ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನಕಲಿ ಪಡಿತರದಾರರಿಗೆ ಸರ್ಕಾರದಿಂದ ಮಾಸ್ಟರ್ ಸ್ಟ್ರೋಕ್: ಈ ಆರು ನಿಯಮ ಮೀರಿದ್ರೆ ಬಿಪಿಎಲ್ ಕಾರ್ಡ್ ರದ್ದು..

ಬೆಂಗಳೂರು: ನಕಲಿ ಪಡಿತರ ಚೀಟಿ ಹೊಂದಿ ಸರ್ಕಾರದ ಸೌಲಭ್ಯ ಪಡೆಯುತ್ತಿರುವವರಿಗೆ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದ್ದು  ಆರ್ಥಿಕ ಸ್ಥಿತಿ ಉತ್ತಮ ಸ್ಥಿತಿಯಲ್ಲಿದ್ದು ಪಡಿತರ ಪಡೆಯುತ್ತಿರುವವರ ಬಿಪಿಎಲ್ ಕಾರ್ಡ್ ರದ್ಧು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಹೌದು,  ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿ, ಆರ್ಥಿಕ ಸುಸ್ಥಿತಿಯನ್ನು ಇರುವವರ ಕಾರ್ಡ್ ರದ್ದು ಮಾಡಲು ಸರ್ಕಾರ ಚಿಂತಿಸಿದ್ದು,  ಅದಕ್ಕಾಗಿ 6 ಮಾನದಂಡಗಳನ್ನು ಕೂಡ ಆಹಾರ ಇಲಾಖೆ ಫಿಕ್ಸ್ ಮಾಡಿದೆ.  ಆ ಮಾನದಂಡ ಮೀರಿದಂತಹ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಲ್ಲದೇ, ಅಂತಹ ಬಳಕೆದಾರರಿಗೆ ಭಾರೀ ದಂಡವನ್ನು ವಿಧಿಸುವ ಚಿಂತನೆ ನಡೆಸಿದೆ.

ಈ ಸಂಬಂಧ ಆಹಾರ ಇಲಾಖೆಯು ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ಪಡೆದವರ ಮೇಲೆ ನಿಗಾ ವಹಿಸಿದೆ. ಅಲ್ಲದೇ ಬಿಪಿಎಲ್ ಕಾರ್ಡ್ದಾರರ ಆರ್ಥಿಕ ಸ್ಥಿತಿ ಬಗ್ಗೆ ಸರ್ವೇ ನಡೆಸಲಿದ್ದುಈ ಸರ್ವೆಯನ್ನು 6 ಮಾನದಂಡಗಳ ಮೇಲೆ ನಡೆಸಲಿದೆ.

ವೈಟ್ ಬೋರ್ಡ್ ಕಾರು, ನಿಗದಿತ ವಾರ್ಷಿಕ ಆದಾಯ, ಸರ್ಕಾರಿ ನೌಕರರು, ನಿಗದಿತ ಜಮೀನು ಹೊಂದಿರಬಾರದು. ಈ ಹಿಂದೆ 6 ಮಾನದಂಡಗಳ ವ್ಯಾಪ್ತಿಯಲ್ಲಿದ್ದವರು ಈಗ ಆರ್ಥಿಕ ಸ್ಥಿತಿ ಸುಧಾರಿಸಿದ್ದರೂ ಬಿಪಿಎಲ್ ಕಾರ್ಡ್ ರದ್ದು ಮಾಡುವಂತ ತೀರ್ಮಾನವನ್ನು ಶೀಘ್ರದಲ್ಲೇ ಕೈಗೊಳ್ಳಲಿದೆ.

ವಾರ್ಷಿಕ ಆದಾಯ 1.2 ಲಕ್ಷ ಮೀರಿದವರು, 3 ಹೆಕ್ಟೇರ್ ಗಿಂತ ಹೆಚ್ಚಿನ ಒಣಭೂಮಿ ಹೊಂದಿದ್ದವರು, ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 ಸ್ವಯರ್ ಫೀಟ್ ಗಿಂತ ಹೆಚ್ಚು ಹೊಂದಿರೋರು, ವಾಣಿಜ್ಯ, ಆದಾಯ ತೆರಿಗೆ, ಐಟಿ ರಿಟರ್ನ್ಸ್ ಪಾವತಿದಾರರ ಬಗ್ಗೆ ಸರ್ವೇ ಮಾಡಿ, ಅವರು ಬಿಪಿಎಲ್ ಕಾರ್ಡ್ ಪಡೆದಿದ್ದರೇ ರದ್ದು ಮಾಡಲಿದೆ.

