ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ನ.29 ರಿಂದ ಬೆಂಗಳೂರು ಟೆಕ್ ಸಮ್ಮಿಟ್- ಸಚಿವ ಪ್ರಿಯಾಂಕ್ ಖರ್ಗೆ.

 

ಬೆಂಗಳೂರು:  ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಐಟಿ ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾತನಾಡಿದ ಮಾಹಿತಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನ ಅರಮನೆ ಮೈದಾದಲ್ಲಿ ನಡೆಯಲಿರುವ 26ನೇ ಟೆಕ್ ಸಮ್ಮಿಟ್ ಅನ್ನು ಸಿಎಂ ಸಿದ್ದರಾಮಯ್ಯ  ಉದ್ಘಾಟಿಸಲಿದ್ದಾರೆ. ಬ್ರೇಕಿಂಗ್ ಬೌಂಡರಿ ಘೋಷವಾಕ್ಯದೊಂದಿಗೆ ಟೆಕ್ ಸಮ್ಮಿಟ್ ನಡೆಯಲಿದ್ದು 30ದೇಶಗಳ  250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಏಷ್ಯಾದಲ್ಲೇ  ಅತಿದೊಡ್ಡ ಟೆಕ್ ಸಮ್ಮಿಟ್ ಇದಾಗಲಿದೆ. ಸಣ್ಣಕಂಪನಿಗಳೀಗೂ ಟೆಕ್ ಸಮ್ಮಿಟ್ ನಲ್ಲಿ ಅವಕಾಶ ನೀಡಲಾಗುತ್ತದೆ . ಚಂದ್ರಯಾನ ಪಯಣದ  ಕುರಿತು ವಿಶೇ ಷ ಪ್ರದರ್ಶನ ನೀಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

Related posts

ಜನರ ದುಡ್ಡು ಜನರ ಜೇಬಿಗೆ ಹಾಕಿದ್ರೆ ಹೊಟ್ಟೆಯುರಿ ಏಕೆ..? ಎಲ್ಲಾ ವರ್ಗದ ಶಕ್ತಿ ತುಂಬುವ ವಿಚಾರದಲ್ಲಿ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ: ಸಿಎಂ ಸಿದ್ದರಾಮಯ್ಯ ದಿಟ್ಟ ಮಾತು

ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದ ಜೆಡಿಎಸ್‍ ಜೊತೆ ಮೈತ್ರಿ- ಕೆಎಸ್ ಈಶ್ವರಪ್ಪ

ದೇಶದಲ್ಲೇ ಅತ್ಯಂತ ಶುದ್ಧಗಾಳಿ ಇರುವ ರಾಜ್ಯ ಕರ್ನಾಟಕ: ಪಟ್ಟಿಯಲ್ಲಿ ಅಗ್ರಸ್ಥಾನ