ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಇಲಿಯಾಸ್ ನಗರಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಮನವಿ.

ಶಿವಮೊಗ್ಗ: 31ನೇ ವಾರ್ಡ್‍ನ ಇಲಿಯಾಸ್ ನಗರಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.
ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಹೊಸದಾಗಿ ಅನುಮತಿ ನೀಡುವಾಗ ವೈಜ್ಞಾನಿಕವಾಗಿ ಸ್ಥಳ ಪರಿಶೀಲನೆ ನಡೆಸದೇ ಆಹಾರ ಇಲಾಖೆಯವರು ಅನುಮತಿ ನೀಡುತ್ತಾರೆ. ಇದು ಆಗಬಾರದು ಎಂದು ಮನವಿದಾರರು ತಿಳಿಸಿದ್ದಾರೆ.
ಶಿವಮೊಗ್ಗ ನಗರದ ಇಲಿಯಾಸ್ ನಗರ ಮತ್ತು ಗಂಧರ್ವ ನಗರದ ವಾರ್ಡ್‍ನಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳಿವೆ. ಆದರೂ ಇಲ್ಲಿ ಇದುವರೆಗೂ ನ್ಯಾಯಬೆಲೆ ಅಂಗಡಿ ಆರಂಭಿಸಿಲ್ಲ. ಈ ವಾರ್ಡ್‍ಗೆ ಅಧಿಕಾರಿಗಳು ಕೂಡ ಭೇಟಿ ನೀಡಿಲ್ಲ. ಹಾಗಾಗಿ ನ್ಯಾಯಬೆಲೆ ಅಂಗಡಿಗೆ ಅನುಮತಿ ನೀಡುವುದು ಅನುಮಾನವಾಗಿದೆ. ಆದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿಯೇ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಿಯಾಜ್ ಅಹ್ಮದ್, ಸೈಯದ್ ಅನ್ವರ್, ಮುನೀರ್ ಮೊದಲಾದವರಿದ್ದರು.

Related posts

 ಡಿ.ಕೆ ಶಿವಕುಮಾರ್  ಚಾಲೇಂಜ್  ಸ್ವೀಕರಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಡಯಾನ ಬುಕ್ ಗ್ಯಾಲರಿ: ನಟ ಪ್ರಕಾಶ್ ರಾಜ್ ಭೇಟಿ

ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ್ರು ಇಬ್ಬರು ಸ್ನೇಹಿತರು