ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ವರ್ಗಾವಣೆ ದಂಧೆ ಆಡಿಯೋ ವೈರಲ್ ವಿಚಾರ:  ಸಮಗ್ರ ತನಿಖೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

ಬೆಂಗಳೂರು: ವರ್ಗಾವಣೆ ದಂಧೆ ಬಗ್ಗೆ ಉಮಾಪತಿ ಆಡಿಯೋ ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್,  ನಾನು ಸಹ ವೈರಲ್ ಆಡಿಯೋ ಕೇಳಿದ್ದೇನೆ  ಗೃಹ ಸಚಿವರಿಗೆ ಹಣ ನೀಡಿದ್ದೇನೆ ಅಂತಾ ಹೇಳಿದ್ದಾರೆ.  ಆ ಗೃಹ ಸಚಿವ ನಾನೇ ತಾನೇ. ತನಿಖೆಯಾಗಲಿ ಸಮಗ್ರ ತನಿಖೆ ಮಾಡುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ನಿಗಮ ಮಂಡಳಿ ನೇಮಕ ವಿಚಾರ. ನಮ್ಮ ಅಭಿಪ್ರಾಯ ಕೇಳಿಲ್ಲ. ನಾನು ಸಹ ಎಂಟು ವರ್ಷ ಅಧ್ಯಕ್ಷನಾಗಿದ್ದೆ. ನಮ್ಮ ಅಭಿಪ್ರಾಯ ಕೇಳಿದ್ರೆ ಚೆನ್ನಾಗಿತ್ತು.ಶಾಸಕರಿಗೆ, ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ ಕೊಡಲಿ ಎಂದು ಪರಮೇಶ್ವರ್ ಹೇಳಿದರು.

Related posts

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಸೈಕಲ್’ ವಿತರಣೆಗೆ ನಿರ್ಧಾರ.

ವಿದ್ಯಾರ್ಥಿಗಳಿಗಾಗಿ ಕಸಾಪ ದಿಂದ ಕಥಾ ಸಂಭ್ರಮಕ್ಕೆ ಆಹ್ವಾನ

ದಸರಾ ಉತ್ಸವ: ಸಕ್ರೆಬೈಲಿನ ಆನೆಬಿಡಾರದ ಮೂರು ಆನೆಗಳಿಗೆ ಅಂಬಾರಿ ಹೊರುವ ಜವಾಬ್ದಾರಿ.