ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಸೂಡಾ ಅಧ್ಯಕ್ಷಗಾದಿಗೆ ಜ್ಯೋತಿ ಅರಳಪ್ಪ ..?

ಶಿವಮೊಗ್ಗ : ರಾಜ್ಯ ರಾಜಕೀಯದ ವಿದ್ಯಮಾನಗಳು ಬದಲಾವಣೆಯ ಪಥದತ್ತ ದಾಪುಗಾಲಿಟ್ಟಿದ್ದರೆ ಇದರ ಬೆನ್ನ ಹಿಂದೆಯೇ ನಿಗಮ ಮಂಡಳಿಗಳ ನೇಮಕಾತಿಗೆ ಮಹೂರ್ತವೂ ಫಿಕ್ಸ್ ಆಗಿದೆ ಎನ್ನುವ ನಿಖರ ಮಾಹಿತಿಗಳಂತೆಯೇ ರಾಜ್ಯದಲ್ಲಿ ಆಯಾ ನಿಗಮ ಮಂಡಳಿಗಳಿಗೆ ಆಕಾಂಕ್ಷಿಗಳ ಪಟ್ಟಿ ಕೂಡ ಸಿದ್ದಗೊಳ್ಳುತ್ತಿದೆ, ಇದರಂತೆ ಶಿವಮೊಗ್ಗದ ಆಯ ಕಟ್ಟಿನ ನಿಗಮ ಮಂಡಳಿಗಳಲ್ಲೊಂದಾದ ಸ್ಬೂಡಾ ಕುರಿತಂತೆ ರಾಜಕೀಯ ಬೆಳವಣಿಗೆಗಳು ಗರಿಗೆದರುತ್ತಿದೆ.
ಬಲ್ಲ ಮೂಲಗಳನ್ವಯ ಜೂನ್ ೨೨ ರಂದು ಕ್ರೈಸ್ತ ಧರ್ಮಾಧ್ಯಕ್ಷರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರ ಇದೀಗ ಭಾರಿ ಚರ್ಚೆಗೆ ಬಿರುಸು ಪಡೆದಿದೆ, ಶಿವಮೊಗ್ಗದ ಹಿಂದಿನ ಸೂಡಾ ಹಾಗೂ ಇದೀಗ ಬದಲಾದ ಸ್ಬೂಡಾ ಅಧ್ಯಕ್ಷರಾಗಿ ನೇಮಕಾತಿ ಮಾಡುವ ವಿಚಾರದಲ್ಲಿ ಕ್ರೈಸ್ತ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದನ್ನು ಗಮನಕ್ಕೆ ತಂದಿರುವ ಧರ್ಮಾಧ್ಯಕ್ಷರು ಈ ಭಾರಿ ಬಹುಮತದಡಿ ಸರಕಾರ ರಚನೆಯಾಗಿದ್ದು ಇದಕ್ಕೆ ಅಭಿನಂದನೆ ಸಲ್ಲಿಸಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿಯಲ್ಲಿ ಕ್ರೈಸ್ತ ಸಮುದಾಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು, ಏಕೆಂದರೆ ಸೂಡಾ ರಚನೆಯಾಗಿದ್ದನಿಂದ ಪ್ರಸ್ತುತ ಅವಧಿಯವರೆಗೆ ಕಾಂಗ್ರೆಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿದಂತಹ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ನಾಯಕರಿಗೆ ಅವಕಾಶ ನೀಡಿರುವುದಿಲ್ಲ, ಈ ಅವಧಿಯಲ್ಲಿ ನೀಡಿದರೆ ಅದು ಮೊದಲ ಇತಿಹಾಸ ಎಂದು ಧರ್ಮಾಧ್ಯಕ್ಷರು ಅವರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ, ಈ ಅಂಶಗಳನ್ನು ಪರಿಗಣಿಸಿ ಸ್ಬೂಡಾ ಅಧ್ಯಕ್ಷ ನೇಮಕಾತಿಯಲ್ಲಿ ಕ್ರೈಸ್ತ ಸಮುದಾಯವನ್ನು ಪರಿಗಣಿಸಿದರೆ ಅದೊಂದು ಸಾಮಾಜಿಕ ನ್ಯಾಯವೆಂದು ಅವರು ಪತ್ರದಲ್ಲಿ ನೇರವಾಗಿ ತಿಳಿಸಿರುವುದರಿಂದ ಶಿವಮೊಗ್ಗ ರಾಜಕೀಯ ವಲಯದಲ್ಲಿ ಸಂಚಲನವು ಶುರುವಾಗಿರುವುದು ಕಂಡು ಬಂದಿದೆ.
