ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಖಾಲಿಯಾಗುತ್ತಾ ಭೂಮಿಯ ಮೇಲಿನ ʼಆಮ್ಲಜನಕ..? ಭಯ ಹುಟ್ಟಿಸಿದ ವಿಜ್ಞಾನಿಗಳ ಹೊಸ ಸಂಶೋಧನೆ.!

ನವದೆಹಲಿ: ಮನುಷ್ಯ ಪ್ರಾಣಿಗಳು ಉಸಿರಾಡಲು ಆಮ್ಲಜನಕ ಅಗತ್ಯ. ಆಕ್ಸಿಜನ್ ಇಲ್ಲದೇ ಯಾವುದೇ ಜೀವಿ ಜೀವಿಸಲು ಸಾಧ್ಯವಿಲ್ಲ.  ಆದರೆ ಇದೀಗ ಭೂಮಿಯ ಮೇಲಿನ ʼಆಮ್ಲಜನಕ ಕೊರತೆ ಉಂಟಾಗಬಹುದು ಎಂಬ ವಿಜ್ಞಾನಿಗಳ ಹೊಸ ಸಂಶೋಧನೆಯೊಂದು ಭಯವನ್ನ ಹುಟ್ಟಿಸಿದೆ.

ಅಮ್ಲಜನಕವು ಭೂಮಿಯ ಮೇಲೆ ಎಲ್ಲೆಡೆ ಇರುತ್ತದೆ, ನಮ್ಮ ಅಸ್ತಿತ್ವದ ಸಾರವನ್ನು ರೂಪಿಸುತ್ತದೆ. ಭೂಮಿಯ ವಾತಾವರಣದ ಸುಮಾರು 21 ಪ್ರತಿಶತದಷ್ಟು ಆಮ್ಲಜನಕವಿದೆ. ಈ ಅನಿಲವು ಅಸಂಖ್ಯಾತ ಜೀವಿಗಳ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.   ಆದರೆ ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಗ್ರಹವು ರೂಪುಗೊಂಡಾಗ, ಪರಿಸ್ಥಿತಿಗಳು ತುಂಬಾ ವಿಭಿನ್ನವಾಗಿದ್ದವು. ಭೂಮಿಯ ವಾತಾವರಣವು ಇಂಗಾಲದ ಡೈಆಕ್ಸೈಡ್, ಮೀಥೇನ್ ಮತ್ತು ನೀರಿನ ಆವಿಯ ಪ್ರಾಬಲ್ಯ ಹೊಂದಿತ್ತು. ಅದೇ ರೀತಿ ಭವಿಷ್ಯದಲ್ಲಿ ಭೂಮಿಯ ವಾತಾವರಣವು ಮತ್ತೆ ಆಮ್ಲಜನಕದ ಕೊರತೆ ಎದುರಿಸಲಿದೆ. ವಾತಾವರಣ ಬದಲಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಈ ಸಂಶೋಧನೆಯ ವರದಿಯನ್ನು ಬಿಡುಗಡೆ ಮಾಡಿದೆ. ಆಮ್ಲಜನಕದ ಕುಸಿತವು ತುಂಬಾ ತೀವ್ರವಾಗಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಈಗ ಇರುವುದಕ್ಕಿಂತ ಒಂದು ಮಿಲಿಯನ್ ಪಟ್ಟು ಕಡಿಮೆ ಆಮ್ಲಜನಕ ಭವಿಷ್ಯದಲ್ಲಿ ಉಳಿಯಲಿದೆಯಂತೆ. ವಿಜ್ಞಾನಿಗಳ ಪ್ರಕಾರ ವಾತಾವರಣದ ನಿರ್ಜಲೀಕರಣದ ಸೂಚನೆ ಇದು.

ಸಂಶೋಧಕರು ಭೂಮಿಯ ವಾತಾವರಣದ ವಿವರವಾದ ಮಾದರಿಗಳನ್ನು ರಚಿಸಿದ್ದಾರೆ. ಸೂರ್ಯನ ಪ್ರಕಾಶಮಾನದಲ್ಲಿನ ಬದಲಾವಣೆ ಮತ್ತು ಇಂಗಾಲದ ಡೈಆಕ್ಸೈಡ್ ಮಟ್ಟದಲ್ಲಿನ ಕುಸಿತವನ್ನು ವಿಶ್ಲೇಷಿಸಿದ್ದಾರೆ. ಅಷ್ಟೇ ಅಲ್ಲ ಸಸ್ಯಗಳ ಕೊರತೆಯಿಂದಲೇ ಆಮ್ಲಜನಕವೂ ಕುಸಿತವಾಗುತ್ತಿದೆ ಎಂದು ಹೇಳಲಾಗ್ತಿದೆ.

ಬದಲಾವಣೆಯು ಭೂಮಿಯನ್ನು ಸುಮಾರು 2.4 ಶತಕೋಟಿ ವರ್ಷಗಳ ಹಿಂದೆ ಗ್ರೇಟ್ ಆಕ್ಸಿಡೇಶನ್ ಈವೆಂಟ್ (GOE) ಎಂದು ಕರೆಯಲಾಗುವ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ಅಧ್ಯಯನವು ಹೇಳುತ್ತದೆ. ವಿಜ್ಞಾನಿಗಳು ಸೌರವ್ಯೂಹದ ಹೊರಗೆ ವಾಸಯೋಗ್ಯ ಗ್ರಹಗಳನ್ನು ಹುಡುಕುತ್ತಿರುವ ಸಂದರ್ಭದಲ್ಲೇ ಈ ಆಘಾತಕಾರಿ ಸಂಗತಿ ಬಯಲಾಗಿದೆ. ವಾತಾವರಣದ ಆಮ್ಲಜನಕವು ವಾಸಯೋಗ್ಯ ಪ್ರಪಂಚದ ಶಾಶ್ವತ ಲಕ್ಷಣವಾಗಿರುವುದು ಅಸಾಧ್ಯ ಎಂದು ಸಂಶೋಧನೆಯಲ್ಲಿ ತಿಳಿಸುತ್ತದೆ.

 

Related posts

ಗಿರಿಜನರಿಗೆ ಅರಣ್ಯ ಹಕ್ಕುಪತ್ರ

TOD News

ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು: ಅರಿವು ಸಾಲ ಯೋಜನೆಗೆ ಹೆಚ್ಚುವರಿ ಅನುದಾನ ಒದಗಿಸಲು ಸೂಚಿಸಿದ ಸಿಎಂ ಸಿದ್ಧರಾಮಯ್ಯ .

7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ಇನ್ನ ತಿಂಗಳು ಬಾಕಿ: ಶೀಘ್ರದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಸಿಗುತ್ತಾ ಗುಡ್ ನ್ಯೂಸ್