ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದಸರಾ ಹಬ್ಬದಲ್ಲೇ ಜನಸಾಮಾನ್ಯರಿಗೆ ಶಾಕ್ : ಅಕ್ಕಿ ,ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆ!

ಬೆಂಗಳೂರು : ರಾಜ್ಯದಲ್ಲಿ ನಾಡಹಬ್ಬ ದಸರಾ ಸಂಭ್ರಮ ಕಳೆಗಟ್ಟಿದ್ದು ಮೈಸೂರು, ಶಿವಮೊಗ್ಗ,ಮಡಿಕೇರಿ ಸೇರಿದಂತೆ ಎಲ್ಲಾ ಕಡೆಗಳಲ್ಲು ದಸರಾ ಆಚರಣೆ ಮಾಡಲಾಗುತ್ತಿದೆ. ಈ ಹಬ್ಬದ ವೇಳೆಯೇ ಅಕ್ಕಿ ,ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಬರ ಘೋಷಣೆಯಾಗಿದೆ. ಇದೀಗ  ಮಳೆ ಕೊರತೆ ಹಿನ್ನೆಲೆಯಲ್ಲಿ ಅಕ್ಕಿ, ದವಸ ಧಾನ್ಯದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಅಕ್ಕಿ ಬೆಲೆ ಕ್ವಿಂಟಾಲ್ ಗೆ 300 ರೂ. ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ 25 ಕೆಜಿ ತೂಕದ ಅಕ್ಕಿ ಮೊಟೆ 13,00 ರೂ.ನಿಂದ 1600 ರೂ.ವರೆಗೆ ಏರಿಕೆಯಾಗಿದೆ. ಕೆಜಿಗೆ 3 ರೂ.ಹೆಚ್ಚಳವಾಗಿದೆ. ಅಕ್ಕಿಯ ಜೊತೆಗೆ ಗೋಧಿಯ ಬೆಲೆಯೂ ಹೆಚ್ಚಾಗಿದ್ದು, ಕ್ವಿಂಟಾಲ್ ಗೋಧಿ 200 ರೂ. ನಿಂದ 300 ರೂ. ಹೆಚ್ಚಳವಾದ್ರೆ, ತೊಗರಿ, ಉದ್ದು ಸೇರಿದಂತೆ ಇತೆ ಧಾನ್ಯಗಳ ಬೆಲೆಯಲ್ಲೂ 10 ರೂ.ವರೆಗೆ ಏರಿಕೆಯಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ.

ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ಬದಲು ಖಾತೆಗೆ ಹಣ ಮಾಡುತ್ತಿದೆ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

 

Related posts

ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್ ಕಿಡಿ.

ಶಿವಮೊಗ್ಗ ದಸರಾ: ನಗರದಲ್ಲಿ 9 ದಿನಗಳ ಕಾಲ ಅಲಂಕಾರ.

ಸಿ.ಎಸ್. ಷಡಾಕ್ಷರಿ ಕರ್ತವ್ಯಕ್ಕೆ ಹಾಜರಾಗುವುದು ಬಿಟ್ಟು ಇಲ್ಲದ ರಾಜಕಾರಣ ಮಾಡುತ್ತಿದ್ದಾರೆ-ಹೆಚ್.ಎಸ್. ಸುಂದರೇಶ್ ಕಿಡಿ.