ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಮೈಸೂರು ಗ್ರಾಮಾಂತರಮೈಸೂರು ನಗರ

ರೋಗ ನಿರೋಧಕ ಭತ್ತದ ತಳಿಗಳನ್ನೇ ಆಯ್ಕೆ ಮಾಡಿ

ರೋಗ ನಿರೋಧಕ ಭತ್ತದ ತಳಿಗಳನ್ನೇ ಆಯ್ಕೆ ಮಾಡಿ
-ಸುತ್ತೂರು ಐಸಿಎಆರ್‌ ಜೆಎಸ್‌ಎಸ್‌ ಕೆವಿಕೆ ಭತ್ತದ ಕ್ಷೇತೊ್ರೕತರ‍ಸವದಲ್ಲಿ ಸಹಾಯಕ ಕೃಷಿ ನಿರ್ದೇಶಕ ರವಿ ಸಲಹೆ
ನಂಜನಗೂಡು: ರೈತರು ಉತ್ತಮವಾದ ರೋಗನಿರೋಧಕ ತಳಿಗಳನ್ನು ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ರವಿ ತಿಳಿಸಿದರು.

ಸುತ್ತೂರಿನ ಐಸಿಎಆರ್‌ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜ್ಯೋತಿ ಭತ್ತಕ್ಕೆ ಪರ್ಯ್ಯ ತಳಿಗಳ ತಂತ್ರಜ್ಞಾನ ಪರಿಶೀಲನೆಯಡಿ ನಂಜನಗೂಡಿನ ಬಿಳಿಗೆರೆ ಗ್ರಾಮದ ಗುರುಲಿಂಗೇಗೌಡರವರ ಗದ್ದೆಯಲ್ಲಿಜ್ಯೋತಿ ಭತ್ತದ ತಳಿಗೆ ಹೋಲುವ 4ಹೊಸ ತಳಿಗಳ ಭತ್ತದ ಬೆಳೆ ಕ್ಷೇತ್ರೋತರ‍ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತರು ಮುಂಜಾಗ್ರತಾ ಕ್ರಮವಾಗಿ ಬೀಜೋಪಚಾರ, ಔಷಧ ಸಿಂಪಡನೆ ಮಾಡುವುದರಿಂದ ರೋಗ ಹಾಗು ಕೀಟದ ಬಾಧೆ ತಡೆದು ಉತ್ತಮ ಇಳುವರಿ ಪಡೆಯಬಹುದೆಂದು ತಿಳಿಸಿದರು.

ಮಂಡ್ಯ ವಿ.ಸಿ ಫಾರಂನಿಂದ ಆಗಮಿಸದ್ದಿ ಕಿರಿಯ ಭತ್ತದ ತಳಿ ವಿಜ್ಞಾನಿ ಡಾ. ಎಚ್‌. ಬಿ. ಮನೋಜ್‌ ಅವರು ಭತ್ತದ ವಿವಿಧ ರೋಗ ಹಾಗು ಅದನ್ನು ತಡೆಯಲು ವಹಿಸಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಸಿದರು.
ಸಹ್ಯಾದ್ರಿ ಕೆಂಪು, ಮುಕ್ತಿ, ಕೆಎಂಪಿ 220 ಸೂಕ್ತ: ವಿವಿಧ ಸಹ್ಯಾದ್ರಿ, ಕೆಂಪು ಮುಕ್ತಿ ಹಾಗು ಕೆಎಂಪಿ 220 ಸೂಕ್ತತಳಿಗಳನ್ನು ವೀಕ್ಷಿಸಿದ ರೈತರು ಸಹ್ಯಾದ್ರಿ ಕೆಂಪು ಮುಕ್ತಿ ಅತ್ಯುತ್ತಮವಾಗಿದೆ. ಕೆಎಂಪಿ 220 ಹುಲ್ಲು ಹಾಗು ಕಾಳಿನ ಇಳುವರಿ ಉತ್ತಮವಾಗಿದೆ. ಕಾಳು ಒಂದು ಸುತ್ತು ಜ್ಯೋತಿಗಿಂತ ಚಿಕ್ಕದ್ದಾಗಿದೆ. ಕೇರಳದ ತಳಿಗಳಾದ ಶ್ರೇಯಸ್‌ ಹಾಗು ಪೌರ್ಣಮಿ ತಳಿಗಳ ಅವಧಿ ಹೆಚ್ಚು ಎಂದು ಅಭಿಪ್ರಾಯ ಪಟ್ಟರು. ಈ ಭಾಗಕ್ಕೆ ರೋಗ ಕಡಿಮೆ ಇದ್ದು, ಹೆಚ್ಚು ತೆನೆ ಹೊಂದಿರುವ, ಜ್ಯೋತಿಗಿಂತ ಎತ್ತರದ ತಳಿಗಳಾದ ಸಹ್ಯಾದ್ರಿ ಕೆಂಪು ಮುಕ್ತಿ ಹಾಗು ಕೆಎಂಪಿ 220 ಸೂಕ್ತವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆ ಕಾರ್ಯಕ್ರಮವನ್ನು ಪ್ರಗತಿಪರ ರೈತ ಶಂಕರಗುರು, ಗುರುಲಿಂಗೇಗೌಡರು ಎಚ್‌.ವಿ. ದಿವ್ಯಾ ಉದ್ಘಾಟಿಸಿದರು.
ಡಾ. ಮನೋಜ್‌ ಅವರು ಕೆಎಂಪಿ 220 ತಳಿಯ ವೈಶಿಷ್ಟ್ಯತೆ, ಭತ್ತಕ್ಕೆ ಬರುವ ರೋಗ ಕೀಟಗಳ ಹತೋಟಿ ಕುರಿತು ತಿಳಿಸಿದರು.