ಬಿಪಿಎಲ್ ಕಾರ್ಡ್ ರದ್ದು, ದಂಡಕ್ಕೆ 6 ಹೊಸ ಮಾನದಂಡಗಳು  ಈ ಕೆಳಕಂಡಂತಿದೆ.

ವಾರ್ಷಿಕ 1.2 ಲಕ್ಷ  ಆದಾಯವನ್ನು ಮೀರುವಂತಿಲ್ಲ.

3 ಹೆಕ್ಟೇರ್ ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ರೇ ಬಿಪಿಎಲ್ ಕಾರ್ಡ್ ರದ್ದು

ನಗರ ಪ್ರದೇಶದಲ್ಲಿ 1000 ಸ್ಕ್ವಯರ್ ಪೀಟ್ ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆ ಹೊಂದಿರುವಂತಿಲ್ಲ.

ಬಿಪಿಎಲ್ ಕಾರ್ಡ್ ಹೊಂದಿರೋರು ವೈಟ್ ಬೋರ್ಟ್ ಕಾರು ಹೊಂದಿರುವಂತಿಲ್ಲ.

ಬಿಪಿಎಲ್ ಕಾರ್ಡ್ ಹೊಂದಿರೋ ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರರ ಆಗಿರುವಂತಿಲ್ಲ.

ಬಿಪಿಎಲ್ ಕಾರ್ಡ್ ಹೊಂದಿರೋರು ಆದಾಯ ತೆರಿಗೆ, ಐಟಿ ರಿಟರ್ನ್, ವಾಣಿಜ್ಯ ತೆರಿಗೆ ಪಾವತಿದಾರರು ಆಗಿರುವಂತಿಲ್ಲ.

ಈ ಮೇಲ್ಕಂಡ ಆರು ಮಾನದಂಡಗಳನ್ನು ಆಹಾರ ಇಲಾಖೆ ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿವವರಿಗೆ, ಈಗಾಗಲೇ ಹೊಂದಿರೋರಿಗೆ ನಿಗದಿ ಪಡಿಸಿದೆ. ಈ ಮಾನದಂಡ ಮೀರಿದ್ದಾರ ಎನ್ನುವ ಬಗ್ಗೆ ಶೀಘ್ರವೇ ಆಹಾರ ಇಲಾಖೆಯಿಂದ ಸರ್ವೇ ಕಾರ್ಯ ಆರಂಭಿಸಲಾಗುತ್ತಿದೆ. ಒಂದು ವೇಳೆ ಈ ಮಾನದಂಡ ಮೀರಿದ್ರೇ, ಅಂತಹ ಬಿಪಿಎಲ್ ಕಾರ್ಡ್ ರದ್ದುಗೊಳಿಸೋ ನಿರ್ಧಾರಕ್ಕೂ ಬರಲಿದೆ.

 

Related posts

ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು: ಅರಿವು ಸಾಲ ಯೋಜನೆಗೆ ಹೆಚ್ಚುವರಿ ಅನುದಾನ ಒದಗಿಸಲು ಸೂಚಿಸಿದ ಸಿಎಂ ಸಿದ್ಧರಾಮಯ್ಯ .

ಹೊಸ ಪಡಿತರ ಚೀಟಿಗೆ ಬಂದಿವೆ 2.95 ಲಕ್ಷ ಅರ್ಜಿಗಳು. ಶೀಘ್ರ ವಿತರಣೆ..

ಉದ್ಯಮಿಗೆ ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ ಕೇಸ್ : 8 ಆರೋಪಿಗಳ ಬಂಧನ: 2 ಕೋಟಿ ಹಣ ಜಪ್ತಿ.