ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಪ್ರೀತಿಸಿ ಮದುವೆಯಾದ ಜೋಡಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ; ರಕ್ಷಣೆ ಕೋರಿ ಸಿಎಂ ಮತ್ತು ಸಚಿವರಿಗೆ ಮನವಿ…

ಚಿಕ್ಕೋಡಿ: ಇತ್ತೀಚೆಗೆ ಪ್ರೇಮವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು ಕುಟುಂಬಸ್ಥರ ವಿರೋಧದ ನಡುವೆಯೂ ಲವ್ ಮ್ಯಾರೇಜ್ ಗೆ ಕಾಲಿಡುವ ಮಂದಿಗೆ ಬೆದರಿಕೆಗಳು ಇದ್ದೇ ಇರುತ್ತದೆ.  ಅಂತಹದ್ದೇ ಪ್ರಕರಣವೊಂದು ನಡೆದಿದ್ದು, ಮನೆಯವರ ವಿರೋಧದ ನಡುವೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯ ಕುಟುಂಬಸ್ಥರು ಜೀವ ಬೆದರಿಕೆಯೊಡ್ಡಿರುವ ಹಿನ್ನೆಲೆ ತಮಗೆ ರಕ್ಷಣೆ ನೀಡುವಂತೆ ದಂಪತಿಗಳು ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಇದು ನಡೆದಿದೆ. ಗ್ರಾಮದ ಸರೋಜಿನಿ ಮನಗುತ್ತಿ, ಪ್ರಕಾಶ್ ಹಳೆಗೌಡರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಸುಲ್ತಾನಪುರ ಗ್ರಾಮದಲ್ಲಿ ಎದುರು ಬದುರು ಮನೆಯಲ್ಲಿ ವಾಸಿಸುತ್ತಿರುವ ಸರೋಜಿನಿ, ಪ್ರಕಾಶ್ ಕುಟುಂಬ. ಈ ನಡುವೆ ಇಬ್ಬರಿಗೆ ಪ್ರೀತಿ ಚಿಗುರೊಡೆದಿದೆ. ಆದರೆ ಇಬ್ಬರ ಪ್ರೀತಿಗೆ ವಿರೋಧಿಸಿದ್ದ ಸರೋಜಿನಿ ಕುಟುಂಬಸ್ಥರು. ಮದುವೆಗೆ ವಿರೋಧಿಸಿದ್ದರಿಂದ ಮನೆಯಿಂದ ಓಡಿಹೋಗಿ  ಸರೋಜಿನಿ, ಪ್ರಕಾಶ ಸಬ್  ರಿಜಿಸ್ಟ್ರಾರ್ ಮದುವೆಯಾಗಿದ್ದರು.

ರಿಜಿಸ್ಟ್ರಾರ್ ಮದುವೆಯಾಗಿ ಮನೆಬಿಟ್ಟು ಹೋಗಿರುವ ದಂಪತಿ. ಸರೋಜಿನಿ ಕುಟುಂಬಸ್ಥರ ಕಣ್ತಪ್ಪಿಸಿ ಬದುಕುತ್ತಿರುವ ಯುವ ಜೋಡಿ. ಇತ್ತ ಸರೋಜಿನಿ ಕುಟುಂಬಸ್ಥರು ಪ್ರಕಾಶ್ ಕುಟುಂಬಸ್ಥರೊಂದಿಗೆ ಜಗಳವಾಡಿ ಜೀವ ಬೆದರಿಕೆಯೊಡ್ಡಿದ್ದಾರೆ. ಅವನು ಎಲ್ಲಾದರೂ ಸಿಕ್ಕರೆ ಕೊಂದುಬಿಡುತ್ತೇವೆ ಎಂದು ಬೆದರಿಕೆ. ಸರೋಜಿನಿ ತಂದೆ ಲಗಮಣ್ಣ ಮನಗುತ್ತಿ, ಅಣ್ಣ ಪ್ರಸಾದ್, ಮಾವಂದಿರು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸುಲ್ತಾನಪುರದಲ್ಲಿ ಮನೆಗೆ ಹೋಗಲು ಪ್ರಕಾಶ್ ಕುಟುಂಬಸ್ಥರಿಗೆ ದಾರಿ ನೀಡುತ್ತಿಲ್ಲ ಎಂದು ಆರೋಪ ಕೇಳಿಬಂದಿದೆ.

ಈ ಹಿನ್ನೆಲೆ ಯುವ ಜೋಡಿ ಬೆಳಗಾವಿ ಎಸ್‌ಪಿಗೆ ಕರೆ ಮಾಡಿ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಖುದ್ದು ನೀವೇ ಇಲ್ಲಿಗೆ ಬಂದು ದೂರು ಕೊಡಿ ಎಂದಿರುವ ಬೆಳಗಾವಿ ಎಸ್‌ಪಿ. ಆದರೆ ಯುವ ಜೋಡಿ ಸದ್ಯ ಗುಜರಾತ್‌ನಲ್ಲಿ ವಾಸವಿದ್ದು, ಜೀವ ಬೆದರಿಕೆ ಹಿನ್ನೆಲೆ ಬರಲು ಸಾಧ್ಯವಾಗಿಲ್ಲ. ನಮ್ಮ ಕುಟುಂಬಸ್ಥರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಇಮೇಲ್ ಮೂಲಕ ದೂರು ನೀಡುತ್ತೇವೆಂದರೂ ಒಪ್ಪದ ಬೆಳಗಾವಿ ಎಸ್‌ಪಿ.

ಹೀಗಾಗಿ ನಮಗೆ ನೀವೆ ರಕ್ಷಣೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ವಿಡಿಯೋ ಮೂಲಕ ಮನವಿ ಮಾಡಿದ ದಂಪತಿ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಯುವಜೋಡಿ ಮನವಿ ಮಾಡಿದ್ದಾರೆ.  ತಮಗೆ ಹಾಗೂ ತನ್ನ ಗಂಡ ಪ್ರಕಾಶ್ ಕುಟುಂಬಸ್ಥರಿಗೆ ಏನೇ ಆದರೂ ನನ್ನ ತಂದೆ, ಕುಟುಂಬಸ್ಥರೇ ಹೊಣೆ ಎಂದು ವಿಡಿಯೋ ಮೂಲಕ  ಸರೋಜಿನಿ ಹೇಳಿಕೆ ನೀಡಿದ್ದಾರೆ.

 

Related posts

ಕಾವೇರಿ ನೀರಿಗಾಗಿ ಹೋರಾಡುತ್ತಿರುವವರು ಮೇಕೆದಾಟು ಯೋಜನೆ ಅನುಮತಿಗೆ ಯಾಕೆ ಒತ್ತಾಯಿಸುತ್ತಿಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್

ಸೆ. 4ರಂದು ಬರಪೀಡಿತ ತಾಲೂಕುಗಳ ಘೋಷಣೆ.

ಡಿಸಿಎಂ ಡಿಕೆ ಶಿವಕುಮಾರ್ ಗೆ ರಿಲೀಫ್: ಸಿಬಿಎಂ ತನಿಖೆ ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿ ವಾಪಾಸ್