ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕರ್ನಾಟಕದ ಈ ವಿವಿ ಸೇರಿ ದೇಶದ ಒಟ್ಟು 20 ಯುನಿವರ್ಸಿಟಿಗಳು ನಕಲಿ..!

ನವದೆಹಲಿ: ಕರ್ನಾಟಕದ ಒಂದು ವಿಶ್ವ ವಿದ್ಯಾನಿಲಯ ಸೇರಿ ದೇಶದ ಒಟ್ಟು 20 ಯುನಿವರ್ಸಿಟಿಗಳು ನಕಲಿ ಎಂದು ಯುಜಿಸಿ ಪಟ್ಟಿ ಬಿಡುಗಡೆ ಮಾಡಿದೆ.

ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ತನ್ನ ಅಧಿಕೃತ ವೆಬ್ಸೈಟ್ ugc.gov.in ಲಿ ನಕಲಿ ಯುನಿವರ್ಸಿಟಿಗಳ ಪಟ್ಟಿ ಬಿಡುಗಡೆ ಮಾಡಿದ್ದು ದೆಹಲಿಯಲ್ಲಿ 8 , ಉತ್ತರ ಪ್ರದೇಶದ 4 , ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 2 ಮತ್ತು ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ಪುದುಚೇರಿಯಲ್ಲಿ ತಲಾ 1 ನಕಲಿ ವಿಶ್ವವಿದ್ಯಾಲಯಗಳು ಇವೆ ಎಂದು ಯುಜಿಸಿ ಹೇಳಿದೆ.

ಯುಜಿಸಿ ಕಾಯ್ದೆಯ ನಿಯಮಗಳ ವಿರುದ್ಧವಾಗಿ ಈ ಯೂನಿವರ್ಸಿಟಿಗಳು ಪದವಿಗಳನ್ನು ನೀಡುತ್ತಿದ್ದು ಈ ವಿಶ್ವವಿದ್ಯಾನಿಲಯಗಳು ನೀಡುವ ಪದವಿಗಳು ಉನ್ನತ ಶಿಕ್ಷಣ ಅಥವಾ ಉದ್ಯೋಗವಕಾಶಗಳಿಗೆ ಯಾವುದೇ ಮಾನ್ಯತೆ ಹೊಂದಿರುವುದಿಲ್ಲ ಹಾಗೂ ಯಾವುದೇ ಪದವಿಯನ್ನು ನೀಡುವ ಅಧಿಕಾರವನ್ನು ಹೊಂದಿಲ್ಲ ಎಂದು ಯುಜಿಪಿ ಹೇಳಿದೆ.

ಕರ್ನಾಟಕದ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ, ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಸಿಕಲ್ ಹೆಲ್ತ್ ಸೈನ್ಸಸ್ (A.I.P.P.H.S) , ವಾಣಿಜ್ಯ ವಿಶ್ವವಿದ್ಯಾಲಯ ಲಿಮಿಟೆಡ್ , ಯುನೈಟೆಡ್ ನ್ಯಾಷನಲ್ ಯೂನಿವರ್ಸಿಟಿ , ವಾಕ್ ಶಿಲ್ ವಿಶ್ವವಿದ್ಯಾಲಯ , ಎಡಿಆರ್-ಕೇಂದ್ರಿತ ಜುರಿಡಿಕಲ್ ವಿಶ್ವವಿದ್ಯಾಲಯ , ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಸ್ಥೆ , ಸ್ವ-ಉದ್ಯೋಗಕ್ಕಾಗಿ ವಿಶ್ವಕರ್ಮ ಮುಕ್ತ ವಿಶ್ವವಿದ್ಯಾಲಯ , ಆಧ್ಯಾತ್ಮಿಕ ವಿಶ್ವವಿದ್ಯಾಲಯ, ಈ 8 ಯುನಿವರ್ಸಿಟಿಗಳು ನಕಲಿ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಗಾಂಧಿ ಹಿಂದಿ ವಿದ್ಯಾಪೀಠ, ಪ್ರಯಾಗರಾಜ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ಕಾನ್ಪುರ ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ, ಅಲಿಗಢ ಇಂಡಿಯನ್ ಕೌನ್ಸಿಲ್ ಆಫ್ ಎಜುಕೇಶನ್, ಭಾರತ್ ಭವನ, ಮತಿಯಾರಿ ಚಿನ್ಹತ್, ಲಖನೌ ನಕಲಿ ವಿಶ್ವವಿದ್ಯಾಲಯ ಪಟ್ಟಿಯಲ್ಲಿದೆ.

ಮಹಾರಾಷ್ಟ್ರದ ರಾಜಾ ಅರೇಬಿಕ್ ವಿಶ್ವವಿದ್ಯಾಲಯ ನಾಗ್ಪುರ, ಆಂಧ್ರಪ್ರದೇಶ ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ , ಭಾರತದ ಬೈಬಲ್ ಮುಕ್ತ ವಿಶ್ವವಿದ್ಯಾಲಯ, ಪಶ್ಚಿಮ ಬಂಗಾಳದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ , ಕರ್ನಾಟಕ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ, ಕೇರಳ ಸೇಂಟ್ ಜಾನ್ಸ್ ವಿಶ್ವವಿದ್ಯಾಲಯ, ಕೃಷ್ಣಾತಂ ಹಾಗೂ ಪುದುಚೇರಿ ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಈ ವಿಶ್ವವಿದ್ಯಾಲಯಗಳು ನಕಲಿ ಎಂದು ಯುಜಿಸಿ ತಿಳಿಸಿದೆ. ಈ ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಯುಜಿಸಿ ರಾಜ್ಯಗಳಿಗೆ ಸೂಚನೆ ನೀಡಿದೆ.

 

Related posts

ಬರ, ಕಾವೇರಿ ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿ.

ಕಾವೇರಿ ನದಿ ನೀರು ವಿವಾದ: ಕೇಂದ್ರ ಜಲಶಕ್ತಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ.

ಮೊರಾಕೊದಲ್ಲಿ ಪ್ರಬಲ ಭೂಕಂಪನದಿಂದ 296 ಮಂದಿ ಸಾವು: ಪ್ರಧಾನಿ ಮೋದಿ ಸಂತಾಪ.