ಕನ್ನಡಿಗರ ಪ್ರಜಾನುಡಿ
ಕ್ರೈಮ್ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಶಾಲೆಯ ಬಹುಗ್ರಾಮ ಕುಡಿಯುವ ನೀರಿಗಾಗಿ ಸಂಗ್ರಹಿಸಿಟ್ಟಿದ್ದ ಪೈಪ್‍ ಕಳ್ಳತನ: ಆರೋಪಿ ಬಂಧನ.

ಶಿವಮೊಗ್ಗ: ಶಾಲೆಯ ಬಹುಗ್ರಾಮ ಕುಡಿಯುವ ನೀರಿಗಾಗಿ ಸಂಗ್ರಹಿಸಿ ಇಟ್ಟಿದ್ದ ಪೈಪ್‍ಗಳನ್ನ ಕಳವು ಮಾಡಿದ ಪ್ರಕರಣವನ್ನು ಸಾಗರ ಗ್ರಾಮಾಂತರ ಪೆÇಲೀಸರು ಬೇಧಿಸಿ ಓರ್ವನನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಪೈಪ್‍ಗಳು ಮತ್ತು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಸಾಗರ ತಾಲ್ಲೂಕಿನ ಹೆಗ್ಗೋಡಿನ ಕೇಡಲಸರ ಶಾಲಾ ಆವರಣದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಳವಡಿಸಲು ಸಂಗ್ರಹಿಸಿಟ್ಟಿದ್ದ ಪೈಪ್‍ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆಯ ಬಗ್ಗೆ ಪ್ರಾಜೆಕ್ಟ್ ಮ್ಯಾನೇಜರ್ ಕೃಷ್ಣಪ್ರಸಾದ್ ಸಾಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಾಗರದ ಪೆÇಲೀಸ್ ಉಪಾಧೀಕ್ಷಕರು ಗೋಪಾಲಕೃಷ್ಣ ಟಿ. ನಾಯ್ಕ, ಮೇಲ್ವಿಚಾರಣೆಯಲ್ಲಿ, ಪಿಐ ಮಹಾಬಲೇಶ್ವರ, ಪಿಎಸ್‍ಐ ನಾರಾಯಣ ಮಧುಗಿರಿ ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ, ಸನಾವುಲ್ಲಾ, ಫೈರೋಜ್ ಅಹಮದ್ ಮತ್ತು ಸಿಪಿಸಿ ರವಿಕುಮಾರ್‍ರವರÀನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ಹೊಸೂರು ಗ್ರಾಮದ ನಿವಾಸಿ ವೇಗರಾಜ್ (40), ನನ್ನು ಬಂಧಿಸಿ ಆತನಿಂದ ಅಂದಾಜು 1,15,000 ರೂ. ಮೌಲ್ಯದ ಪೈಪ್ ಬಂಡಲ್, ಕೃತ್ಯಕ್ಕೆ ಬಳಸಿದ ಟಾಟಾ ಸೂಪರ್ ಏಸ್ ಮಿಂಟ್ ವಾಹನ ವಶಪಡಿಸಿಕೊಂಡಿದೆ.

Related posts

ದಸರಾ ಮೆರವಣಿಗೆಯಲ್ಲಿ ಆನೆಯ ಮಾವುತರು ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವ.

ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಉತ್ಸವ :  ರಕ್ತದಾನ ಮಾಡಿ ವೈಶಿಷ್ಟ್ಯ ಮೆರೆದ ಸಿಬ್ಬಂದಿಗಳು.

ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ-ಬಿಜೆಪಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್.