ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ಸರ್ವಾಂಗೀಣ ವಿಕಾಸ ಮಹಿಳಾಶ್ರಮದ ಧ್ಯೇಯ- ಅನಿತಾ ನಾಗೇಂದ್ರ 

ಚಿಕ್ಕಮಗಳೂರು :  ಮಹಿಳೆಯರ ಸರ್ವಾಂಗೀಣ ವಿಕಾಸ ಮಹಿಳಾಶ್ರಮದ ಧ್ಯೇಯ. ಸಂಘಟಿರಾದಾಗ ಸಾಧನೆ ಸುಲಭ ಎಂದು ಅಧ್ಯಕ್ಷೆ ಅನಿತಾನಾಗೇಂದ್ರ ನುಡಿದರು.
ಬಸವನಹಳ್ಳಿ ಮಹಿಳಾಶ್ರಮ ಸಂಘದ 2023-2024ನೆಯ ಸಾಲಿನ ಸರ್ವಸದಸ್ಯರ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದು ಅವರು ಮಾತನಾಡಿದರು.
ಸಂಸ್ಥೆಗೆ ವ್ಯಕ್ತಿ ಅನಿವಾರ್ಯ ಅಲ್ಲ. ಬಹಳಮಂದಿ ಕೈಜೋಡಿಸಿದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಮಹಿಳಾಶ್ರಮ ಶೈಕ್ಷಣಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡಮಾಧ್ಯಮ ಶಾಲೆಯಾಗಿದ್ದು, 180ಕ್ಕೂ ಹೆಚ್ಚು ಹಿಂದುಳಿದ ಮಕ್ಕಳು ಪಾಠ ಕಲಿಯುತ್ತಿದ್ದಾರೆ. 1ರಿಂದ 4ನೆಯ ತರಗತಿಯವರೆಗೆ ಮಾತ್ರ ಅನುದಾನಕ್ಕೊಳಪಟ್ಟಿದ್ದು, ಈ ಮಕ್ಕಳಿಗೆ ಮಾತ್ರ ಉಚಿತವಾಗಿ ಸರ್ಕಾರ ಪುಸ್ತಕಗಳು ಸೇರಿದಂತೆ ಬಿಸಿಯೂಟ ನೀಡಲಾಗುತ್ತಿದೆ. ಪ್ರತಿವರ್ಷ 5ರಿಂದ 7ನೆಯ ತರಗತಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರಗಳನ್ನು ದಾನಿಗಳು ನೀಡುತ್ತಿದ್ದಾರೆಂದ ಅನಿತಾ, ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಯೋಜನೆ ಇದೆ ಎಂದರು.
1956ರಲ್ಲಿ ಸ್ಥಾಪನೆಯಾದ ಮಹಿಳಾಶ್ರಮ ಮೊದಲು ಮಹಿಳಾ ಸಬಲೀಕರಣಕ್ಕಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆರಂಭವಾದ ಸಂಸ್ಥೆ. 2004ರಲ್ಲಿ ಇದ್ದ ರೂಪರೇಷೆಗಳು 2024ರಲ್ಲಿ ಇರುವ ಸ್ವರೂಪಕ್ಕೂ ಬಹಳ ವ್ಯತ್ಯಾಸವಿದೆ. ಸಂಘ ಕಟ್ಟಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಹಿರಿಯಸದಸ್ಯರು ಈ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ತಮ್ಮ ಸೇವೆಸಲ್ಲಿದ್ದಾರೆಂದು ಈ ಸಂದರ್ಭದಲ್ಲಿ ಸ್ಮರಿಸಿದರು.