ಪ್ರಗತಿಪರ ರೈತರಾದ ಶಂಕರಗುರು ಅವರು ತಾವು ಎನ್‌. ಎಂ. ಎಸ್‌ 2 ಅಭಿವೃದ್ಧಿ ಪಡಿಸಿ ನೋಂದಣಿ ಮಾಡಿಸಿದ ಬಗೆ ತಿಳಿಸಿದರು. ಪ್ರಗತಿಪರ ರೈತರಾದ ಗುರುಲಿಂಗೇಗೌಡರು ವಿವಿಧ ತಳಿಗಳನ್ನು ನೇರ ಬಿತ್ತನೆ ಮಾಡಿದ ವ್ಯವಸಾಯ ಕ್ರಮದ ಕುರಿತು ತಿಳಿಸಿದರು.

ಅಧ್ಯಕ್ಷತೆ ವಹಿಸದ್ದಿ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಎಚ್‌.ವಿ. ದಿವ್ಯಾಅವರು ಜ್ಯೋತಿ ಭತ್ತಕ್ಕೆ ಪರ್ಯ್ಯವಾಗಿ ಬಿಡುಗಡೆಯಾಗಿರುವ ನೂತನ ಕೆಂಪು ಭತ್ತದ ತಳಿಗಳಾದ ಕೃಷಿ ಮಹಾವಿದ್ಯಾಲಯದ ಕೆಎಮ್‌ಪಿ 220, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ್ಯಾದ್ರಿ ಕೆಂಪು ಮುಕ್ತಿ, ಕೇರಳ ಕೃಷಿ ವಿಶ್ವವಿದ್ಯಾಲಯದ ಶ್ರೇಯಸ್‌ ಮತ್ತು ಪೌರ್ಣಮಿ ತಳಿಗಳ ಗುಣಲಕ್ಷಣಗಳನ್ನು ರೈತರಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿರುವ ರೈತರಿಗೆ 5 ತಳಿಗಳಿಗೆ ಅಂಕ ನೀಡುವ ಮೂಲಕ ಉತ್ತಮ ತಳಿಯನ್ನು ಆಯ್ಕೆ ಮಾಡಲು ಕೋರಲಾಗಿ ರೈತರು ಸಹ್ಯಾದ್ರಿ ಕೆಂಪು ಮುಕ್ತಿಗೆ ಅತಿ ಹೆಚ್ಚು ಅಂಕ ನೀಡುವ ಮೂಲಕ ಈ ಭಾಗಕ್ಕೆ ಸೂಕ್ತವೆಂದು ಅಭಿಪ್ರಾಯ ಪಟ್ಟರು. ನಂತರದಲ್ಲಿ ಕೆಎಂಪಿ 220 ಹಾಗು ಮೂರನೇ ಸ್ಥಾನ ಜ್ಯೋತಿಗೆ ನೀಡಿದರು. ಕೇರಳದ ತಳಿಗಳು ಸೂಕ್ತವಲ್ಲವೆಂದು ತಿಳಿಸಿದರು.

ಕಾರ್ಯಕ್ರಮನ್ನು ಡಾ. ವೈ.ಪಿ ಪ್ರಸಾದ್‌ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕೆವಿಕೆ ವಿಜ್ಞಾನಿ ಶಾಮರಾಜ್‌, ಶಿಲ್ಪ ಹಾಗು ಸುತ್ತಮುತ್ತಲಿನ 70ಕ್ಕೂ ಹೆಚ್ಚು ರೈತ ಹಾಗು ರೈತ ಮಹಿಳೆಯರು ಭಾಗವಹಿಸದ್ದಿರು.

ಫೋಟೋ:
ಸುತ್ತೂರು ಐಸಿಎಆರ್‌ ಜೆಎಸ್‌ಎಸ್‌ ಕೆವಿಕೆ ಯಿಂದ ನಂಜನಗೂಡಿನ ಬಿಳಿಗೆರೆ ಗ್ರಾಮದ ಗುರುಲಿಂಗೇಗೌಡರ ಜಮೀನಿನಲ್ಲಿ ಭತ್ತದ ಬೆಳೆ ಕ್ಷೇತ್ರೋತರ‍ಸವ ಆಯೋಜಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಎಚ್‌.ವಿ. ದಿವ್ಯಾ, ರೈತ ಗುರುಲಿಂಗೇಗೌಡ ಹಾಗೂ ಕೃಷಿ ವಿಜ್ಞಾನಿಗಳು ಹಾಜರದ್ದಿರು.

Related posts

ಬಿಜೆಪಿಯ ಪರಿಸ್ಥಿತಿ ಏನಾಗಲಿದೆ  ಎಂಬುದನ್ನು ಸ್ವಲ್ಪದಿನ ಕಾದು ನೋಡಿ  -ಸಿಎಂ ಸಿದ‍್ಧರಾಮಯ್ಯ.

 ಕಮ್ಯುನಿಸ್ಟ್ ನಾಯಕ  ಹಾಗೂ ಹಿರಿಯ ಪತ್ರಕರ್ತ  ಸಿ‌.ಆರ್.ಕೃಷ್ಣರಾವ್ ಇನ್ನಿಲ್ಲ.

ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ.