ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ರಾಗಿಗುಡ್ಡ ಘಟನೆ: ಪ್ರಚೋದನಾಕಾರಿ ಹೇಳಿಕೆಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಬೇಕು-ಆಮ್ ಆದ್ಮಿ ಪಾರ್ಟಿ ಮನವಿ.

ಶಿವಮೊಗ್ಗ: ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವ ರೀತಿಯ ಪ್ರಚೋದನಾಕಾರಿ ಹೇಳಿಕೆಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರ್ ಗೌಡ ನಗರದಲ್ಲಿ ಅಶಾಂತಿ ಇತ್ತು. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ನಿರ್ವಹಿಸಿದೆ. ಶಿವಮೊಗ್ಗದಲ್ಲಿ ಶಾಂತಿ ಮುಖ್ಯ. ಶಾಂತಿ ಕಾಪಾಡಲು ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಂಜುನಾಥ ಪೂಜಾರಿ ಮಾತನಾಡಿ, ಶಿವಮೊಗ್ಗದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆದರೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಬಂಡವಾಳ ಹೂಡುವವರು ಶಿವಮೊಗ್ಗಕ್ಕೆ ಬರಲು ಹೆದರುತ್ತಾರೆ. ಆದ್ದರಿಂದ ಶಾಂತಿ ಕಾಪಾಡುವುದು ಬಹಳ ಮುಖ್ಯ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ. ಮಾಧ್ಯಮದವರೂ ಇಂತಹ ಸಂದರ್ಭದಲ್ಲಿ ವೈಭವೀಕರಿಸದೇ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ಸುದ್ದಿ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಎಪಿ ಪ್ರಮುಖರಾದ ಕಿರಣ್, ಸುರೇಶ್ ಕೋಟೆಕರ್, ಮಂಜುಳಾ, ಶೋಭಾ, ನಾಗರತ್ನ, ಅಪರ್ಣಾ, ಲಿಂಗರಾಜ್, ಹರೀಶ್, ನಜೀರ್ ಅಹಮ್ಮದ್ ಇದ್ದರು.

Related posts

ತೀರ್ಥಹಳ್ಳಿ ಸಾಹಿತ್ಯ ವೇದಿಕೆಗೆ ನೂತನ ಸಮಿತಿ ರಚನೆ.

 ಓರ್ವ ಸ್ವಾಮೀಜಿ ಮತ್ತು ರಾಜ್ಯದ ಮೂವರು ಸಚಿವರಿಗೆ ಜೀವಬೆದರಿಕೆ ಪತ್ರ.

ರಾಜ್ಯದಲ್ಲಿ ಎನ್ ಇಪಿಗೆ ಕೋಕ್: ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿ ಆದೇಶಿಸಿದ ರಾಜ್ಯ ಸರ್ಕಾರ