ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಶಿಶುಪಾಲನಾ ಕೇಂದ್ರ ಮುಚ್ಚಲು ಹೊರಟಿರುವುದಕ್ಕೆ ಖಂಡನೆ: ಜಿಲ್ಲಾಧಿಕಾರಿಗೆ ಮನವಿ.

ಶಿವಮೊಗ್ಗ: ಹೊಸಮನೆ ಬಡಾವಣೆಯಲ್ಲಿ ಎಂಪೈರ್ ಫೌಂಡೇಷನ್ ಸಂಸ್ಥೆಯವರು ಕಾರ್ಮಿಕ ಇಲಾಖೆ ವತಿಯಿಂದ ತೆರೆದಿರುವ ಶಿಶುಪಾಲನಾ ಕೇಂದ್ರವನ್ನು ಮುಚ್ಚಲು ಹೊರಟಿರುವುದನ್ನು ಖಂಡಿಸಿ ಹೊಸಮನೆ ಬಡಾವಣೆಯ ಕಟ್ಟಡ ಕಾರ್ಮಿಕರ ಶಿಶುಪಾಲನಾ ಕೇಂದ್ರದ ಮಕ್ಕಳ ಪೋಷಕರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಇಲಾಖೆ ವತಿಯಿಂದ ಹೊಸಮನೆ ಬಡಾವಣೆಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ತೆರೆಯಲಾಗಿದೆ. ಇಲ್ಲಿ ಕಾರ್ಮಿಕರ ಮಕ್ಕಳಿಗೆ ಊಟ, ಉಪಾಹಾರದ ಜೊತೆಗೆ ಸಮವಸ್ತ್ರ ಮತ್ತು ಶೂ ನೀಡುತ್ತಿದ್ದಾರೆ. ಪ್ರತಿ 3 ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಆಯೋಜಿಸುತ್ತಾರೆ. ಉತ್ತಮ ಕಲಿಕಾ ಸಾಮಗ್ರಿಗಳಿವೆ. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಶಿಕ್ಷಕರು ಮತ್ತು ಸಹಾಯಕರಿದ್ದಾರೆ. ಇದೊಂದು ಮಾದರಿ ಶಿಶುಪಾಲನಾ ಕೇಂದ್ರವಾಗಿದೆ ಎಂದು ಮನವಿದಾರರು ತಿಳಿಸಿದರು.
ಆದರೆ ಈಗ ಸರ್ಕಾರ ಈ ಕೇಂದ್ರವನ್ನು ಮುಚ್ಚುವಂತೆ ಆದೇಶ ನೀಡಿರುವುದು ಅತ್ಯಂತ ಶೋಚನೀಯವಾಗಿದೆ. ಇದನ್ನು ಮುಚ್ಚುವುದರಿಂದ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಿಶುಪಾಲನಾ ಕೇಂದ್ರವನ್ನು ಮುಚ್ಚದೆ ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪೋಷಕರಾದ ಸುಧಾ, ಸೌಮ್ಯ, ಜಯಮ್ಮ, ಸುನೀತಾ, ಮೇಘಶ್ರೀ, ಅನ್ವಿತಾ, ದೀಪಾ, ಭವಾನಿ, ಮಾಲಾ, ನಂದಿನಿ, ಗೀತಾ ಮುಂತಾದವರಿದ್ದು.

ಶಿವಮೊಗ್ಗ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಿಕಾ ವಿತರಕರನ್ನು ಪರಿಗಣಿಸುವಂತೆ ಆಗ್ರಹಿಸಿ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಘಟಕ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಹಲವು ವರ್ಷಗಳಿಂದ ಇದನ್ನು ಸೇವೆಯಾಗಿ ಪರಿಗಣಿಸಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಭಾಷೆ ಬೆಳವಣಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡಿದ್ದಾರೆ. ಆದ್ದರಿಂದ ಶಿವಮೊಗ್ಗ ಜಿಲ್ಲಾಡಳಿತದಿಂದ ಇಂತವರನ್ನು ಗುರುತಿಸಿ ಕರ್ನಾಟಕ ಸರ್ಕಾರವು ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಿಕಾ ವಿತರಕರನ್ನು ಕೂಡ ಪರಿಗಣಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್. ಮಾಲತೇಶ್, ನಾಗಭೂಷಣ್, ರಾಮೋಜಿ, ಧನಂಜಯ, ಮುಕ್ತಿಯಾರ್ ಅಹ್ಮದ್, ರಾಜವರ್ಮ ಜೈನ್, ರಾಘವೇಂದ್ರ, ಮುಸ್ತಫಾ, ಕಿರಣ್ ಸೇರಿದಂತೆ ಹಲವರಿದ್ದರು.

Related posts

ವಿಪಕ್ಷಗಳು ಸರ್ಕಾರ ಬೀಳಿಸುವ ಚಿಂತನೆ ಬಿಟ್ಟು ಆಡಳಿತ ಪಕ್ಷದೊಂದಿಗೆ ಸಹಕರಿಸಲಿ- ಸಚಿವ ಮಧು ಬಂಗಾರಪ್ಪ

ಬಯಸದೇ ಬಂದ ಭಾಗ್ಯ: ಹತ್ತೇ ಸೆಕೆಂಡ್ ನಲ್ಲಿ ಲಕ್ಷಾಧಿಪತಿ: ಬರಿಗೈಯಲ್ಲಿ ಬಂದವನಿಗೆ ಸಿಕ್ತು 94 ಲಕ್ಷ ರೂ. ಹಣ. ಮುಂದೇನಾಯ್ತು…?

ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಜೀವನ ಕೌಶಲ್ಯ ಅವಶ್ಯಕ-ಜಿ.ವಿಜಯ್‌ ಕುಮಾರ್