ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಕರ್ನಾಟಕದ ಬಾಲಕ..

ಕಲಬುರಗಿ: ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡುವವರು ತುಂಬಾ ವಿರಳ. ಆದರೆ ಇಲ್ಲೊಬ್ಬ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಪುಟ್ಟ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾನೆ.

ಹೌದು, ವೇಗವಾಗಿ ಮತ್ತು ಹರಳು ಹುರಿದಂತೆ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ನ್ನು(Spelling of English Words) ಹೇಳುವ ಈ ಬಾಲಕ ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾನೆ. ಆತನ ಪರಿಶ್ರಮಕ್ಕೆ ಸಂದಿರುವ ಅನೇಕ ಬಹುಮಾನಗಳು ಮತ್ತು ಮಗನ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ತನಗೆ ಸಿಕ್ಕಿರುವ ಏಷ್ಯಾ ಬುಕ್ ಆಫ್ ರೆಕಾರ್ಡ್ ಮೆಡಲ್ಗಳನ್ನು ಹಾಕಿಕೊಂಡು, ಕೈಯಲ್ಲಿ ಪ್ರಮಾಣ ಪತ್ರ ಹಿಡಿದು ನಿಂತಿರುವ ಈ ಬಾಲಕನ ಹೆಸರು ದ್ರುವಂತ್ ಆಲೂರ್. ಕಲಬುರಗಿ ನಿಗರದ ನಿವಾಸಿಯಾಗಿರುವ ದ್ರುವಂತ್ ಆಲೂರ್ ಇದೀಗ ಏಷಿಯಾ ಬುಕ್ ಆಪ್ ರೆಕಾರ್ಡ್ಗೆ ಸೇರಿದ್ದಾನೆ.

ಐದೇ ನಿಮಿಷದಲ್ಲಿ 310 ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ ಹೇಳುವ ಬಾಲಕ

ನಗರದ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ದ್ರುವಂತ್ ಎಂಬ ಬಾಲಕ, ಐದು ವರ್ಷದೊಳಗಿನವರ ಸಾಲಿನಲ್ಲಿ ಬರೊಬ್ಬರಿ 310 ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ ಅನ್ನು ಹೇಳಿದ್ದ. ಇದು ಈ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರಿತ್ತಂತೆ. ನಂತರ ದ್ರುವಂತ್ ಪೋಷಕರು, ಏಷಿಯಾ ಬುಕ್ ಆಪ್ ರೆಕಾರ್ಡ್ ಗೆ ಈ ಬಗ್ಗೆ ಮಾಹಿತಿ ನೀಡಿದ್ದರಂತೆ. ಹೌದು, ಐದೇ ನಿಮಿಷದಲ್ಲಿ ಏಷಿಯಾದಲ್ಲಿ ಯಾರೂ ಕೂಡ ಇಷ್ಟೊಂದು ಶಬ್ದಗಳ ಸ್ಪೆಲ್ಲಿಂಗ್ ಹೇಳದೆ ಇರುವುದನ್ನು ಪರಿಶೀಲಿಸಿದ ತಂಡ, ಕೆಲ ದಿನಗಳ ಹಿಂದಷ್ಟೇ ದ್ರುವಂತ್ ಆಲೂರ್ನ್ನು 2023 ರ ಏಷಿಯಾ ಬುಕ್ ಆಪ್ ರೆಕಾರ್ಡ್ಗೆ ಸೇರಿಸಿ, ಪ್ರಮಾಣ ಪತ್ರ, ಮೆಡಲ್ ನ್ನು ಕಳುಹಿಸಿಕೊಟ್ಟಿದೆ.

