ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿದ್ಯಾರ್ಥಿಗಳಿಗಾಗಿ ಕಸಾಪ ದಿಂದ ಕಥಾ ಸಂಭ್ರಮಕ್ಕೆ ಆಹ್ವಾನ

ಶಿವಮೊಗ್ಗ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರೌಢಶಾಲೆಯಿಂದ ಪಿ.ಯು, ಪದವಿ, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ಸೇರಿದಂತೆ ಹೊಸತಲೆಮಾರಿಗೆ ಸಾಹಿತ್ಯ ಅಭಿರುಚಿ ಮೂಡಿಸುವ ಸಲುವಾಗಿ ರಾಜ್ಯೋತ್ಸವ ವಿದ್ಯಾರ್ಥಿ ಕಥಾ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಉತ್ತಮ ಕಥೆಗಳಿಗೆ ಬಹುಮಾನವಿದ್ದು, ಕಥಾ ಗೋಷ್ಠಿಯಲ್ಲಿ ಕಥೆ ಹೇಳಲು ಅವಕಾಶ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತಿಯಿರುವವರು ಕನಿಷ್ಟ ಒಂದು ಪುಟ, ಗರಿಷ್ಠ ಎರಡು ಪುಟ ಮೀರದಂತೆ ಕಥೆ ಬರೆಯಲು ಅವಕಾಶವಿದೆ. ಪ್ರಚಲಿತ ವಿದ್ಯಮಾನಗಳು  ಕಥೆಯ ವಸ್ತುವಾಗಿ ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿದೆ. ನಾಡು, ನುಡಿ, ಪ್ರಕೃತಿ, ವ್ಯವಸ್ಥೆ, ಶಿಕ್ಷಣ, ಆಡಳಿತ, ಸುಳ್ಳು, ಮೋಸ, ವಂಚನೆ, ಭ್ರಷ್ಟಾಚಾರ, ಬಡತನ, ಮಳೆ, ಬೆಳೆ, ನೀರು, ಯುದ್ಧ, ಬರಗಾಲ, ನಿರುದ್ಯೋಗ, ಅಸಮಾನತೆ, ಕೌರ್ಯ ಇವೆಲ್ಲವೂ ದೂರವಾಗಿಸಿ ಸಮ ಸಮಾಜದ ನಿರ್ಮಾಣದಲ್ಲಿ ನಮ್ಮ ಯುವಜನರು ನಿರ್ವಹಿಸಬಹುದಾದ ಚಿತ್ರಣಗಳು ಕಥೆ ಒಳಗೊಂಡರೆ ಉತ್ತಮ. ಕಥೆ ಬರೆದು ಅಕ್ಟೋಬರ್ 30 ರ ಒಳಗಾಗಿ ಡಿ. ಮಂಜುನಾಥ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಶಿವಮೊಗ್ಗ, ದೂರವಾಣಿ 9449552795 ತಲುಪಿಸಲು ಕೋರಲಾಗಿದೆ.

Related posts

ಎಲ್ಲ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನ ಪೂರ್ಣಗೊಳಿಸಿ: ಹೈಕೋರ್ಟ್ ನಿರ್ದೇಶನ

ಪಠ್ಯಕ್ರಮದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತ ಕಾರ್ಯಕ್ರಮ ಸೆ. 30ಕ್ಕೆ

ಮೈತ್ರಿಗೆ ವಿರೋಧಿಸಿದ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಸಿ.ಟಿ ರವಿ