ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸರ್ಕಾರಿ ಜಾಗಗಳಲ್ಲಿ ಅಂಗನವಾಡಿಗಳನ್ನು ನಿರ್ಮಿಸಬೇಕು:ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಮನವಿ

ಶಿವಮೊಗ್ಗ: ಸರ್ಕಾರಿ ಜಾಗಗಳಲ್ಲಿ ಅಂಗನವಾಡಿಗಳನ್ನು ನಿರ್ಮಿಸಬೇಕು ಎಂದು ಶಿವಮೊಗ್ಗ ಪೀಸ್ ಆರ್ಗನೈಜೇಷನ್ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಗೆ ಹೊಸದಾಗಿ ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿದೆ. ನಗರದ ವಾರ್ಡ್‍ಗಳಲ್ಲಿ ಕೂಡ ಅಂಗನವಾಡಿ ಕೇಂದ್ರಗಳನ್ನು ತೆರೆಯಬಹುದಾಗಿದೆ. ಆದರೆ ವಾರ್ಡ್‍ವಾರುಗಳಲ್ಲಿ ಸರ್ಕಾರಿ ಜಾಗಗಳಿದ್ದರೂ ಕೂಡ ಅಧಿಕಾರಿಗಳು ಪರಿಶೀಲನೆ ಮಾಡದೆ ಬಾಡಿಗೆ ಕಟ್ಟಡಗಳಲಿಲ್ಲ ಅಂಗನವಾಡಿ ನಡೆಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂದು ಮನವಿದಾರರು ತಿಳಿಸಿದ್ದಾರೆ.
ನಗರದ 31ನೇ ವಾರ್ಡಿನಲ್ಲಿ ಬೇಕಾದಷ್ಟು ಸರ್ಕಾರಿ ಜಾಗಗಳಿವೆ. ಆದರೆ ಅದನ್ನು ಬಿಟ್ಟು ಶಾರದಾನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಜೊತೆಗೆ ಇಲಿಯಾಜ್, ನಗರ, ಚಾಲುಕ್ಯ ನಗರ, ಆರ್‍ಎಂಎಲ್ ನಗರ, ಹಳೇಮಂಡ್ಲಿ ಮುಂತಾದ ಭಾಗಗಳಲ್ಲಿ ಕೂಡ ಸರ್ಕಾರಿ ಜಾಗವಿದೆ. ಆದ್ದರಿಂದ ಈ ಜಾಗಗಳಲ್ಲಿ ಅಂಗನವಾಡಿ ಸ್ಥಾಪಿಸಿ ಮೂಲ ಸೌಲಭ್ಯ ಒದಗಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ರಿಯಾಜ್ ಅಹ್ಮದ್, ಸಯ್ಯದ್ ಶಫಿವುಲ್ಲಾ, ಜಹೀರ್, ಆದಿಲ್ ಪಾಶಾ, ಇಮ್ರಾನ್ ಖಾನ್ ಇದ್ದರು.

Related posts

ಇದೊಂದು ಐತಿಹಾಸಿಕ ದಿನ: ಗೃಹಲಕ್ಷ್ಮಿ ಯೋಜನೆ ಚಾಲನೆಗೂ ಮುನ್ನ ಸಿಎಂ ಸಿದ‍್ಧರಾಮಯ್ಯ ಟ್ವೀಟ್.

ಸುಲಭ ಶೌಚಾಲಯ ಸಂಸ್ಥಾಪಕ ಬಿಂದೇಶ್ವರ ಪಾಠಕ್ ನಿಧನ: ಸಂತಾಪ ಸೂಚಿಸಿದ ಸಚಿವ ಎಚ್.ಕೆ ಪಾಟೀಲ್. 

ವಿಪಕ್ಷ ನಾಯಕರ ಆಯ್ಕೆ ವಿಚಾರ: ಶಾಸಕರ ಅಭಿಪ್ರಾಯ ಪಡೆದು ತೀರ್ಮಾನ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.