ಭಜನೆ, ರಾಮನವಮಿ, ಕೃಷ್ಣಾಜನ್ಮಾಷ್ಠಾಮಿ ಹೀಗೆ ಹಿರಿಯ ಸದಸ್ಯರೆಲ್ಲಾ ಸೇರಿ ಆಚರಿಸುವ ಪದ್ಧತಿ ಮಹಿಳಾಶ್ರಮದಲ್ಲಿತ್ತು. ಮುಂದೆ ಶೈಕ್ಷಣಿಕ ಸಂಸ್ಥೆಯಾಗಿ ರೂಪುಗೊಂಡಿದೆ. ಪ್ರತಿವರ್ಷ ಶಾಲೆಯಲ್ಲಿ ವಿಶ್ವ ಪರಿಸರದಿನ, ಸ್ವಾತಂತ್ರ್ಯೋತ್ಸವ, ಶಿಕ್ಷಕರ ದಿನಾಚರಣೆ, ಗಾಂಧಿಜಯಂತಿ, ಕನ್ನಡರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಗಣರಾಜ್ಯೋತ್ಸವ, ಗಣೇಶೋತ್ಸವ, ಕ್ರೀಡೋತ್ಸವ , ಸೇರಿದಂತೆ ಮಹಿಳಾಶ್ರಮ ಸಂಘವು ಮಹಿಳೆಯರಿಗಾಗಿ ಸಂಕ್ರಾಂತಿ ಸಂಭ್ರಮ, ಶಿವರಾತ್ರಿ ಮಹಿಮೆ, ಮಹಿಳಾ ದಿನಾಚರಣೆ ಹೀಗೆ ಅನೇಕ ಹಬ್ಬಗಳ ಆಚರಣೆ ಅದರ ವೈಶಿಷ್ಟ್ಯತೆಯನ್ನು ಅತಿಥಿಗಳನ್ನು ಕರೆಯಿಸಿ ಅವರಿಂದ ಉಪನ್ಯಾಸಗಳನ್ನು ನಡೆಸುತ್ತಾ ಬಂದಿದೆ ಎಂದರು.
ಮಹಿಳಾಶ್ರಮದ ಕಾರ್ಯದರ್ಶಿ ವಸುಧಾಹರೀಶ್ ವಾರ್ಷಿಕ ವರದಿ ಮಂಡಿಸಿದ್ದು, ಖಜಾಂಚಿ ಜಯಶ್ರೀ ಜೋಷಿ ಲೆಕ್ಕಪತ್ರ ಮಂಡಿಸಿ. ಸಹಕಾರ್ಯದರ್ಶಿ ಸುಮಿತ್ರಾಶಾಸ್ತ್ರಿ ವಂದಿಸಿದರು. ನಿರ್ದೇಶಕರುಗಳಾದ ಶುಭಆಶ್ವಿನ್ ಸ್ವಾಗತಿಸಿ, ಅನುರಾಧಅಶೋಕ ಕಾರ್ಯಕ್ರಮ ನಿರೂಪಿಸಿ. ಸಂಧ್ಯಾಪ್ರಸಾದ್ ಹಿಂದಿನಮಹಾಸಭೆಯ ನಡವಳಿಕೆ ಓದಿದರು. ರಮಾಸತೀಶ್ ವಾರ್ಷಿಕ ಮಹಾಸಭೆಯ ಆಹ್ವಾನಪತ್ರಿಕೆ ಓದಿದರು. ನಿರ್ದೇಶಕರುಗಳಾದ ಆರುಂಧತಿ, ಸಂಧ್ಯಾ,ಶಾಲೆಯ ವ್ಯವಸ್ಥಾಪಕಿ ವಾಸಂತಿಪೈ ಮತ್ತಿತರರು ಉಪಸ್ಥಿತರಿದ್ದರು.

Related posts

ಅತಿ ವೇಗದಲ್ಲಿ ಕರಗುತ್ತಿದೆ ಹಿಮ: ಎದುರಾಯ್ತು ಅಪಾಯದ ಆತಂಕ.

ಇಸ್ರೇಲ್‌ ದಾಳಿ ಗಾಜಾ ಪಟ್ಟಿಯ 4 ಲಕ್ಷ ಜನ ವಲಸೆ: 5100ಕ್ಕೂ ಹೆಚ್ಚು ಜನ ಸಾವು…

ರಾಜ್ಯದಲ್ಲಿ ಡೆಂಗ್ಯೂ ಭೀತಿ: 10,500ಕ್ಕೂ ಹೆಚ್ಚು ಪ್ರಕರಣಗಳು ದಾಖಲು.