ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹೃದಯ ಮಿಡಿದ ಘಟನೆ: ಶಿವಮೊಗ್ಗದಲ್ಲಿ ಇನ್‍ ಸ್ಪೆಕ್ಟರ್ ಆದ 8 ವರ್ಷದ ಬಾಲಕ..

ಶಿವಮೊಗ್ಗ : ಹೃದಯ ಮಿಡಿದ ಘಟನೆಯೊಂದು ನಿನ್ನೆ ಸಂಜೆ ದೊಡ್ಡಪೇಟೆ ಠಾಣೆಯಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಮುಂದೆ ಸಾಕ್ಷಿಯಾಯಿತು.
ಕೇವಲ ಎಂಟೂವರೆ ವರ್ಷದ ಹೃದಯ ಸಂಬಂಧಿ ಕಾಯಿಲೆಗ ಇರುವ ಬಾಲಕನೊಬ್ಬ ದೊಡ್ಡಪೇಟೆ ಠಾಣೆ ಇನ್‍ಸ್ಪೆಕ್ಟರ್ ಆಗಿ ಒಂದು ಗಂಟೆ ಕಾರ್ಯನಿರ್ವಹಿಸಿ ಹಲವು ವೈಶಿಷ್ಟ್ಯಗಳಿಗೆ ನಾಂದಿ ಹಾಡಿದ್ದಾನೆ.
ಮೂಲತಃ ಶಿವಮೊಗ್ಗ ನಗರದ ಸೂಳೆಬೈಲ್ ನಿವಾಸಿ ಹಾಗೂ ಹಾಲಿ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿ ವಾಸವಾಗಿರುವ ತಬ್ರೇಜ್ ಖಾನ್ ದಂಪತಿಯ ದ್ವಿತೀಯ ಪುತ್ರ ಆಜಾನ್ ಖಾನ್ ದೊಡ್ಡಪೇಟೆ ಠಾಣೆ ಇನ್‍ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ ಬಾಲಕ.
ಮೂರು ತಿಂಗಳ ಮಗು ಇದ್ದಾಗಲೇ ಅಜಾನ್ ಖಾನ್‍ಗೆ ಈ ಕಾಯಿಲೆ ಕಂಡುಬಂದಿತ್ತು. ಸ್ಥಳೀಯ ವೈದ್ಯರ ಬಳಿ ತೋರಿಸಲಾಗಿತ್ತು. 8 ವರ್ಷದ ಬಳಿಕ ಮತ್ತೊಂದು ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದರು. ಅದರಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೂಡ ಮಾಡಿಸಲಾಯಿತು. ಹೃದಯ ಮತ್ತು ಶ್ವಾಸಕೋಶವನ್ನು ಒಟ್ಟಿಗೆ ಕಸಿ ಮಾಡಬೇಕಿದೆ. ಆಜಾನ್ ಖಾನ್‍ನ ವಯಸ್ಸಿನ ದಾನಿಗಳಿಗೆ ಪಾಲಕರು ಹುಡುಕಾಟ ನಡೆಸುತ್ತಿದ್ದಾರೆ.
ಇದೀಗ ಬಾಲಕ ತನ್ನ ಆಸೆಯಂತೆ ಒಂದು ಗಂಟೆ ಖಾಕಿ ತೊಟ್ಟು ಸಂಭ್ರಮಪಟ್ಟಿದ್ದಾನೆ. ಇದಕ್ಕೆ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಮಿಥುನ್ ಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ.
ಪೆÇಲೀಸ್ ಇನ್‍ಸ್ಪೆಕ್ಟರ್ ಸಮವಸ್ತ್ರ ಧರಿಸಿ ಜೀಪ್‍ನಲ್ಲಿ ಠಾಣೆಗೆ ಆಗಮಿಸಿದ ಅಜಾನ್ ಖಾನ್‍ಗೆ ಎಸ್ಪಿ ಜಿ.ಕೆ.ಮಿಥುನ್‍ಕುಮಾರ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಇನ್‍ಸ್ಪೆಕ್ಟರ್ ಖುರ್ಚಿಯಲ್ಲಿ ಆಸೀನನಾಗಿ ಐಪಿಸಿ ಸೆಕ್ಷನ್‍ಗೆ ಸಂಬಂಧಿಸಿದ ಪುಸ್ತಕದ ಕೆಲ ಹಾಳೆಗಳನ್ನು ತಿರುವಿ ಹಾಕಿ ಬಾಲಕ ಪೆÇಲೀಸ್ ಅಧಿಕಾರಿಯಂತೆಯೇ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸಂತಸ ಪಟ್ಟ. ನಂತರ ಸಮಸ್ಯೆಗಳನ್ನು ಆಲಿಸಿ ಒಬ್ಬರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡಿದ್ದಲ್ಲದೆ, ಸೆಲ್‍ಗಳನ್ನು ಪರಿಶೀಲಿಸಿದ್ದು ವಿಶೇಷವಾಗಿತ್ತು.
