ಕನ್ನಡಿಗರ ಪ್ರಜಾನುಡಿ
ಕ್ರೈಮ್ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹೆಂಡತಿಗೆ ಹುಷಾರಿಲ್ಲ ಎಂದು ಕಾರು ಪಡೆದು ಸ್ನೇಹಿತನಿಗೆ ಮೋಸ ಮಾಡಿದ ಆರೋಪಿ ಅಂದರ್.

ಶಿವಮೊಗ್ಗ: ಹೆಂಡತಿಗೆ ಅನಾರೋಗ್ಯವಿದೆ ಎಂದು ಹೇಳಿ ಕಾರನ್ನು ಸ್ನೇಹಿತನಿಂದ ಪಡೆದುಕೊಂಡು ವಾಪಾಸ್ ಕೊಡದೆ ಮೋಸ ಮಾಡಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ 8 ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರ್.ಎಂ.ಎಲ್ ನಗರದ ನಿವಾಸಿ ಸೈಯದ್ ಸಾದಿಕ್‍ರವರ ಟಾಟಾ ಇನ್ನೋವಾ ಕಾರನ್ನು ಆತನ ಪರಿಚಯಸ್ಥನಾದ ಕಿರಣ್ ಕುಮಾರ್ ಅಲಿಯಾಸ್ ಗುಂಡನು ತೆಗೆದುಕೊಂಡು ಹೋಗಿ ಕಾರನ್ನು ವಾಪಾಸ್ ಕೊಡದೇ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮೋಸ ಮಾಡಿರುತ್ತಾನೆಂದು, ಸೈಯ್ಯದ್ ಸಾದಿಕ್ ದೂರುನೀಡಿದ್ದರು.
ಪ್ರರಕಣದಲ್ಲಿ ಆರೋಪಿ ಹಾಗೂ ಕಾರಿನ ಪತ್ತೆಗಾಗಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್‍ಕುಮಾರ್ ಜಿ. ಕೆ ಮಾರ್ಗದರ್ಶನದಲ್ಲಿ ಹಿರಿಯ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಸೋಮವಾರ ಪ್ರಕರಣದ ಆರೋಪಿ ಕಿರಣ್ (35), ಕಾರು ಚಾಲಕನಾಗಿದ್ದಾನೆ. ಈತನನ್ನು ಬಂಧಿಸಿ ಅಂದಾಜು ್ಯ 10,00,000ರೂ.ಗಳ 2 ಟೊಯೋಟಾ ಇನ್ನೋವಾ ಕಾರು, 3 ಸ್ವಿಫ್ಟ್ ಡಿಸೈರ್ ಕಾರು ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರು ಸೇರಿದಂತೆ ಒಟ್ಟು 8 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ ಪೆÇಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Related posts

ಐಟಿ ಮತ್ತು ಇಡಿ ಮೂಲಕ  ವಿಪಕ್ಷ ಮುಗಿಸಲು ಬಿಜೆಪಿ ಸಂಚು-ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಪಾಲಿಕೆಯ ವಶದಲ್ಲಿರುವ ಜಾಗ ಸಿದ್ಲಿಪುರ ಗ್ರಾಮಕ್ಕೆ ಹಸ್ತಾಂತರಿಸುವಂತೆ ಆಗ್ರಹ.

ಭರ್ಜರಿ ಕಾರ್ಯಾಚರಣೆ: ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಪೊಲೀಸರಿಂದ ಪರಿಶೀಲನೆ.