ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಹೊಸ ಗಿನ್ನೆಸ್ ದಾಖಲೆ: ಅಯೋಧ್ಯೆ ಬೆಳಗಿದ 22 ಲಕ್ಷ ಹಣತೆ…

ಬೆಂಗಳೂರು: ಅಯೋಧ್ಯೆಯ 51 ಘಾಟ್​ಗಳಲ್ಲಿ ಏಕಕಾಲದಲ್ಲಿ ಅಂದಾಜು 22.23 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ಗಿನ್ನೆಸ್ ದಾಖಲೆ ನಿರ್ವಿುಸಿದೆ.

ವಿಶ್ವ ವಿದ್ಯಾಲಯ ಮತ್ತು ಅಯೋಧ್ಯೆ ಜಿಲ್ಲಾಡಳಿತದಿಂದ 25,000ಕ್ಕೂ ಹೆಚ್ಚು ಸ್ವಯಂಸೇವಕರು ಒಂದೇ ಸಮಯದಲ್ಲಿ ದೀಪಗಳನ್ನು ಬೆಳಗಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ಬಂದಿದೆ.

ಅಂದಹಾಗೆ ಅಯೋಧ್ಯೆಯಲ್ಲಿ ದೀಪೋತ್ಸವ ಸಂಪ್ರದಾಯವು 2017 ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯೊಂದಿಗೆ ಪ್ರಾರಂಭವಾಯಿತು. 2017ರಲ್ಲಿ 51,000 ದೀಪಗಳೊಂದಿಗೆ ಪ್ರಾರಂಭವಾಗಿ ಈ ಸಂಖ್ಯೆ 2019 ರಲ್ಲಿ 4.10 ಲಕ್ಷಕ್ಕೆ ಏರಿತ್ತು. 2020ರಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು 2021ರಲ್ಲಿ 9ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಲಾಗಿತ್ತು.

ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ, ಕ್ಯಾಬಿನೆಟ್ ಸಚಿವರು ಮತ್ತು 52 ದೇಶಗಳ ರಾಯಭಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

Related posts

ಇನ್ಮುಂದೆ ಮಕ್ಕಳು ಮುಟ್ಟಿದ್ರೆ ಓಪನ್ ಆಗಲ್ಲ ಮೊಬೈಲ್ ಫೋನ್ ಗಳು..!

ಪಿಂಚಣಿದಾರರಿಗೆ ‘ಗುಡ್ ನ್ಯೂಸ್’: ಇನ್ಮುಂದೆ ಮನೆಬಾಗಿಲಲ್ಲೇ ‘ಡಿಜಿಟಲ್ ಜೀವನ’ ಪ್ರಮಾಣ ಪತ್ರ ಸಲ್ಲಿಕೆ ಸೌಲಭ್ಯ.

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ- ಎಸ್ಪಿ ಮಿಥುನ್ ಕುಮಾರ್ ಎಚ್ಚರಿಕೆ