ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

70ನೇ ವರ್ಷದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..

ಉಗಾಂಡ:    70ನೇ ವರ್ಷದಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿ ಅಚ್ಚರಿಗೆ ಕಾರಣರಾಗಿದ್ದಾರೆ.

ಹೌದು ಸಾಮಾನ್ಯವಾಗಿ 45 ವರ್ಷಗಳ ನಂತರ ಹೆರಿಗೆ ಮಾಡುವುದು ಕಷ್ಟ ಎಂದು ಹೇಳಲಾಗುತ್ತದೆ. ಆದರೆ  70 ವರ್ಷದ ಉಗಾಂಡಾದ ಮಹಿಳೆ ಸಫಿನಾ ನಮುಕ್ವಾಯಾ ಅವರು ಇತ್ತೀಚೆಗೆ ದೇಶದ ರಾಜಧಾನಿ ಕಂಪಾಲಾದಲ್ಲಿ (ಐವಿಎಫ್) ಗರ್ಭಕೋಶಕ್ಕೆ ವೀರ್ಯ ಸೇರ್ಪಡೆ ಮಾಡುವ ಚಿಕಿತ್ಸೆಯ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.               ಉಗಾಂಡಾದಲ್ಲಿ ಮಹಿಳೆಯೊಬ್ಬರು ಒಂದೇ ಬಾರಿಗೆ 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಉಗಾಂಡಾದ ಮಹಿಳೆ ಸಫೀನಾ ನಮುಕ್ವಾಯಾ ಅವರು ತಮ್ಮ 70 ನೇ ವಯಸ್ಸಿನಲ್ಲಿ ತಾಯಿಯಾಗುವ ಕನಸನ್ನು ನನಸಾಗಿಸಿದೆ.

70 ವರ್ಷ ವಯಸ್ಸಿನವರು ಸಾಮಾನ್ಯವಾಗಿ ಗರ್ಭಧರಿಸಲು ಸಾಧ್ಯವಿಲ್ಲ. ಇದರ ಫಲವಾಗಿ ಐವಿಎಫ್ ಮೂಲಕ ಗರ್ಭ ಧರಿಸಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಉಗಾಂಡಾದ ಕಂಪಾಲಾದ ಆಸ್ಪತ್ರೆಯಲ್ಲಿ ಬುಧವಾರ ( 2023 ನವೆಂಬರ್ 29) ನಫೀನಾ ಒಂದು ಹೆಣ್ಣು ಮತ್ತು ಗಂಡು ಮಗುವಿಗೆ ಜನ್ಮ ನೀಡಿದರು.

ಆಕೆಗೆ ಹೆರಿಗೆ ಮಾಡಿದ ಡಾ.ಎಡ್ವರ್ಡ್ ಮಾತನಾಡಿ, ಈ ವಯಸ್ಸಿನಲ್ಲಿ ಇದೊಂದು ಪವಾಡ. ಸಿಸೇರಿಯನ್ ಮೂಲಕ ಸಫೀನಾ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದು ಸಂತಾನೋತ್ಪತ್ತಿ ವಿಧಾನಗಳ ಮೂಲಕ ಆಫ್ರಿಕಾದಲ್ಲಿ ಜನ್ಮ ನೀಡಿದ ಅತ್ಯಂತ ಹಿರಿಯ ಮಹಿಳೆಯಾಗಿದ್ದಾರೆ.

ಸಫೀನಾ ಅವರ ಮೊದಲ ಪತಿ 1992 ರಲ್ಲಿ ನಿಧನರಾದರು. ನಾಲ್ಕು ವರ್ಷಗಳ ನಂತರ, ಅವರು ಎರಡನೇ ಬಾರಿಗೆ ವಿವಾಹವಾದರು. ಅವರಿಗೆ 20 ವರ್ಷವಾದರೂ ಮಕ್ಕಳಾಗಿರಲಿಲ್ಲ. 2020 ರಲ್ಲಿ, ಸಫೀನಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಅವರಿಗೆ ಆ ಮಗು ಬದುಕಿ ಉಳಿಯಲಿಲ್ಲ. ಇದರಿಂದ ತಾಯಿಯಾಗುವ ಆಸೆ ಈಡೇರಲಿಲ್ಲ. ಆದರೆ ಅಂತಿಮವಾಗಿ, 70 ನೇ ವಯಸ್ಸಿನಲ್ಲಿ, ಅವರು ಮತ್ತೊಮ್ಮೆ ಐವಿಎಫ್ ಮೂಲಕ ಅವಳಿಗಳಿಗೆ ಜನ್ಮ ನೀಡಿದ್ದಾರೆ. ಅವಳಿ ಮಕ್ಕಳು- ತಾಯಿ ಆರೋಗ್ಯವಾಗಿದ್ದಾರೆ.

 

Related posts

ಕರ್ನಾಟಕದ ರೈತರು ಮತ್ತು ಜನರಿಗೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ.

ಸಿಎಂ ಸಿದ್ಧರಾಮಯ್ಯ ಮನೆಗೆ ಮಾರಿ ಪರರಿಗೆ ಉಪಕಾರಿ-  ಈಶ್ವರಾನಂದಪುರಿ ಸ್ವಾಮೀಜಿ

ಶಿವಮೊಗ್ಗ ವಿಮಾನ ಹಾರಾಟ ಪ್ರಕ್ರಿಯೆ ಆ. 31ರಿಂದ ಅಧಿಕೃತ ಆರಂಭ- ಸಂಸದ ಬಿ.ವೈ.ರಾಘವೇಂದ್ರ