ಸದ್ಯ ದ್ರುವಂತ್ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಐದು ವರ್ಷದವನಿದ್ದಾಗಲೇ ಹೇಳಿದ್ದ ಇಂಗ್ಲಿಷ್ ಶಬ್ದಗಳಿಗೆ ಇದೀಗ ಏಷಿಯಾ ಬುಕ್ ಆಪ್ ರೆಕಾರ್ಡ್ ಗರಿ ಸಿಕ್ಕಿದೆ. ಈ ಮೂಲಕ ದ್ರುವಂತ್ ವರ್ಲ್ಡ್ ಬುಕ್ ಆಪ್ ರೆಕಾರ್ಡ್ ಗೆ ಹೋಗಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದೀಗ ದ್ರುವಂತ್ ವರ್ಲ್ಡ್ ರೆಕಾರ್ಡ್ ಮಾಡಲು ಮುಂದಾಗಿದ್ದಾನೆ. ಇನ್ನು ಇಂತಹದೊಂದು ಸಾಧನೆಗೆ ಕೋವಿಡ್ ಸಮಯ ಕಾರಣವಾಗಿದೆ. ಹೌದು, ಅನೇಕರು ಕೋವಿಡ್ನಲ್ಲಿ ಲಾಕ್ಡೌನ್ನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಆದ್ರೆ, ದ್ರುವಂತ್ ಹೆತ್ತವರು, ತಮ್ಮ ಮಗ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ನ್ನು ನಿರರ್ಗಳವಾಗಿ ಹೇಳುವುದನ್ನು ನೋಡಿ, ಆತನಿಗೆ ಹೆಚ್ಚಿನ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ನ್ನು ಹೇಳಿಕೊಟ್ಟಿದ್ದರು. ಕಲಬುರಗಿ ನಗರದ ಖಾಸಗಿ ಇಂಜನೀಯರಿಂಗ್ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ದ್ರುವಂತ್ ತಂದೆಯವರು, ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಇಂಗ್ಲಿಷ್ ಶಬ್ದಗಳನ್ನು ಯಾರು ಹೇಳದೆ ಇರುವ ಬಗ್ಗೆ ಮಾಹಿತಿ ಪಡೆದು, ಇಂಡಿಯಾ ಬುಕ್ ಆಪ್ ರೆಕಾರ್ಡ್ ಸಿಬ್ಬಂದಿಗೆ ತಮ್ಮ ಮಗನ ಬಗ್ಗೆ ಮಾಹಿತಿ ನೀಡಿದ್ದರು.

ಇಂಡಿಯಾ ಬುಕ್ ಆಪ್ ರೆಕಾರ್ಡ್ ತಂಡದ ಸೂಚನೆ ಮೇರೆಗೆ ವಿಡಿಯೋ ಮಾಡಿ ಕಳುಹಿಸಿದ್ದರು. ಐದೇ ನಿಮಿಷದಲ್ಲಿ 310 ಶಬ್ದಗಳ ಸ್ಪೆಲ್ಲಿಂಗ್ನ್ನು ಹೇಳಿದ್ದನ್ನು ಪರಿಗಣಿಸಿದ್ದ ತಂಡ, ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೆ ಸೇರಿಸಿತ್ತು. ಇನ್ನು ಮಗನ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ಭಾಗವೆನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಕಲಬುರಗಿಯ ಬಾಲಕನೋರ್ವ ಇದೀಗ ಏಷಿಯಾ ಬುಕ್ ಆಪ್ ರೆಕಾರ್ಡ್ಗೆ ಸೇರಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

 

Related posts

ರೈತನ ವಿಭಿನ್ನ ಪ್ರಯತ್ನ: ಭತ್ತದ ಬೆಳೆಯಲ್ಲಿ ಮೂಡಿ ಬಂತು ಪವರ್ ಸ್ಟಾರ್ ಅಪ್ಪು ಚಿತ್ರ.

ಮಾಜಿ ಸಂಸದ ಆಯನೂರು ಮಂಜುನಾಥ್ ನಿವಾಸಕ್ಕೆ ಸಚಿವ ಎಸ್. ಮಧು ಬಂಗಾರಪ್ಪ ಭೇಟಿ

ಮೂರು ಡಿಸಿಎಂ ಹುದ್ದೆ ಬೇಡಿಕೆ ಅಭಿಪ್ರಾಯಕ್ಕೆ ನಾನು ಬದ್ಧ- ಸಚಿವ ಕೆ.ಎನ್ ರಾಜಣ್ಣ.