ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಆದಿತ್ಯ ಎಲ್ -1 ಉಡಾವಣೆ ವೀಕ್ಷಿಸಿ ಖುಷಿಪಟ್ಟು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ ಶಾಲೆಯ ವಿದ್ಯಾರ್ಥಿಗಳು

ಶಿವಮೊಗ್ಗ: ಸೂರ್ಯನ ಅಧ್ಯಯನಕ್ಕೆ ತೆರಳಿದ ಬಾಹ್ಯಾಕಾಶ ನೌಕೆಯನ್ನು ಇಂದು ಇಸ್ರೋಯಿಂದ ಉಡಾವಣೆ ಮಾಡಲಾಯಿತು. ಪ್ರಿಯದರ್ಶಿನಿ ಶಾಲೆಯ ವಿದ್ಯಾರ್ಥಿಗಳು ಆದಿತ್ಯ ಎಲ್ -1 ಬಾಹ್ಯಾಕಾಶ ನೌಕೆಯ ಉಡಾವಣೆ ವೀಕ್ಷಿಸಿ ಸಂತಸ ಪಟ್ಟರು ಹಾಗೂ ಈ ನೌಕೆಯ ನಡೆ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಸೂರ್ಯನ ಅಧ್ಯಯನದ ಕನಸುಗಳನ್ನು ಹೊತ್ತು ನಭಕ್ಕೆ ಜಿಗಿದ ಆದಿತ್ಯ ಎಲ್-1 ನೌಕೆ ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಮಿಷನ್ ಆಗಿರುತ್ತದೆ. ಈ ಬಾಹ್ಯಾಕಾಶ ನೌಕೆ ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ. ದೂರದಲ್ಲಿರುವ ಸೂರ್ಯನನ್ನು ಈ ನೌಕೆ ಅಧ್ಯಯನ ಮಾಡಲಿದೆ ಎಂದು ಹೇಳುವ ಮೂಲಕ ಶುಭ ಹಾರೈಸಿದರು.

Related posts

ಲಕ್ಷಾಂತರ ಹೋರಾಟಗಾರರ ಶ್ರಮದಿಂದ ದೇಶ ಸ್ವತಂತ್ರ- ಜ್ಯೋತಿಕುಮಾರಿ ಕೆ.ವಿ. 

ವಾಯುಮಾಲಿನ್ಯದ ಎಫೆಕ್ಟ್: ಭಾರತೀಯರ ಸರಾಸರಿ ಆಯಸ್ಸು 5 ವರ್ಷ ಕಡಿತ

ಭಾರತಕ್ಕೆ ಕಾಲಿಡಲಿದೆ ʻಇ-ಏರ್ ಟ್ಯಾಕ್ಸಿʼ: ಇನ್ಮುಂದೆ ಕೇವಲ 7 ನಿಮಿಷಗಳಲ್ಲೇ ಸಾಧ್ಯ ಒಂದುವರೆ ಗಂಟೆ ಪ್ರಯಾಣ..