ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘದಿಂದ ಸದಸ್ಯರಿಗೆ ಶೇ.23ರಷ್ಟು ಲಾಭಾಂಶ ಘೋಷಣೆ.

ಶಿವಮೊಗ್ಗ: ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ, ನಿಯಮಿತವು ತನ್ನ ಸದಸ್ಯರಿಗೆ 2022-23ನೇ ಸಾಲಿಗೆ ಶೇ.23ರಷ್ಟು ಲಾಭಾಂಶ ಘೋಷಣೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಯೋಗೇಶ ಎಸ್.ಪ್ರಕಟಿಸಿದರು.
 ಅವರು ಭಾನುವಾರ ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಸಂಘದ 36ನೇ ಸರ್ವ ಸದಸ್ಯರ ಸಭೆಯ, ಸೇವಾ ನಿವೃತ್ತಿ ಹೊಂದಿದ ಸದಸ್ಯರಿಗೆ ಮತ್ತು ಪ್ರಶಸ್ತಿ ವಿಜೇತರಿಗೆ ಆಡಳಿತ ಮಂಡಳಿಯಿAದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಹಣಕಾಸಿನ ವರ್ಷದ ಪ್ರಾರಂಭದಲ್ಲಿ ಸಂಘವು ರೂ.1,15,82,516-00ಗಳ ಅಧಿಕೃತ ಪಾಲು ಬಂಡವಾಳವನ್ನು ಹೊಂದಿದ್ದು ಅಮೃತ ನಿಧಿ, ಆರೋಗ್ಯ ನಿಧಿ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಿಧಿ, ಸಿಬ್ಬಂದಿ ಕಲ್ಯಾಣ ನಿಧಿ, ಪ್ರತಿಭಾಪುರಸ್ಕಾರ ದತ್ತಿ ನಿಧಿ ಮೊದಲಾದವುಗಳಿಗೆ ರೂ.2,59,00,758-00ನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಸಂಘವು ರೂ.12,29,12,589-00 ಠೇವಣಿಯನ್ನು ಹೊಂದಿದ್ದು, ರೂ.2,77,71,000-ವನ್ನು ಸದಸ್ಯರಿಗೆ ಸಾಲದ ರೂಪದಲ್ಲಿ ನೀಡಿದೆ. ಈ ಸಾಲಿನಲ್ಲಿ ಅಕಾಲಿಕ ಮರಣ ಹೊಂದಿದ ಸದಸ್ಯರ ವಾರಸುದಾರರಿಗೆ ಅಮೃತ ನಿಧಿಯಿಂದ ಒಟ್ಟೂ ರೂ.1,60,000-00ಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಎನ್.ಎಸ್.ಎಸ್.ಕಾರ್ಯಕ್ರಮಾದಿಕಾರಿ ಪ್ರಶಸ್ತಿಗೆ ಭಾಜನರಾದ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೆಗಡೆ, ಹಾಗೂ ಸಂಘದ ನಿವೃತ್ತ ಸದಸ್ಯರನ್ನು ಸನ್ಮಾನಿಸಲಾಯಿತು.
 ಸಂಘದ ಹಿರಿಯ ನಿರ್ದೇಶಕರಾದ ಡಾ.ಬಾಲಕೃಷ್ಣ ಹೆಗಡೆ, ದಿವಾಕರ ಡಿ.ಕೆ. ಪ್ರಶಾಂತ ಎಸ್.ಎಚ್., ರಘು ಬಿ.ಎಂ., ಇಮ್ತಿಯಾಜ್ ಅಹಮ್ಮದ್, ಪರಶುರಾಮಪ್ಪ ಪಿ. ಆರ್. ಯಶವಂತಕುಮಾರ ಎಸ್.ಆರ್. ಕೆಂಚಮ್ಮ ಆರ್., ಜ್ಯೋತಿ ಎಸ್.ಬಿ., ಗಿರಿಜವ್ವ ತಹಶೀಲ್ದಾರ, ಸುರೇಶ್ ಹೆಚ್.ವೈ. ಮಂಜಪ್ಪ ಎಸ್.ಆರ್., ರುದ್ರಗೌಡ ಮರ್ಕಳ್ಳಿ ಮೊದಲಾದವರಿದ್ದರು.
 ಬಾಕ್ಸ್ ಐಟಂ
ಅನುಚಿತ ವರ್ತನೆ-ಅಮಾನತು
ಸಂಘದ, ಮಾಜಿ ಅಧ್ಯಕ್ಷರೂ ಆದ ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನ ಮೃತ್ಯುಂಜಯ ಎಸ್.ಹಿರೇಮಠ ಈ ಸರ್ವಸದಸ್ಯರ ಸಭೆಯಲ್ಲಿ ಸಭಾ ಮರ್ಯಾದೆ, ಗೌರವಕ್ಕೆ ಧಕ್ಕೆ ತರುವಂಥಹ ನಡವಳಿಕೆ ಪ್ರದರ್ಶಿಸಿದ್ದಕ್ಕಾಗಿ ಸದರಿ ಸಭೆಯಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧ್ಯಕ್ಷರು ಪ್ರಕಟಿಸಿದರು.

Related posts

ಖಾಸಗಿ ಬಸ್, ಆಟೋಗಳಿಗೆ ರಾಜ್ಯ ಸರ್ಕಾರದಿಂದ ಸಿಗುತ್ತಾ ಪರಿಹಾರ ಪ್ಯಾಕೇಜ್…?

ಹಮಾಸ್ ಅನ್ನು ಕೊನೆಗೊಳಿಸದೆ ಬೇರೆ ದಾರಿಯಿಲ್ಲ ! – ಎಲಾನ್ ಮಸ್ಕ್

ಶಿಕ್ಷಣ ಪ್ರೇಮಿ, ಸಾಂಸ್ಕೃತಿಕ ರಾಯಭಾರಿ, ಸಜ್ಜನ ರಾಜಕಾರಣಿ ಡಾ.ಮಂಜುನಾಥ ಭಂಡಾರಿಯವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ….