ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ವಿಶ್ವದ 195 ದೇಶಗಳ ಪೈಕಿ 182ದೇಶಗಳಲ್ಲಿ ನೆಲೆಸಿದ್ದಾರೆ ಕೇರಳಿಗರು..

ಕೊಚ್ಚಿ: ಕೇರಳದ ಮಂದಿ ವಿಶ್ವಸಂಸ್ಥೆ ನೋಂದಾಯಿತ 195 ದೇಶಗಳ ಪೈಕಿ, 182 ದೇಶಗಳಲ್ಲಿ (ಶೇ.93 ರಾಷ್ಟ್ರಗಳಲ್ಲಿ) ಉದ್ಯೋಗಿಗಳಾಗಿ ನೆಲೆಸಿದ್ದಾರೆ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

ನಾರ್ಕಾ ಎಂಬ ಸಂಸ್ಥೆಯು ನೀಡಿರುವ ಮಾಹಿತಿಯಂತೆ ಈಗ 182 ದೇಶಗಳಲ್ಲಿ ಕೇರಳಿಗರು ಕೆಲಸ ಮಾಡುತ್ತಿದ್ದಾರೆ ಎಂದು  ತಿಳಿದು ಬಂದಿದೆ. ನಾರ್ಕಾ ಎಂಬ ಸಂಸ್ಥೆಯು ಕೇರಳ ಸರ್ಕಾರದೊಂದಿಗೆ  ಒಡಂಬಡಿಕೆ ಮಾಡಿಕೊಂಡಿದ್ದು, ಕೇರಳದಿಂದ ವಿದೇಶಕ್ಕೆ ತೆರಳಿ ನೆಲೆಸಿರುವವರಿಗೆ ಪ್ರವಾಸಿ ಐಡಿ ಮಾಡಿಕೊಡುತ್ತದೆ.

ಪ್ರಸ್ತುತ 4,36,960 ಮಂದಿ ನಾರ್ಕಾ ಸಂಸ್ಥೆಯ ಪ್ರವಾಸಿ ಐಡಿ ಹೊಂದಿದ್ದು, ಇವರು ಪ್ರಪಂಚದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. ಇದರಲ್ಲಿ ಹೆಚ್ಚು ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದು, ಯುಎಇಯಲ್ಲಿ 1,80,465 ಮಂದಿ ಉದ್ಯೋಗಿಗಳಾಗಿದ್ದಾರೆ. ಪ್ರಸ್ತುತ ಯುದ್ಧಪೀಡಿತ ರಾಷ್ಟಗಳಲ್ಲೂ ಸಾವಿರಾರು ಜನರು ನೆಲೆಸಿದ್ದಾರೆ. ಆದರೆ ಪಾಕಿಸ್ತಾನ, ಉತ್ತರ ಕೊರಿಯಾ ಮುಂತಾದ ರಾಷ್ಟ್ರಗಳಲ್ಲಿ ಯಾರೂ ಉದ್ಯೋಗ ಮಾಡುತ್ತಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಈ ಕುರಿತು ಮಾತನಾಡಿದ ನಾರ್ಕಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಕೃಷ್ಣನ್ ನಂಬೂದರಿ, ಇತ್ತೀಚೆಗೆ ವಲಸೆ ಹೊಂದುವವರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಉತ್ತಮ ಸಂಪರ್ಕ ಸೇತುವಾಗುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಮ್ಮ ಪ್ರವಾಸಿ ಐಡಿ ಹೊಂದಿರುವವರಲ್ಲಿ ಕೌಶಲ್ಯಯುತ  ಮತ್ತು ಅಸಂಘಟಿತ ಕಾರ್ಮಿಕರೂ ಇದ್ದು, ವಿಶ್ವದ ಉದ್ದಗಲಕ್ಕೂ ನೆಲೆಸಿ ಉದ್ಯೋಗ ಮಾಡುತ್ತಿದ್ದಾರೆ. ಕೌಶಲ್ಯಯುತರು 4-5 ರಾಷ್ಟ್ರಗಳನ್ನು ತಿರುಗಿ ನಂತರ ಉತ್ತಮ ಪರಿಸರ ಹೊಂದಿರುವ ರಾಷ್ಟ್ರದಲ್ಲಿ ಬೇರೂರುವ ಪದ್ಧತಿ ಹೆಚ್ಚಾಗುತ್ತಿದೆ.

ಹಾಗೆಯೇ ಒಮ್ಮೆ ತೆರಳಿದವರು ಮತ್ತೆ ಇಳಿ ವಯಸ್ಸಿನಲ್ಲಿ ಕೇರಳಕ್ಕೆ ಮರಳಿ ಬರುವ ಸಂಖ್ಯೆಯೂ ಕುಸಿಯುತ್ತಿರುವುದು ಆತಂಕ ಮೂಡಿಸಿದೆ ಎಂದಿದ್ದಾರೆ. ಕೇರಳ ಸರ್ಕಾರದ ವತಿಯಿಂದ ನೀಡಲಾಗುವ ಪ್ರವಾಸಿ ಐಡಿಗೆ ನೋಂದಾಯಿತರಾದವರಿಗೆ ವಾರ್ಷಿಕ 4 ಲಕ್ಷ ರು. ಮೊತ್ತದ ಅಪಘಾತ ವಿಮೆ ಸೌಲಭ್ಯವಿದೆ.

 

Related posts

ಛಾಯಾಗ್ರಹಣದಲ್ಲಿ ಡಿಜಿಟಲ್ ಯುಗ ಪ್ರವೇಶ: ಎಲ್ಲಾ ಜೀವ ವೈವಿಧ್ಯ, ಪರಿಸರದ ಮಾಹಿತಿ ಒಂದು ಛಾಯಾಚಿತ್ರಗಳಿಂದ ಲಭ್ಯ-ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ

ಗುರುಪುರದ ಬಿಜಿಎಸ್ ಶಾಲೆಯಲ್ಲಿ ಆ. 30 ರಂದು ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟ.

ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಅಭಿನಂದನೆ.