ಕನ್ನಡಿಗರ ಪ್ರಜಾನುಡಿ
ಜಿಲ್ಲೆದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯಶಿವಮೊಗ್ಗ

ಅಖಿಲ ಭಾರತ ಕರಾಟೆ ಪಂದ್ಯಾವಳಿ: ಚಿನ್ನ, ಬೆಳ್ಳಿ, ಕಂಚು ಪದಕ ಗೆದ್ದು ಹೆಮ್ಮೆ ತಂದ ಕರಾಟೆಪಟುಗಳು

ಶಿವಮೊಗ್ಗ: ಉತ್ತರ ಪ್ರದೇಶದ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಜಿಲ್ಲೆಯ ಉತ್ತರ ಕನ್ನಡ ಜಿಲ್ಲೆಯ ಕರಾಟೆ ಪಟುಗಳು ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಪಡೆದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಶಾಶ್ವತ್ ಹೆಗ್ಡೆ ಬಾಲಕರ 8 ವರ್ಷದೊಳಗಿನ ವಿಭಾಗದ ಕುಮಿಟೆಯಲ್ಲಿ ಚಿನ್ನದ ಪದಕ, ಕಟಾದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಶರತ್ ಹೆಗ್ಡೆ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಎರದು ಚಿನ್ನದ ಪದಕ ಪಡೆದಿದ್ದಾರೆ.
12 ವರ್ಷದೊಳಗಿನ ವಿಭಾಗದಲ್ಲಿ ವಿ. ಅರ್ಜುನ್ ಕುಮಿಟೆಯಲ್ಲಿ ಚಿನ್ನ, ಕಟಾದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಷಣ್ಮುಖ ಜಿ.ಎನ್. ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.
ವಿಜೇತ ಕರಾಟೆಪಟುಗಳಿಗೆ ಶಿವಮೊಗ್ಗ ಜಿಲ್ಲಾ ಸ್ಪೋಟ್ರ್ಸ್ ಕರಾಟೆ ಡೋ ಅಸೋಸಿಯೇಷನ್ ಚೇರ್ಮನ್ ಚಂದನ್ ಎಂ. ಪಟೇಲ್, ಕುಮಾರ್ ವಿ. ನಾಯ್ಡು, ತರಬೇತುದಾರ ಹಾಗೂ ಸಂಸ್ಥೆಯ ಅಧ್ಯಕ್ಷ ಚಂದ್ರಕಾತ್ ಜಿ. ಭಟ್ ಅಭಿನಂದನೆ ಸಲ್ಲಿಸಿದ್ದಾರೆ.

Related posts

ಕರಡು ಮತದಾರರ ಪಟ್ಟಿ ಪ್ರಕಟ : ಆಕ್ಷೇಪಣೆ ಸಲ್ಲಿಕೆಗೆ ಅವಧಿ ನಿಗದಿ

ನಿಯಮ ಪಾಲಿಸದ, ವೈದ್ಯಕೀಯ ಅನುಮತಿ ಪಡೆಯದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ -ಮೈಸೂರು ಡಿಹೆಚ್​ಓ

TOD News

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