ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸೈಕಲ್ ನಲ್ಲಿ 5 ಸಾವಿರ ಕಿ.ಮೀ ಸಂಚಾರ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ 60 ವರ್ಷದ ವ್ಯಕ್ತಿ.

ಹುಬ್ಬಳ್ಳಿ:  60 ವರ್ಷದ ವ್ಯಕ್ತಿ ಸೈಕಲ್ ನಲ್ಲಿ 5 ಸಾವಿರ ಕಿ.ಮೀ ಸಂಚರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ.

ಚಾರ್ಟೆಡ್ ಅಕೌಂಟೆಂಟ್ (CA)  ಗುರುಮೂರ್ತಿ ಮಾತರಂಗಿಮಠ  ಅವರು 60ನೇ ವಯಸ್ಸಿನಲ್ಲಿ ಸೈಕಲ್ ನಲ್ಲಿ 5 ಸಾವಿರ ಕಿಮೀ ಕ್ರಮಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ  ಸ್ಥಾನ ಪಡೆದಿದ್ದಾರೆ. ಗುರುಮೂರ್ತಿ ಮಾತರಂಗಿಮಠ ಅವರಿಗೆ 60ನೇ ವಯಸ್ಸಿನಲ್ಲಿ ಫುಟ್ ಕಾರ್ನ್ (ಕಾಲಿನಲ್ಲಿ ಉಂಟಾಗುವ ಆಣಿ) ಆಗಿತ್ತು. ಇದರಿಂದ ನಡೆಯಲು ಕೂಡ ಸಾಧ್ಯವಾಗುತ್ತಿರಲ್ಲಿಲ್ಲ. ಹೀಗಿದ್ದರೂ ಸಹ ಅವರು ಸಹಜವಾಗಿ ಸೈಕ್ಲಿಂಗ್ ನತ್ತ ತಮ್ಮ ಒಲವು ಹರಿಸಿದರು. ಅಲ್ಲದೆ ಸೈಕ್ಲಿಂಗ್ ಮಾಡುವುದರಿಂದ ದೈಹಿಕ ಆರೋಗ್ಯವಾಗಿರಬಹುದು ಮತ್ತು ಪರಿಸರ ರಕ್ಷಣೆಯಾಗುತ್ತದೆ ಎಂಬ ನಿಲುವು ತಾಳಿದ ಗುರುಮೂರ್ತಿಯವರು ಸೈಕ್ಲಿಂಗ್ ಆರಂಭಿಸಿದರು.

ಅಲ್ಲದೆ ಈಗಿನ ಯುವ ಪೀಳಿಗೆ ಮೋಟಾರು ವಾಹನಗಳತ್ತ ಮಾರು ಹೋಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯವಾಗುತ್ತದೆ ಮತ್ತು ಆರೋಗ್ಯ ಕೂಡ ಹಾಳಾಗುತ್ತದೆ. ಇದರ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸೈಕ್ಲಿಂಗ್ ಆರಂಭಿಸಿದರು. ಸೈಕ್ಲಿಂಗ್ ವ್ಯಾಯಾಮದ ಒಂದು ರೂಪವಾಗಿದೆ. ಮತ್ತು ಸೈಕಲ್ ಬಳಸುವುದರಿಂದ ಪರಿಸರವನ್ನು ಸಂರಕ್ಷಣೆಯಾಗುತ್ತದೆ.

ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮತ್ತು ಪರಿಸರವನ್ನು ರಕ್ಷಿಸುವ ದೃಷ್ಟಿಯಿಂದ ಗುರುಮೂರ್ತಿ ಅವರು ಸೈಕ್ಲಿಂಗ್ ಆರಂಭಿಸಿದರು. ಗುರುಮೂರ್ತಿ ಅವರು ಮೇ 11 ರಿಂದ ಆಗಸ್ಟ್ 18 ರವರೆಗೆ ಒಟ್ಟು 5,000 ಕಿಮೀ ದೂರವನ್ನು 100 ದಿನಗಳವರೆಗೆ ಪ್ರತಿದಿನ 50 ಕಿಮೀ ಸೈಕಲ್ ಸವಾರಿ ಮಾಡಿದರು. ಗುರಮೂರ್ತಿ ಅವರು ಪ್ರತಿದಿನ ಬೆಳಿಗ್ಗೆ 5 ರಿಂದ 8 ಗಂಟೆ ಒಳಗೆ ಸೈಕಲ್ನಲ್ಲಿ 50 ಕಿಮೀ ಕ್ರಮಿಸುತ್ತಿದ್ದರು. ಅಂತಿಮವಾಗಿ ಅವರು 63 ವರ್ಷ, 9 ತಿಂಗಳು ಮತ್ತು 2 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು. ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಅವರ ಹೆಸರು ಸೇರಿತು.

ಗುರುಮೂರ್ತಿ ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರು ಸೇರಿಸಲು ಒಂದೇ ಲೇನ್ ನಲ್ಲಿ ನಾಲ್ಕು ಕಿಮೀ ಕ್ರಮಿಸಲು ಪ್ರಯತ್ನಿಸಿದರು. ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಬೈಸಿಕಲ್ ಕ್ಲಬ್ ಎರಡು ಬಾರಿ ಆಯೋಜಿಸಿತ್ತು. ತನ್ನ ಧ್ಯೇಯೋದ್ದೇಶದ ಹೊರತಾಗಿ, ಅವರು ಯುವಕರನ್ನು ಸೈಕ್ಲಿಂಗ್ ಆಯ್ಕೆ ಮಾಡಲು ಪ್ರೋತ್ಸಾಹಿಸುತ್ತಾರೆ.

ಪರಿಸರವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಬಿಟ್ಟುಕೊಡುವುದು ನನ್ನ ಏಕೈಕ ಉದ್ದೇಶವಾಗಿದೆ. ಜಗತ್ತು ಜಾಗತಿಕ ತಾಪಮಾನದಿಂದ ಬಳಲುತ್ತಿದೆ. ಪಳೆಯುಳಿಕೆ ಇಂಧನಗಳ ಮೇಲೆ ಚಲಿಸುವ ವಾಹನಗಳಿಂದ ಹಸಿರನ್ನು ರಕ್ಷಿಸುವುದು ಅತಿಮುಖ್ಯವಾಗಿದೆ. ಹಾಗಾಗಿ ಸೈಕ್ಲಿಂಗ್ ನನ್ನ ಕೊನೆಯ ಆಯ್ಕೆಯಾಗಿದೆ ಎಂದು ಗುರುಮೂರ್ತಿ ಹೇಳಿದರು.

 

Related posts

ಇಂಗ್ಲೀಷ್ ನಲ್ಲಿ ಪಿಎಚ್ ಡಿ ಪಡೆದ 93 ವರ್ಷದ ಅಜ್ಜಿ.

ಪಠ್ಯ ಪುಸ್ತಕ ವಿಷಯಗಳಲ್ಲಿ ಹೇರಿಕೆಯ ಬದಲಾವಣೆ ಸಲ್ಲದು -ಜಿ.ಎಸ್. ನಾರಾಯಣರಾವ್

ಶ್ರೇಷ್ಠ ಪರಂಪರೆ ಹೊಂದಿರುವ ದೇಶ ಭಾರತ-ಅಶೋಕ ಹಂಚಲಿ