ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಗ್ಯಾರಂಟಿ ಬಗ್ಗೆ ತೆಲಂಗಾಣದಲ್ಲಿ ಜಾಹೀರಾತು: ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿದ ಚುನಾವಣಾ ಆಯೋಗ .

ನವದೆಹಲಿ : ತೆಲಂಗಾಣದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಕಾವು ಹೆಚ್ಚಾಗಿದ್ದು,  ಗ್ಯಾರಂಟಿ  ಯೋಜನೆ ಬಗ್ಗೆ ತೆಲಂಗಾಣದಲ್ಲಿ ಜಾಹೀರಾತು ಹಾಕಿದ್ದಕ್ಕೆ  ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ತೆಲಂಗಾಣದಲ್ಲಿ ಸರ್ಕಾರಿ ಜಾಹೀರಾತುಗಳನ್ನು ಹಾಕುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಭಾರತೀಯ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ಸರ್ಕಾರವು ಹೈದರಾಬಾದ್ ಮೂಲದ ಹಲವಾರು ಪತ್ರಿಕೆಗಳಲ್ಲಿ ತನ್ನ ಜಾಹೀರಾತುಗಳನ್ನು ಪ್ರಕಟಿಸಿದೆ ಎಂದು ಬಿಜೆಪಿ ಮತ್ತು ಬಿಆರ್ಎಸ್ ದೂರಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.   ಇಸಿಐ ತನ್ನದೇ ಆದ ದಾಖಲೆಗಳನ್ನು ಪರಿಶೀಲಿಸಿದ್ದು ಮತ್ತು ಅಂತಹ ಅನುಮೋದನೆಯನ್ನು ತಾನು ನೀಡಿಲ್ಲ ಅಥವಾ ಕರ್ನಾಟಕದಿಂದ ಅಂತಹ ಯಾವುದೇ ಅರ್ಜಿಯು ನಿರ್ಧಾರಕ್ಕಾಗಿ ಬಾಕಿ ಉಳಿದಿಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಕರ್ನಾಟಕ ಮುಖ್ಯಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.

ತೆಲಂಗಾಣ ರಾಜ್ಯದಲ್ಲಿ ಕರ್ನಾಟಕ ರಾಜ್ಯದಿಂದ ಜಾಹೀರಾತು ನೀಡಿರುವ ವಿಚಾರದಲ್ಲಿ, ಇನ್ನುಮುಂದೆ ಈ ರೀತಿಯಾದ ಜಾಹೀರಾತು ನೀಡಬಾರದು ಎಂದು ಆದೇಶ ನೀಡಿದೆ. ಈ ರೀತಿಯ ಜಾಹಿರಾತು ನೀಡಬೇಕಾದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕು. ಈ ರೀತಿಯ ಜಾಹಿರಾತು ನೀಡಿರೋ ಬಗ್ಗೆ ರಾಜ್ಯ ಸರ್ಕಾರ, ಇನ್ನು ಯಾಕೆ ವಾರ್ತಾ ಇಲಾಖೆಯ ಕಾರ್ಯದರ್ಶಿ ವಿರುದ್ದ ಕ್ರಮ ಯಾಕೆ ಜರುಗಿಸಬಾರದು? ಎಂದು ನೋಟಿಸ್ನಲ್ಲಿ ಆಯೋಗ ತಿಳಿಸಿದೆ.

“ಚುನಾವಣೆ ನಡೆಯುವ ತೆಲಂಗಾಣ ರಾಜ್ಯದಲ್ಲಿ ಪ್ರಸಾರವಾಗುವ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುವ ಜಾಹೀರಾತುಗಳನ್ನು ನೀಡುವ ಕಾರ್ಯವು ಆಯೋಗದ ಮೇಲಿನ ನಿರ್ದೇಶನಗಳ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ಇಸಿಐ ಅಧಿಸೂಚನೆ ತಿಳಿಸಿದೆ.

ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ತೆಲಂಗಾಣ ಚುನಾವಣೆಯಲ್ಲಿ ತೆಲುಗು ಹಾಗೂ ಇಂಗ್ಲಿಷ್ ಪೇಪರ್ ಗಳಲ್ಲಿ ಕರ್ನಾಟಕ ಗ್ಯಾರಂಟಿ ಕುರಿತು ಜಾಹೀರಾತು ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿತ್ತು. ಈ ರೀತಿ ಜಾಹೀರಾತು ನೀಡದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಇಸಿಐಗೆ ಬಿಜೆಪಿ ಮನವಿ ಕರ್ನಾಟಕ ಜಾಹೀರಾತು ಕುರಿತಾಗಿ ಇದರ ವೆಚ್ಚವನ್ನ INC ತೆಲಂಗಾಣ ಭರಿಸುವಂತೆ ಸೂಚನೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

 

Related posts

ಶಾಲೆಯ ಶಿಕ್ಷಕಿ ಟಿ.ನೀಲಾವತಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ.

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 3 ಸಾವಿರ ಹುದ್ದೆಗಳಿಗೆ ನೇಮಕಾತಿಗೆ ಸಿದ್ಧತೆ.

ಬಿಜೆಪಿಯೊಂದಿಗೆ ಮೈತ್ರಿಯನ್ನ ಜಿಲ್ಲಾ ಜೆಡಿಎಸ್ ಸ್ವಾಗತಿಸುತ್ತದೆ-ಕೆ.ಬಿ. ಪ್ರಸನ್ನಕುಮಾರ್