ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

 ಸಿಎಂ ನಿವಾಸದ ಬಳಿ ಪಿಎಸ್ ಐ ಹುದ್ದೆ ಪರೀಕ್ಷಾರ್ಥಿಗಳಿಂದ ಪ್ರತಿಭಟನೆ.

ಬೆಂಗಳೂರು: 545 ಪಿಎಸ್ ಐ ಹುದ್ದೆಗಳಿಗೆ ಸರ್ಕಾರ ಮರು ಪರೀಕ್ಷೆಗೆ ಕೇವಲ ಒಂದು ತಿಂಗಳು ಕಾಲಾವಕಾಶ ನೀಡಿರುವ ಹಿನ್ನೆಲೆ ಅಭ್ಯರ್ಥಿಗಳು ಇಂದು ಸಿಎಂ ನಿವಾಸ ಗೃಹ ಕಚೇರಿ ಕೃಷ್ಣಾ ಬಳಿ ಪ್ರತಿಭಟನೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಜನತಾದರ್ಶನ ನಡೆಸಲಿದ್ದು ಇದಕ್ಕೂ ಮುನ್ನ ಪ್ರತಿಭಟನೆಯ ಬಿಸಿ ತಟ್ಟಿದೆ. ಪಿಎಸ್ ಐ ಹುದ್ದೆ ಪರೀಕ್ಷಾ ಅಭ್ಯರ್ಥಿಗಳು  ಸಿಎಂ ನಿವಾಸದಲ್ಲಿ ಧರಣಿ ನಡೆಸಿದ್ದು ಪರೀಕ್ಷೆಗೆ ಕೇವಲ 30 ದಿನ ಕಾಲಾವಕಾಶ ನೀಡಲಾಗಿದೆ. ಸರ್ಕಾರ  ಅಧಿಕಾರಕ್ಕೆ ಬರಲು ನಮ್ಮ ಪಾತ್ರ ದೊಡ್ಡದು. ಕನಿಷ್ಟ ಎರಡು ತಿಂಗಳಾದರೂ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪೊಲೀಸರು ಪ್ರತಿಭಟನಾನಿರತ ಅಭ್ಯರ್ಥಿಗಳನ್ನ ವಶಕ್ಕೆ ಪಡೆದಿದ್ದಾರೆ.

Related posts

ಕನ್ನಡ ಸೇರಿ 15 ಪ್ರಾದೇಶಿಕ ಭಾಷೆಗಳಲ್ಲಿ ಕೇಂದ್ರ ಸರ್ಕಾರಿ ನೇಮಕಾತಿ ಪರೀಕ್ಷೆಗೆ ಅಸ್ತು..

ಇ-ಪ್ರೊಕ್ಯೂರ್ ಮೆಂಟ್ 2.0 ಪೋರ್ಟಲ್ ಹಾಗೂ ಡಿಐಎಸ್ ತಂತ್ರಾಂಶ ಲೋಕಾರ್ಪಣೆ.

7ನೇ ವೇತನ ಆಯೋಗ: ವೇತನ, ಭತ್ಯೆಗಳ ಏರಿಕೆಗಳ ಬೇಡಿಕೆ: KSGEA ಕೊಟ್ಟ ಸಲಹೆಗಳೇನು..?