ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕರವೇ ಯುವಸೇನೆಯಿಂದ ಡಿಸೆಂಬರ್ 3ರಂದು  ಅದ್ದೂರಿ ಕನ್ನಡ ರಾಜ್ಯೋತ್ಸವ

ಶಿವಮೊಗ್ಗ:  ಶಿವಮೊಗ್ಗ ಅಶೋಕ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಡಿಸೆಂಬರ್ ಮೂರರಂದು ಅಶೋಕನಗರ ಮುಖ್ಯ ರಸ್ತೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ನಾಡಗೀತೆಯೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿಕರವೇ ಯುವ ಸೇನೆ ರಾಜ್ಯಾಧ್ಯಕ್ಷರಾದ ಶ್ರೀ ಹರೀಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಯುವಸೇನೆ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಹೆಚ್ಎಸ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಂಸದ ಬಿ ವೈ ರಾಘವೇಂದ್ರ ರವರು ಹಾಗೂ ಶಾಸಕರಾದ ಚನ್ನಬಸಪ್ಪ ನವರು ಗ್ರಾಮಾಂತರ ಶಾಸಕರಾದ ಶಾರದಾ ಪುರ್ಯನಾಯ್ಕ್ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ ಎಸ್ ಮಹಮ್ಮದ್ ಶಫಿವುಲ್ಲಾ ಅಧ್ಯಕ್ಷರು ವರ್ಕ್ ಬೋರ್ಡ್ ಸಲಹಾ ಸಮಿತಿ ಹೊಳೆ ಹೊನ್ನೂರ್ ಅಧ್ಯಕ್ಷರಾದ ಹನುಮಂತು ಹಾಗೂ ಸ್ಥಳೀಯ ಕಾರ್ಪೊರೇಟರ್ ಆದ ಮಂಜುಳಾ ಶಿವಣ್ಣ ಭಾಗವಹಿಸಲಿದ್ದಾರೆ ಹಾಗೂ ವಿಶೇಷ ಆಹ್ವಾನಿತರಾಗಿ ಶ್ರೀ ಟಿ.ಎಸ್ ಆನಂದ್ ರೈಲ್ವೆ ಇಲಾಖೆ ಶಿವಪ್ಪ ಸಂಗಣ್ಣನವರ್ ಪತ್ರಕರ್ತ ಸಾಹಿತಿ ಗಾರಾ ಶ್ರೀನಿವಾಸ್ ಕಾನೂನು ಸಲಹೆಗಾರರ ಅನಿಲ್ ಕುಮಾರ್ ಹಾಗೂ ಸಮಾಜ ಸೇವಕರಾದ ಚಿರಂಜೀವಿ ಬಾಬು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರಧಾನಿ ಮಾಡಲಾಗುವುದು ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಂ ಮಲೋಡಿ ಆರ್ಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ತಿಳಿಸಿದ್ದಾರೆ

Related posts

ಕ್ಯಾನ್ಸರ್ ರೋಗದ ಬಗ್ಗೆ ಇನ್ಮುಂದೆ ಭಯ ಬೇಡ: 7 ನಿಮಿಷದ ಚಿಕಿತ್ಸೆಯ ಮೊದಲ ಇಂಜಕ್ಷನ್ ಬಿಡುಗಡೆ..

ನಾಳೆ ಆದಿತ್ಯ- ಎಲ್ 1′ ಉಡಾವಣೆಗೆ `ಇಸ್ರೋ’ ಸಜ್ಜು.

ಯುವ ಕಾಂಗ್ರೆಸ್ ನಿಂದ ಸ್ವಾತಂತ್ರೋತ್ಸವ ದಿನಾಚರಣೆ – ಮಹಿಳಾ ಸಬಲೀಕರಣಕ್ಕೆ ಶಕ್ತಿ ನೀಡಲು ಎಲ್ಲಾ ಬ್ಲಾಕ್ ಮಟ್ಟದಲ್ಲಿ ಮಹಿಳೆಯರಿಂದ ಧ್ವಜಾರೋಹಣ – ಜಿಲ್ಲಾಧ್ಯಕ್ಷ ಹೆಚ್‍.ಪಿ.ಗಿರೀಶ್