ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ.

ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಈ ಸಂದರ್ಭದಲ್ಲಿ ಚಿನ್ನ ಖರೀದಿಸಲು ಇಚ್ಛಿಸುವ ಆಭರಣಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

ಹತ್ತು ಗ್ರಾಂ ಚಿನ್ನದ ದರದಲ್ಲಿ 650 ರೂಪಾಯಿಗಳಷ್ಟು ಇಳಿಕೆ ಕಂಡು ಬಂದಿದ್ದು, 58,950 ರೂಪಾಯಿಗಳಿಗೆ ಮಾರಾಟವಾಗಿದೆ. ಹಾಗೆಯೇ ಬೆಳ್ಳಿ ಬೆಲೆಯಲ್ಲೂ ಕೆಜಿಗೆ 1,000 ರೂಪಾಯಿ ಕಡಿಮೆಯಾಗಿದ್ದು, 73,100 ರೂಪಾಯಿಗಳಿಗೆ ಮಾರಾಟವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಇದೀಗ ಇಳಿಕೆ ಕಂಡು ಬಂದಿರುವ ಕಾರಣ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

ರಾಷ್ಟ್ರ ರಾಜಧಾನಿಯ ಚಿನಿವಾರಕಟ್ಟೆಯಲ್ಲಿ ಗುರುವಾರ ಚಿನ್ನದ ಧಾರಣೆ ಪ್ರತೀ 10 ಗ್ರಾಂಗಳಿಗೆ 650 ರೂ. ಇಳಿಕೆಯಾಗಿ 58,950 ರೂ. ಮುಟ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾದುದೇ ಇದಕ್ಕೆ ಕಾರಣ. ಬೆಳ್ಳಿಯ ಬೆಲೆಯೂ ಪ್ರತೀ ಕೆ.ಜಿ.ಗೆ 1 ಸಾವಿರ ರೂ.

ಕಡಿಮೆಯಾಗಿ 73,100 ರೂ.ಗಳಲ್ಲಿತ್ತು.

ಷೇರು ಸೂಚ್ಯಂಕ ಕುಸಿತ

ಗುರುವಾರ ಷೇರು ಸೂಚ್ಯಂಕ ಶೇ.1ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್‌ ದಿನಾಂತ್ಯಕ್ಕೆ 610.37 ಪಾಯಿಂಟ್‌ ಅಂದರೆ ಶೇ. 0.92 ಕುಸಿದು 65,508.32 ಪಾಯಿಂಟ್‌ಗಳಲ್ಲಿ ನೆಲೆಗೊಂಡಿತು. ನಿಫ್ಟಿ 192.90 ಅಂಕಗಳು ಅಂದರೆ ಶೇ. 1.05 ಕುಸಿತ ಕಂಡು 19,523.55ರಲ್ಲಿ ನೆಲೆಸಿತು.

 

Related posts

ಇಡೀ ರಾಜ್ಯ ಬರಗಾಲ ಘೋಷಣೆಗೆ ಆಗ್ರಹ: ಸೆ.25ರಂದು ಧರಣಿ ಸತ್ಯಾಗ್ರಹ-ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರಪೀಡಿತ ತಾಲ್ಲೂಕುಗಳ ಘೋಷಣೆ ಬಗ್ಗೆ ತೀರ್ಮಾನ- ಸಿಎಂ ಸಿದ್ದರಾಮಯ್ಯ ಹೇಳಿಕೆ

ಸಾಮಾನ್ಯ ಜನರ ಜೀವನಕ್ಕೆ ಸರ್ಕಾರದ ಸಹಕಾರ ‘ಗೃಹಲಕ್ಷ್ಮಿ ಯೋಜನೆ -ಸಚಿವ ಎಸ್ .ಮಧು ಬಂಗಾರಪ್ಪ