ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕೇಂದ್ರ ಬರ ಅಧ್ಯಯನ  ತಂಡದ ಅಧಿಕಾರಿಗಳ ಎದುರು ರೈತ ಆತ್ಮಹತ್ಯೆಗೆ ಯತ್ನ.

ಬೆಳಗಾವಿ: ರಾಜ್ಯದಲ್ಲಿ ಬರಪರಿಸ್ಥಿತಿ ಹಿನ್ನೆಲೆ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಬರ ತಂಡದ ಅಧಿಕಾರಿಗಳ ಮುಂದೆ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಮೂರು ಕೇಂದ್ರ ತಂಡಗಳು ಇಂದಿನಿಂದ ಮೂರು ದಿನಗಳ ಕಾಲ ಬರ ಅಧ್ಯಯನ ನಡೆಸುತ್ತಿದೆ.

ಅಂತೆಯೇ ಇಂದು ಕೇಂದ್ರ ತಂಡ ಬೆಳಗಾವಿಯಲ್ಲಿ ಬರ ಅವಲೋಕನಕ್ಕೆ ಭೇಟಿ ನೀಡಿದ್ದು , ಈ ವೇಳೆ ರೈತನೋರ್ವ ವಿಷದ ಬಾಟಲಿ ಹಿಡಿದು ಅಧಿಕಾರಿಗಳ ಬಳಿ ಬಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಅಪ್ಪಾಸಾಹೇಬ ಲಕ್ಕುಂಡಿ ಎಂಬ  ರೈತ ಎರಡು ವಿಷದ ಬಾಟಲ್ ಹಿಡಿದುಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

40 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ರೈತ ಅಪ್ಪಾಸಾಹೇಬ್ ಲಕ್ಕುಂಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ವಿಷದ ಬಾಟಲಿ ಕಸಿದುಕೊಂಡಿದ್ದಾರೆ.

ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಆದರೆ, ಪರಿಹಾರ ಮಾತ್ರ ಸಿಕ್ಕಿಲ್ಲ. ಸರ್ಕಾರ ಬರೀ ಹೆಣ್ಣು ಮಕ್ಕಳಿಗೆ ಗ್ಯಾರಂಟಿ ಕೊಟ್ಟಿದೆ. ರೈತರಿಗೆ ಏನು ಕೊಟ್ಟಿಲ್ಲ ಎಂದು ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಅತ್ಯಾಚಾರ ಬೆದರಿಕೆ ಆರೋಪ: ನಟ ನಿರ್ಮಾಪಕ ವೀರೇಂದ್ರ ಬಾಬು ಅರೆಸ್ಟ್.

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಓಪನ್: ನಾಳೆಯಿಂದ ಭಕ್ತರಿಗೆ  ದರ್ಶನಕ್ಕೆ ಅವಕಾಶ.

ಯಾವುದೇ ಕಾರಣಕ್ಕೂ ಎನ್‍ಇಪಿ ರದ್ದು ಬೇಡ- ಸರ್ಕಾರಕ್ಕೆ ಎಬಿವಿಪಿ ಮನವಿ