ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಶೇ.14ರಷ್ಟು ಯುವಜನರು ಪಾರ್ಶ್ವವಾಯು ಪೀಡಿತ: ಆತಂಕಕಾರಿ ವರದಿ ಬಹಿರಂಗ.

ಬೆಂಗಳೂರು: ಇತ್ತಿಚೀನ ದಿನಗಳಲ್ಲಿ ಅನಿಯಮಿತ ಆಹಾರ, ಜಂಕ್ ಫುಡ್ ಗಳ ಸೇವನೆ ಆಹಾರ ಪದ್ದತಿಯಲ್ಲಿ ಬದಲಾವಣೆಯಾಗುತ್ತಿದೆ. ಅಂತೆಯೇ ರೋಗಗಳು ಸಹ ಹೆಚ್ಚಾಗಿ ಚಿಕ್ಕ ಚಿಕ್ಕಮಕ್ಕಳು ಯುವಜನತೆಯಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬಿಪಿ ಶುಗರ್, ಹೃದಯಾಘಾತದಂತಹ ಕಾಯಿಲೆ ಹೆಚ್ಚಾಗಿದೆ. 

ಈ ಮಧ್ಯೆ ಶೇ. 14ರಷ್ಟು ಮಂದಿ ಯುವಜನತೆ ದೇಶದಲ್ಲಿ ವಾರ್ಷಿಕ ಪಾರ್ಶ್ವವಾಯು ಪೀಡಿತರಾಗಿದ್ದಾರೆ ಎನ್ನುವ ಆಘಾಕಾರಿ ಮಾಹಿತಿಯನ್ನು ಬಹಿರಂಗವಾಗಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಈ ಮಾಹಿತಿಯನ್ನು ನೀಡಿದ್ದು, ಇದಕ್ಕೆ ಪ್ರಮುಖವಾಗಿ ಕಾರಣ, ಧೂಮಪಾನ, ಮದ್ಯಪಾನ, ಡ್ರಗ್ ವ್ಯಸನವೇ ಹೆಚ್ಚಳವಾಗುತ್ತಿರುವುದು ಅಂತ ತಿಳಿಸಿದೆ.

ಪಾರ್ಶ್ವವಾಯು ಸಮಸ್ಯೆಯು ಪ್ರಮುಖ ಮರಣ ಕಾರಣದಲ್ಲಿ ನಾಲ್ಕನೇ ಹಾಗೂ ಅಂಗವಿಕಲತೆಯಲ್ಲಿ ಐದನೇ ಸ್ಥಾನದಲ್ಲಿದೆಯಂತೆ. ಇದಲ್ಲದೇ ಒಂದು ಲಕ್ಷ ಜನರಲ್ಲಿ 119ರಿಂದ 145 ಜನರು ಈ ಕಾಯಿಲೆಗೆ ಒಳಗಾಗುತ್ತಿದ್ದು, ವಾರ್ಷಿಕ 1 ಲಕ್ಷ ಪಾರ್ಶ್ವವಾಯು ರೋಗಿಗಳ ಪೈಕಿ 73 ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದೆ.

ಮಧುಮೇಹ, ಧೂಮಪಾನ, ಮದ್ಯಪಾನ, ಕಳಪೆ ಆಹಾರ ಪದ್ಧತಿ, ಕಡಿಮೆ ದೈಹಿಕ ಚಟುವಟಿಕೆ, ಒತ್ತಡ, ಖಿನ್ನತೆ ವಿವಿಧ ಕಾರಣಗಳಿಂದ ಪಾರ್ಶ್ವ ವಾಯು ಉಂಟಾಗುತ್ತಿದ್ದು, ಪಾರ್ಶ್ವವಾಯುವಿಗೆ ತುತ್ತಾದಾಗ ಸಮಯ ಪ್ರಜ್ಞೆ ಬಹಳ ಮುಖ್ಯವಾಗಿದ್ದು. ಇದರ ಜೊತೆಗೆ ಆರೈಕೆ ಹಾಗೂ ಸರಿಯಾದ ಸಮಯಕ್ಕೆ ಸಮರ್ಪಕವಾದ ಚಿಕಿತ್ಸೆ ಸಿಕ್ಕರೆ ವ್ಯಕ್ತಿ ಗುಣಮುಖವಾಗಲು ಸಾಧ್ಯ ಅಂತ ಇದೇ ವೇಳೆ ಹೇಳಲಾಗಿದೆ.

 

Related posts

ರಾಜ್ಯದಲ್ಲಿ 5 ದಿನಗಳ ಕಾಲ ಮಳೆ : ಹವಮಾನ ಇಲಾಖೆ ಮುನ್ಸೂಚನೆ.

ಇಂದು ಕಾಂಗ್ರೆಸ್ ಸೇರಲಿದ್ದಾರೆ ಶಿವಮೊಗ್ಗದ  ಜೆಡಿಎಸ್ ಮತ್ತು ಬಿಜೆಪಿ ಮುಖಂಡರು.

ಮಂಡ್ಯ ಬಿಜೆಪಿ ಟಿಕೆಟ್‌ ಸಿಗದಿದ್ರೆ ಪಕ್ಷೇತರ ಸ್ಪರ್ಧೆ: ಸುಮಲತಾ ಅಂಬರೀಷ್‌

TOD News