ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ಹಮಾಸ್ ಅನ್ನು ಕೊನೆಗೊಳಿಸದೆ ಬೇರೆ ದಾರಿಯಿಲ್ಲ ! – ಎಲಾನ್ ಮಸ್ಕ್

ತೆಲ್ ಅವಿವ್ (ಇಸ್ರೆಲ್): ಇಸ್ರೆಲ್ ಮತ್ತು ಹಮಾಸ್ ನಡುವಿನ ಯುದ್ದದಲ್ಲಿ ಸಾಕಷ್ಟು ಪ್ರಾಣಹಾನಿಗಳು ಸಂಭವಿಸಿದ್ದು ಈ ನಡುವೆ ಇಸ್ರೇಲ್ ಗೆ ಭೇಟಿ ನೀಡಿದ್ದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್, ಹಮಾಸ್ ಅನ್ನು ಕೊನೆಗೊಳಿಸದೆ ಬೇರೆ ದಾರಿಯಿಲ್ಲ ಎಂದಿದ್ದಾರೆ.

ಇಸ್ರೆಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಬೆನ್ನಲ್ಲೆ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಇಸ್ರೇಲ್ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದರು.

ನೆತನ್ಯಾಹು ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ, ಹಮಾಸ್ ಅನ್ನು ಕೊನೆಗೊಳಿಸುವುದು ಇದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಮಸ್ಕ್ ಹೇಳಿದರು. ಚರ್ಚೆಯ ಮೊದಲು, ನೆತನ್ಯಾಹು ಇವರು ಮಸ್ಕ್ ಅವರನ್ನು ಹಮಾಸ್ ನಡೆಸಿರುವ ಭೀಕರ ದಾಳಿಯ ವೀಡಿಯೊಗಳನ್ನು ತೋರಿಸಿದ್ದರು.

ಈ ಸಮಯದಲ್ಲಿ ಮಸ್ಕ್ ಇವರು, ದಾಳಿಕೋರರನ್ನು ಮುಗಿಸುವುದು ಆವಶ್ಯಕವಾಗಿದೆಯೆಂದು ಹೇಳಿದರು. ಜನರನ್ನು ಕೊಲೆಗಡುಕರಾಗಲು ತರಬೇತಿ ನೀಡುವವರ ಪ್ರಚಾರವೂ ನಿಲ್ಲಬೇಕು. ಗಾಝಾದ ಭವಿಷ್ಯಕ್ಕೆ ಇದು ಮಹತ್ವದ್ದಾಗಿದೆ. ನನಗೆ ಗಾಝಾವನ್ನು ಪುನರ್ನಿರ್ಮಿಸಲು ಸಹಾಯ ಮಾಡ ಬೇಕಾಗಿದೆ ಮತ್ತು ಯುದ್ಧದ ನಂತರ ಅವರಿಗೆ ಉತ್ತಮ ಭವಿಷ್ಯವನ್ನು ನೀಡ ಬೇಕಾಗಿದೆ ಎಂದು ಹೇಳಿದರು.

ಈ ಸಮಯದಲ್ಲಿ, ಮಸ್ಕ್ ತಮ್ಮ ‘ಸ್ಟಾರ್ಲಿಂಕ್ ಆಪರೇಷನ್ಸ್’ ಕಂಪನಿ ಮತ್ತು ಇಸ್ರೇಲ್ನ ದೂರಸಂಪರ್ಕ ಸಚಿವಾಲಯದ ನಡುವೆ ಒಪ್ಪಂದಕ್ಕೆ ಸಹಿ ಹಾಕಿದರು. ಇದರ ಅಡಿಯಲ್ಲಿ, ಎಲಾನ್ ಮಸ್ಕ್ ಅವರು ಸ್ಟಾರಲಿಂಕ ಮಾಧ್ಯಮದಿಂದ ಇಸ್ರೇಲ್ ಮತ್ತು ಗಾಝಾ ಪಟ್ಟಿಯಲ್ಲಿ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲಿದ್ದಾರೆ.

 

Related posts

ಐತಿಹಾಸಿಕ ಬೆಂಗಳೂರು ಕಂಬಳಕ್ಕೆ  ಅಶ್ವಿನಿ ಪುನಿತ್​ ರಾಜ್ ​​ಕುಮಾರ್ ಅವರಿಂದ ಅಧಿಕೃತ ಚಾಲನೆ 

ನಾಳೆ ಕರಾಳ ದಿನಾಚಾರಣೆಗೆ ನಿರ್ಧರಿಸಿದ್ದ ಎಂಇಎಸ್ ಗೆ ಶಾಕ್: ಬೆಳಗಾವಿ ಗಡಿ ಪ್ರವೇಶಿಸದಂತೆ ಮಹಾರಾಷ್ಟ್ರದ 3 ಸಚಿವರು, ಓರ್ವ ಎಂಪಿಗೆ ನಿರ್ಬಂಧ.

ಮಕ್ಕಳ ದಸರಾ: ಕ್ರೀಡೆ, ಕಲೆ, ಕೌಶಲ್ಯ ಸ್ಪರ್ಧೆ ,ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ಯಶಸ್ವಿ.