ಈ ನಿಟ್ಟಿನಲ್ಲಿ ಧರ್ಮಾಧ್ಯಕ್ಷರು ರಾಜ್ಯದ ಮುಖ್ಯಮಂತ್ರಿಗೆ ಬರೆದ ಪತ್ರವು ಸೂರ್ಯಗಗನ ಪತ್ರಿಕೆಗೆ ಲಭಿಸಿದ್ದು ಶಿವಮೊಗ್ಗ ನಗರದಲ್ಲಿರುವ ಕ್ರೈಸ್ತ ಸಮುದಾಯದ ಮುಖಂಡರು ಹಾಗೂ ಗುರುಗಳು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ತೆಗೆದುಕೊಂಡು ಸಕ್ರೀಯವಾಗಿ ಕಳೆದ ಹದಿನೈದು ವರುಷದಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಅರಳಪ್ಪನವರಿಗೆ ಸ್ಬೂಡಾ ಅಧ್ಯಕ್ಷ ಹುದ್ದೆಯ ನೇಮಕಾತಿಯನ್ನು ಮಾಡಬೇಕೆಂದು ಅವಲತ್ತುಕೊಂಡಿರುವುದು ಬೆಳಕಿಗೆ ಬಂದಿದೆ, ಇದರಂತೆ ಸಮುದಾಯ ಮುಖಂಡರು ಈ ಕುರಿತಂತೆ ಒಕ್ಕರೋಲಿನಿಂದ ಕಾಂಗ್ರೆಸ್ ಹೈಕಮಾಂಡ್‌ರವರಿಗೆ ಮನವಿ ನೀಡಿದ್ದಾರೆ.
ಈ ಮನವಿಗಳ ಹಿನ್ನಲೆಯಲ್ಲಿ ಜ್ಯೋತಿ ಅರಳಪ್ಪನವರು ಕಾಂಗ್ರೆಸ್ ಪಕ್ಷದಲ್ಲಿಯು ಪಕ್ಷನಿಷ್ಟರಾಗಿ ಸೇವೆ ಸಲ್ಲಿಸುತ್ತಿದ್ದು ಸೌಹಾರ್ಧತೆ, ಸಾಮರಸ್ಯಗಳಡಿ ಎಲ್ಲಾ ಮನುಷ್ಯ ಪರ ನಿಲುವುಗಳಲ್ಲಿರುವ ಇಂತಿವರು ಸಮಾಜಮುಖಿಯಾಗಿ, ಸಂಘ ಸಂಸ್ಥೆಗಳಾದ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂನ ರಾಜ್ಯಾಧ್ಯಕ್ಷರಾಗಿ, ಕ್ರಿಶ್ಚಿಯನ್ ಕ್ರೆಡಿಟ್ ಕೋ-ಆಪರೇಟಿವ್ ಸೂಸೈಟಿಯ ನಿರ್ದೇಶಕರಾಗಿ, ಜೆಸಿಐ ಶಿವಮೊಗ್ಗ ಶರಾವತಿಯ ಸ್ಥಾಪಕ ಅಧ್ಯಕ್ಷರಾಗಿ, ಶಿವಮೊಗ್ಗ ಜಿಲ್ಲಾ ರೋಲರ್‍ಸ್ ಸ್ಕೇಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ, ಸಹ್ಯಾದ್ರಿ ರೋಲರ್‍ಸ್ ಸ್ಕೇಟಿಂಗ್ ಕ್ಲಬ್‌ನ ಅಧ್ಯಕ್ಷರಾಗಿ, ಶ್ರೀ ಮುನೇಶ್ವರ ಸ್ವಾಮಿ ಸೇವಾ ಸಮಿತಿಯ ಉಪಾಧ್ಯಕ್ಷರಾಗಿ,  ಶ್ರೀ ಚೌಡೇಶ್ವರಿ ಅಮ್ಮ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿ, ಶಿವಮೊಗ್ಗ ಜಿಲ್ಲಾ ವುಷ್ ಅಸೋಸಿಯೇಷನ್ ನಿರ್ದೇಶಕರಾಗಿ, ಸೇವೆಯನ್ನು ಸಲ್ಲಿಸುತ್ತಿರುವ ಮಾಹಿತಿಗಳನ್ನು ಪಡೆದಿರುವುದು ಗಮನಾರ್ಹವಾಗಿದೆ, ಈ ಎಲ್ಲಾ ಲೆಕ್ಕಾಚಾರಗಳ ನಡುವೆ ಜ್ಯೋತಿ ಅರಳಪ್ಪನವರಿಗೆ ಬಹುತೇಕ ಕಾಂಗ್ರೆಸ್ ನಾಯಕರುಗಳು ಬೆಂಬಲವಿತ್ತಿರುವುದು ಇದೀಗ ಗುಟ್ಟಾಗೇನು ಉಳಿದಿಲ್ಲವಾಗಿದೆ.

Related posts

ಮೈಸೂರು ದಸರಾ: ನಂದಿಧ್ವಜಗಳಿಗೆ ಪೂಜೆ ಸಲ್ಲಿಸಿದ ಸಿಎಂ ಸಿದ್ಧರಾಮಯ್ಯ: ಡಿಸಿಎಂ ಡಿಕೆ ಶಿವಕುಮಾರ್ ಸಾಥ್

ಬಿಜೆಪಿ ನಿಯೋಗದಿಂದ ಕೆಆರ್ ಎಸ್  ಡ್ಯಾಂ ಭೇಟಿ ಮುಂದೂಡಿಕೆ.

ಕಾಶ್ಮೀರ ಸರೋವರದ ಯೂತ್ ಹಾಸ್ಟೇಲ್ಸ್ ಚಾರಣಕ್ಕೆ ಹೊರಟ ಗುಂಪಿಗೆ ಬೀಳ್ಕೋಡುಗೆ.