ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯದಲ್ಲೂ ನ್ಯುಮೋನಿಯಾ ವೈರಸ್ ಭೀತಿ: ಸರ್ಕಾರದಿಂದ ಅಲರ್ಟ್..

ಬೆಂಗಳೂರು: ವಿಶ್ವಕ್ಕೆ   ಕೋವಿಡ್-19 ಎಂಬ ಮಾರಕ ರೋಗವನ್ನ ಹಂಚಿಕೆ ಮಾಡಿ, ಸಾಕಷ್ಟು ತೊಂದರೆಗೆ ಸಿಲುಕಿಸಿದ್ದ  ನೆರೆಯ ರಾಷ್ಟ್ರ ಚೀನಾದಲ್ಲಿ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗದ ಬಿರುಗಾಳಿ ಬೀಸಿದೆ.

ಹೌದು, ಚೀನಾದಲ್ಲಿ ಹೊಸ ಮಾದರಿಯ ನ್ಯೂಮೋನಿಯಾ ವೈರಸ್ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಎಲ್ಲಾ ರಾಜ್ಯಗಳಲ್ಲೂ ಅಲರ್ಟ್ ನಿಂದ ಇರುವಂತೆ ಸೂಚನೆ ನೀಡಿದೆ. ಕೊರೊನಾದಿಂದ ಇನ್ನೂ ಚೇತರಿಸಿಕೊಳ್ಳದ ಚೀನಾದಲ್ಲಿ ಮತ್ತೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ನಿಗೂಢ ನ್ಯುಮೋನಿಯಾ(Pneumonia) ಚೀನಾ ಶಾಲೆಗಳನ್ನ ಒಕ್ಕರಿಸಿದ್ದು, ಮಕ್ಕಳು ವಿಲವಿಲ ಅಂತಾ ಒದ್ದಾಡುತ್ತಿದ್ದಾರೆ. ಪ್ರತಿನಿತ್ಯ ಅಂದಾಜು 7 ಸಾವಿರ ಮಕ್ಕಳಲ್ಲಿ ಸೋಂಕು ಪತ್ತೆಯಾಗುತ್ತಿದೆ. ಹೀಗಾಗಿ ಭಾರತದಲ್ಲಿ ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಇನ್ನು ಕರ್ನಾಟಕಕ್ಕೂ ಸಹ ಕೇಂದ್ರ ಸರ್ಕಾರ ಅಲರ್ಟ್ ಮಾಡಿದ್ದು, ಆಸ್ಪತ್ರೆಗಳನ್ನ ಸನ್ನದ್ಧವಾಗಿಡಲು ಸೂಚಿಸಿದೆ.

ಆಸ್ಪತ್ರೆಗಳಲ್ಲಿ ಹಾಸಿಗೆ, ಜ್ವರಕ್ಕೆ ಸಂಬಂಧಿಸಿದಂತೆ ಔಷಧ ಹಾಗೂ ಲಸಿಕೆ, ಆಕ್ಸಿಜನ್, ಆಯಂಟಿಬಯೋಟಿಕ್ ,ಪಿಪಿಇ ಕಿಟ್ ಹಾಗೂ ವೈರಸ್ ಟೆಸ್ಟ್ ಕಿಟ್ ಸಜ್ಜಾಗಿಡಲು ಸೂಚನೆ ನೀಡಿದೆ. ಈ ವೈರಸ್ ಕೊರೊನಾ ಗುಣಲಕ್ಷಣಗಳು ಹೊಂದಿದೆ. ಹೀಗಾಗಿ ಇನ್ ಫ್ಲುಯೆಂಜಾ ಮಾದರಿ ಜ್ವರ ಹಾಗೂ ಗಂಭಿರ ಸ್ವರೂಪದ ಉಸಿರಾಟತೊಂದರೆ ಪ್ರಕರಣಗಳ ಮೇಲೆ ನಿಗಾ ವಹಿಸುವಂತೆ ತಿಳಿಸಿದೆ.

ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಕೇಂದ್ರದ ಸೂಚನೆಯನ್ನು ಕರ್ನಾಟಕ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತಾಂತ್ರಿಕ ಸಲಹಾ ಸಮಿತಿ ಸಭೆ  ಮಾಡಿದ್ದು, ನ್ಯುಮೋನಿಯಾ ಮಾದರಿಯ ಸೋಂಕಿಗೆ ರಾಜ್ಯದಲ್ಲಿ ಹೊಸ ಗೈಡ್ಲೈನ್ಸ್ ಬಿಡುಗಡೆಯಾಗುವ ಸಾಧ್ಯತೆ ಇದೆ.

 

Related posts

ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿ ಸಿದ್ದತೆ ಕುರಿತು ಡಿಸಿ ಸೂಚನೆ

ಕರಾಟೆ ಪಂದ್ಯಾವಳಿ – 2023: ಪ್ರೀತಮ್ .ವಿ ಮತ್ತು ಶೀತಲ್ ಗೆ ಪ್ರಥಮ ಸ್ಥಾನ.

ಹಮಾಸ್ ಅನ್ನು ಕೊನೆಗೊಳಿಸದೆ ಬೇರೆ ದಾರಿಯಿಲ್ಲ ! – ಎಲಾನ್ ಮಸ್ಕ್