ಚೆನ್ನಾಗಿ ಓದಿ ಮುಂದೆ ನಾನು ಪೆÇಲೀಸ್ ಇನ್‍ಸ್ಪೆಕ್ಟರ್ ಆಗುತ್ತೇನೆ. ಪೆÇಲೀಸ್ ಅಧಿಕಾರಿ ಆಗುವುದು ನನ್ನ ಕನಸು. ಪೆÇಲೀಸ್ ಇಲಾಖೆಗೆ ಸೇರಿ ಕಳ್ಳರನ್ನು ಮಟ್ಟಹಾಕುತ್ತೇನೆ. ಕಳ್ಳರು ಸಿಕ್ಕರೆ ಶಿಕ್ಷಿಸುತ್ತೇನೆ. ದೇಶಸೇವೆ ಮಾಡುವುದು ನನ್ನ ಕನಸು.ಇನ್‍ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ಖುಷಿಯಾಯಿತು. ರಿಯಲ್ ಪೆÇಲೀಸ್ ತರಹ ಕಾಣುತ್ತೇನೆ. ದೊಡ್ಡವನಾದ ಮೇಲೆ ಎಸ್ಪಿ ಆಗುತ್ತೇನೆ ಎಂದು ಆಜಾನ್ ಖಾನ್ ಮುಂದಿನ ಕನಸನ್ನು ಬಿಚ್ಚಿಟ್ಟ.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ಮಾತನಾಡಿ, ಆಜಾನ್ ಖಾನ್ ತಂದೆ-ತಾಯಿ ಶಿವಮೊಗ್ಗದವರು. ಈಗ ಬಾಳೆಹೊನ್ನೂರಿನಲ್ಲಿ ನೆಲೆಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ,ಪೆÇಲೀಸ್ ಇನ್‍ಸ್ಪೆಕ್ಟರ್ ಆಗಬೇಕೆಂದು ಹಂಬಲಿಸುತ್ತಿರುವ ಬಗ್ಗೆ ಪಾಲಕರು ಮನವಿ ಮಾಡಿದ್ದರು. ವೈಯಕ್ತಿಕ ಮತ್ತು ಇಲಾಖೆಯಿಂದ ಆತನಿಗೆ ಅವಕಾಶ ಕೊಟ್ಟಿದ್ದು ಖುಷಿಯಾಗಿದೆ ಎಂದರು.
ಬಾಲಕನ ತಂದೆ ತಾಬ್ರೇಜ್ ಖಾನ್, ಮಗ ಇನ್‍ಸ್ಪೆಕ್ಟರ್ ಆಗುವ ಕನಸು ಕಂಡಿದ್ದ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ನಟ ಸುದೀಪ್ ಅವರನ್ನು ಭೇಟಿಯಾಗುವ ಕನಸು ಕಂಡಿದ್ದ. ಅವರ ಆಸೆಯಂತೆ ಸುದೀಪ್ ಮನೆಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದೆವು. ಇನ್‍ಸ್ಪೆಕ್ಟರ್ ಆಗಬೇಕು ಎಂದಿದ್ದ. ಹೃದಯ ಮತ್ತು ಶ್ವಾಸಕೋಶದ ಕಸಿ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪೆÇಲೀಸ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಬಿವೈ ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದೂ ಬೇಡ- ಮತ್ತೆ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್

ಶಕ್ತಧಾಮದಲ್ಲಿ ಮಕ್ಕಳ ಜತೆ 77ನೇ ಸ್ವಾತಂತ್ರ್ಯೋತ್ಸವ ಆಚರಿಸಿ ಸಂಭ್ರಮಿಸಿದ ನಟ ಶಿವರಾಜ್ ಕುಮಾರ್ ದಂಪತಿ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ.