ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್.

ಬೆಂಗಳೂರು : ದೇಶದಲ್ಲಿ, ರಾಜ್ಯದಲ್ಲಿ ದಿನನಿತ್ಯ ಬಳಕೆ  ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಇದೀಗ ಮತ್ತೊಂದು ಶಾಕ್ ಕಾದಿದೆ.

ಹೌದು  ರಾಜ್ಯದಲಲ್ಲಿ ಅಕ್ಕಿ ಬೆಲೆಯು ಸರಾಸರಿ ಶೇ. 15 ರಷ್ಟು ಏರಿಕೆಯಾಗಿದೆ. ಈ ವರ್ಷ ಮುಂಗಾರು ಮಳೆ ವಿಳಂಬ, ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದ್ದು, ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಶೇ.15 ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ 50 ರೂ.ನಿಂದ ರಿಂದ 60 ರೂ.ಗೆ ಏರಿಕೆಯಾಗಿದೆ. ರಾಜಮುಡಿ ಅಕ್ಕಿ ಕೆ.ಜಿಗೆ 70 ರಿಂದ 74 ರೂ. ವರೆಗೆ ತಲುಪಿದೆ. ಬಿಪಿಎಲ್ ಕುಟುಂಬಗಳು ಬಳಸುವ ಅಕ್ಕಿ ಕೆಜಿಗೆ 30 ರೂ.ನಿಂದ 36 ಕ್ಕೆ ಏರಿಕೆಯಾಗಿದೆ.

ಮಳೆ ಕೊರತೆಯಿಂದಾಗಿ ಭತ್ತದ ಉತ್ಪಾದನೆ ಆಗಿಲ್ಲ. ಹಲವೆಡೆ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಹೀಗಾಗಿ ಅಕ್ಕಿ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

 

Related posts

ಆಸ್ಪತ್ರೆಗೆ ಭೇಟಿ:  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ಧರಾಮಯ್ಯ.

ಬಿಜೆಪಿ ಬರ ಅಧ್ಯಯನ ಮಾಡಲಿ ತಪ್ಪೇನಿಲ್ಲ: ಆದ್ರೆ ಕೇಂದ್ರದಿಂದ ಪರಿಹಾರ ಕೊಡಿಸಲಿ-ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್.

ವಸತಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸಜ್ಜು; 808 ಹುದ್ದೆ ಭರ್ತಿ ಮಾಡಲು ಸಮ್ಮತಿ..!