ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಶಾಲೆಗೆ ರಜೆ ಸಿಗಲಿ ಎಂದು ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ: ಪೊಲೀಸ್ ತನಿಖೆ ವೇಳೆ  ಕೃತ್ಯ ಬಯಲು.

ಕೋಲಾರ:  ಕೋಲಾರದ ದೊಡ್ಡಪೊನ್ನಾಂಡಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳು ಅಸ್ವಸ್ಥ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿಯ ಕೃತ್ಯ ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ಶಾಲೆಗೆ ರಜೆ ನೀಡಲೆಂದು ವಿದ್ಯಾರ್ಥಿ ಕುಡಿಯುವ ನೀರಿಗೆ ಇಲಿ ಪಾಷಾಣ ಬೆರೆಸಿದ್ದ ಅಘಾತಕಾರಿ ವಿಚಾರ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.  ನಿನ್ನೆ ಕೋಲಾರದ ದೊಡ್ಡಪೊನ್ನಾಂಡಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಂದೆತಾಯಿ ನೋಡಬೇಕೆಂಬ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿ ಶಾಲೆಗೆ ರಜೆ ನೀಡಿದರೇ ಹೋಗಿ ತಂದೆ ತಾಯಿಯನ್ನ ನೋಡಬಹುದು ಎಂಬ ಉದ್ದೇಶದಿಂದ ಕುಡಿಯುವ ನೀರಿಗೆ ಇಲಿ ಪಾಷಾಣ ಬೆರೆಸಿದ್ದಾನೆ.  ಈ ಬಗ್ಗೆ ವಿದ್ಯಾರ್ಥಿಯೇ ಪೊಲೀಸರ ಬಳಿ ಬಾಯಿ ಬಿಟ್ಟಿದ್ದು ಸದ್ಯ ಅಪಾಯ ತಪ್ಪಿದೆ.

Related posts

ತಮಿಳುನಾಡಿಗೆ ನೀರು  ಹರಿಸಿ ಎಂದ ಸುಪ್ರೀಂಕೋರ್ಟ್ ತೀರ್ಪು ಗಾಯದ ಮೇಲೆ ಬರೆ ಎಳೆದಂತೆ- ಮಾಜಿ ಸಚಿವ ಸಿ.ಟಿ ರವಿ

ಕಜಾಪ ದಿಂದ ದಸರಾ ಜನಪದ ಗೀತೆಗಳ ವೃಂದಗಾಯನ ಸ್ಪರ್ಧೆಗೆ ಆಹ್ವಾನ

2 ಸಾವಿರ ರೂ. ಮುಖಬೆಲೆಯ ನೋಟು ಬದಲಾವಣೆಗೆ ಗಡುವು ವಿಸ್ತರಿಸಿದ ಆರ್ ಬಿಐ