ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ ಚಂದ್ರನಿಂದ ಮಣ್ಣಿನ ಮಾದರಿ ತರಲು ಇಸ್ರೋ ಪ್ಲಾನ್: ಮುಂದಿನ ಯೋಜನೆಗೆ ಸಿದ್ದತೆ.

ಪುಣೆ: ಚಂದ್ರಯಾನ-3 ಉಡಾಯಿಸಿ ಅತ್ಯಂತ ಯಶಸ್ವಿಯಾಗಿರುವ ವಿಶ್ವದೆಲ್ಲೆಡೆ ಭಾರತ ದೇಶದ ಕೀರ್ತಿ ಪಸರಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೀಗ ತನ್ನ ಮುಂದಿನ ಯೋಜನೆ ಚಂದ್ರಯಾನ-4 ಕಡೆ ಗಮನ ನೀಡುತ್ತಿದೆ.

ಚಂದ್ರನಿಂದ ಮಣ್ಣಿನ ಮಾದರಿಗಳನ್ನು ಮರಳಿ ಭೂಮಿಗೆ ತರಲು ಇಸ್ರೋ ಪ್ಲಾನ್ ರೂಪಿಸಿದ್ದು  ಈ ಕಾರ್ಯಾಚರಣೆಗೆ ಸಿದ್ದತೆ ನಡೆಸುತ್ತಿದೆ. ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತವನ್ನು ಮುಂಚೂಣಿಯಲ್ಲಿರುವ ದೇಶಗಳ ಪೈಕಿ ಅಗ್ರಸ್ಥಾನಕ್ಕೆ ಏರಿಸಲಿದೆ.

ಚಂದ್ರಯಾನ-4 ಮಿಷನ್ ಚಂದ್ರನ ಮೇಲ್ಮೈಯಿಂದ ಮಣ್ಣಿನ ಮಾದರಿಯನ್ನು ಮರಳಿ ತರುವ ಗುರಿಯನ್ನು ಹೊಂದಿದೆ ಎಂದು ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್ಎಸಿ) ನಿರ್ದೇಶಕ ನಿಲೇಶ್ ದೇಸಾಯಿ ಹೇಳಿದರು.

ಪುಣೆಯಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯ 62 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್ಎಸಿ) ನಿರ್ದೇಶಕ ನಿಲೇಶ್ ದೇಸಾಯಿ, ಈ ಮಿಷನ್ನಲ್ಲಿ ಲ್ಯಾಂಡಿಂಗ್ ಚಂದ್ರಯಾನ-3 ರಂತೆಯೇ ಇರುತ್ತದೆ. ಚಂದ್ರಯಾನ-4ರ ಕೇಂದ್ರ ಘಟಕವು ಚಂದ್ರನ ಸುತ್ತ ಸುತ್ತುತ್ತಿರುವ ಮಾಡ್ಯೂಲ್ನೊಂದಿಗೆ ಇಳಿದ ನಂತರ ಹಿಂತಿರುಗಲಿದೆ ಎಂದು ಹೇಳಿದರು.

ಚಂದ್ರನ ಸುತ್ತ ಸುತ್ತುತ್ತಿರುವ ಮಾಡ್ಯೂಲ್ ನೊಂದಿಗೆ ಇಳಿದ ನಂತರ ಇದು ಭೂಮಿಯ ವಾತಾವರಣದ ಬಳಿ ಪ್ರತ್ಯೇಕಗೊಳ್ಳುತ್ತದೆ. ಇದರೊಂದಿಗೆ, ಮರು-ಪ್ರವೇಶ ಮಾಡ್ಯೂಲ್ ಚಂದ್ರನ ಕಲ್ಲು ಮತ್ತು ಮಣ್ಣಿನ ಮಾದರಿಗಳೊಂದಿಗೆ ಹಿಂತಿರುಗುತ್ತದೆ. ಇದು ಬಹಳ ಮಹತ್ವಾಕಾಂಕ್ಷೆಯ ಮಿಷನ್. ಮುಂದಿನ ಐದರಿಂದ ಏಳು ವರ್ಷಗಳಲ್ಲಿ ನಾವು ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ತರುವ ಈ ಸವಾಲನ್ನು ಪೂರ್ಣಗೊಳಿಸುತ್ತೇವೆ ಎಂದು ಯೋಜನೆ ಹಾಕಲಾಗಿದೆ. ಈ ಮಿಷನ್ ಚಂದ್ರಯಾನ-3 ಗಿಂತ ಹೆಚ್ಚು ಸವಾಲಾಗಿದೆ ಎಂದು ಹೇಳಿದರು.

ಚಂದ್ರಯಾನ-3 30 ಕೆಜಿಯ ರೋವರ್ ಇತ್ತು, ಆದರೆ ಚಂದ್ರಯಾನ-4ರಲ್ಲಿ 350 ಕೆಜಿ ಭಾರದ ರೋವರ್ ಅನ್ನು ಉಡಾವಣೆ ಮಾಡುವ ಯೋಜನೆ ಇದೆ. ಇದು ಇಸ್ರೋಗೆ ಸವಾಲನ್ನು ಹೆಚ್ಚಿಸಿದೆ. ಚಂದ್ರಯಾನ-4 ಮಿಷನ್ ಚಂದ್ರನ ಅಂಚಿನಲ್ಲಿ ನಿಖರವಾಗಿ ಲ್ಯಾಂಡಿಂಗ್ ಮಾಡುವ ಗುರಿಯನ್ನು ಹೊಂದಿದೆ, ಈ ಪ್ರದೇಶವನ್ನು ಇನ್ನೂ ಅನ್ವೇಷಿಸಲಾಗಿಲ್ಲ. ರೋವರ್ನ ಹುಡುಕಾಟ ಪ್ರದೇಶವು 1 ಕಿ.ಮೀ. x 1 ಕಿ.ಮೀ. ಇದು ಚಂದ್ರಯಾನ-3 ರ 500 ಮೀಟರ್ x 500 ಮೀಟರ್ಗಿಂತ ದೊಡ್ಡದಾಗಿರುತ್ತದೆ. ಚಂದ್ರಯಾನ-4ರ ಯಶಸ್ಸು ಚಂದ್ರನ ಮಣ್ಣಿನ ಮಾದರಿಗಳನ್ನು ಭೂಮಿಗೆ ಹಿಂದಿರುಗಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.

ಈ ಕಾರ್ಯಾಚರಣೆಯಲ್ಲಿ, 350 ಕೆಜಿ ತೂಕದ ರೋವರ್ ಚಂದ್ರನ ಮೇಲ್ಮೈಯಲ್ಲಿ 90 ಡಿಗ್ರಿಗಳಷ್ಟು ಪ್ರದೇಶಗಳನ್ನು ಅನ್ವೇಷಿಸಲಿದೆ.

 

Related posts

ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಉತ್ಸವ :  ರಕ್ತದಾನ ಮಾಡಿ ವೈಶಿಷ್ಟ್ಯ ಮೆರೆದ ಸಿಬ್ಬಂದಿಗಳು.

ರಾಜ್ಯ ಸರ್ಕಾರಕ್ಕೆ ನೂರು ದಿನ: ಸಿಎಂ ಸಿದ್ಧರಾಮಯ್ಯ ಸಂತಸ.

ಎಎಪಿಯಿಂದ ಸ್ಪರ್ಧಿಸಿದ್ದ ಮೂವರು ನಾಳೆ ಕಾಂಗ್ರೆಸ್ ಸೇರ್ಪಡೆ.