್ರತಿ ರಂಗದಲ್ಲೂ ಒಕ್ಕಲಿಗ ಸಮುದಾಯದವರು ತಮ್ಮದೇ ಆದ ಸೇವೆಯನ್ನು ನೀಡಿದ್ದಾರೆ ರಾಜಕೀಯ ರಂಗ, ಕ್ರೀಡೆ, ಶಿಕ್ಷಣ, ಸಾಹಿತ್ಯ , ವ್ಯಾಪಾರ ಉದ್ಯೋಗ ಕೃಷಿ ಸೇರಿದಂತೆ ಕಾಯಾರ್ಂಗ ಶಾಸಕಾಂಗ, ನ್ಯಾಯಾಂಗ ಪತ್ರಿಕಾರಾಂಗಗಳಲ್ಲೂ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿದ್ದಾರೆ. ಸಮಾಜಕ್ಕೆ ಸಾಕಷ್ಟು ಸೇವೆಯನ್ನು ನೀಡಿದ್ದಾರೆ. ಹಿಂದೆ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರನ್ನು ಹಿಡಿದು ರಾಷ್ಟ್ರಕವಿ ಯುಗದ ಕವಿ ಕುವೆಂಪು, ರಾಜಕೀಯ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಹೆಸರು ಗಳಿಸಿದ ಶಾಂತವೇರಿ ಗೋಪಾಲಗೌಡರು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಇವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷÀ ರಘುರಾಜ್ ಹೆಚ್.ಕೆ., ಪ್ರಮುಖರಾದ ತಾಯಿಮನೆ ಸುದರ್ಶನ್, ಸತೀಶ್ ಪಿಲ್ಲಂಗೆರೆ ರಮೇಶ್, ಮಹೇಶ್, ಪ್ರವೀಣ್ ಚಂದ್ರಶೇಖರ್, ಪ್ರಜ್ವಲ್ ದೇವರಾಜ್, ಶಿವಕುಮಾರ್ ಪರಮೇಶ್, ಅರುಣ, ದಿನೇಶ್, ಡಾ. ಶಾಂತ ಸುರೇಂದ್ರ, ಪ್ರತಿಮಾ ಡಾಕಪ್ಪಗೌಡ, ಮಮತಾಶಿವಣ್ಣ, ರಜಿನಿ ಪುಷ್ಪಲತಾ, ದೀಪಾ, ವಿಶಾಲಾಕ್ಷಿ ಪದ್ಮಾ ಮತ್ತಿತರರು ಇದ್ದರು.

Related posts

ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಕರಪತ್ರ ಬಿಡುಗಡೆ.

ಭಾವನಾತ್ಮಕ ಹೃದಯದಿಂದ ಭಾವನೆಗಳ ಅಭಿವ್ಯಕ್ತಿ : ಡಾ.ಧನಂಜಯ ಸರ್ಜಿ

ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೆ. ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ-ಕೆ.ಎಸ್. ಈಶ್ವರಪ್ಪ