ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಡಿಸೆಂಬರ್ 6ರಿಂದ 10ರವರೆಗೆ ಸ್ವದೇಶಿ ಮೇಳ: ಇಂದು ಗುದ್ದಲಿ ಪೂಜೆ ನೆರವೇರಿಕೆ.

ಶಿವಮೊಗ್ಗ: ಶಿವಮೊಗ್ಗ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಡಿಸೆಂಬರ್ 6ರಿಂದ 10ರವರೆಗೆ ಫ್ರೀಡಂ ಪಾರ್ಕ್‍ನಲ್ಲಿ ಸ್ವದೇಶಿ ಮೇಳ ಆಯೋಜಿಸಲಾಗಿದ್ದು, ಇಂದು ಸಂಸದ ಬಿ.ವೈ. ರಾಘವೇಂದ್ರ, ಹಾಗೂ ಇನ್ನಿತರ ಗಣ್ಯರು ಗುದ್ದಲಿ ಪೂಜೆ ನೆರವೇರಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಬೃಹತ್ ಸ್ವದೇಶಿ ಮೇಳ, ಭಾರತೀಯ ಆಹಾರ, ಸಂಸ್ಕøತಿ, ಕರಕುಶಲ, ಕೈಮಗ್ಗ, ಮತ್ತು ಕಲಾಕೃತಿಯ ಶ್ರೀಮಂತ ಪರಂಪರೆ ಪ್ರದರ್ಶಿಸುವ ಮತ್ತು ಸಾರ್ವಜನಿಕರಿಗೆ ಸ್ವದೇಶಿ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಡೆಯಲಿರುವ ಬೃಹತ್ ಸ್ವದೇಶಿ ಮೇಳದ ಹಿನ್ನೆಲೆಯಲ್ಲಿ ಈ ಮೇಳ ಆಯೋಜಿಸಲಾಗಿದೆ ಎಂದರು.
ಸ್ವದೇಶಿ ಜಾಗರಣ ಮಂಚ್ ಕ್ಷೇತ್ರೀಯ ಸಂಘಟಕ್ ಕೆ.ಜಗದೀಶ್ ಜೀ, ಮಾತನಾಡಿ, ಈ ಮೇಳದಲ್ಲಿ ಸ್ವದೇಶಿ ಜಾಗೃತಿ ಮೂಡಿಸುವುದಷ್ಟೇ ಅಲ್ಲದೆ ಡಿ.6ರಂದು ನಾಡಿನ ಶ್ರೇಷ್ಠ ಕಲಾವಿದರಿಂದ ಜಾನಪದ ಕಲಾವೈಭವ, ಡಿ.7ರಂದು ಬೆಳಿಗ್ಗೆ 10-30ರಿಂದ ತಾರಸಿ ತೋಟ ತರಬೇತಿ ಕಾರ್ಯಾಗಾರ, ಮಧ್ಯಾಹ್ನ 3ರಿಂದ ಸಾವಯವ ಕೃಷಿ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಹಾಗೂ ಖ್ಯಾತ ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿಯವರ ರಾಗರಂಗ್ ಕಾರ್ಯಕ್ರಮ ನಡೆಯಲಿದೆ. ಡಿ.8ರ ಬೆಳಿಗ್ಗೆ 10-30ರಿಂದ ಆಯುರ್ವೇದ ಶಿಬಿರ, ಸಂಜೆ 6 ಗಂಟೆಗೆ ಶ್ವೇತಕುಮಾರ ಚರಿತ್ತೆ ಯಕ್ಷಗಾನ ನಡೆಯಲಿದೆ. ಡಿ.9ರಂದು ಬೆಳಿಗ್ಗೆ 10ಕ್ಕೆ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ, ಮಧ್ಯಾಹ್ನ 3ರಿಂದ ಪಂಚಗವ್ಯ ಚಿಕಿತ್ಸಾ ಶಿಬಿರ ಮತ್ತು ಉಚಿತ ಸಲಹೆ. ಸಂಜೆ 7ರಿಂದ ಕೃಪಾ ಪಡಕೆ ಮತ್ತು ತಂಡದವರಿದಂ ನೃತ್ಯರೂಪಕ ವಂದೇ ಮಾತರಂ ನಡೆಯಲಿದೆ. ಡಿ.10ರ ಭಾನುವಾರ ಬೆಳಿಗ್ಗೆ 7-30ರಿಂದ ರಂಗೋಲಿ ಸ್ಪರ್ಧೆ, 10-30ರಿಂದ ರೈತರೊಂದಿಗೆ ಸಂವಾದ ಮತ್ತು ಸಂಜೆ 7 ಗಂಟೆಗೆ ಅಭ್ರಕದಬ್ರ ಜಾದೂ ಪ್ರದರ್ಶನ ನಡೆಯಲಿದೆ. ಭಾರತೀಯ ಪಾರಂಪರಿಕ ಉಡುಗೆ ತೊಟ್ಟು ಬರುವ ಮಹಿಳೆಯರಿಗೆ ಸೌಭಾಗ್ಯವತಿ ಉಡುಗೊರೆ ಲಕ್ಕಿ ಡಿಪ್ ಮೂಲಕ ಸೀರೆಯನ್ನು ಉಗುಗೊರೆಯಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ಪ್ರಮುಖರಾದ ಪಟ್ಟಾಭಿರಾಮ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಮೇಳದ ಸಂಚಾಲಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಸಂಘಟಕರಾದ ಹರ್ಷ ಕಾಮತ್, ಸ್ವದೇಶಿ ಜಾಗರಣ ಮಂಚ್‍ನ ಪ್ರಾಂತ ವಿಚಾರ ವಿಭಾಗ ಸಹ ಪ್ರಮುಖ್ ಜಯವರ್ಧನ್, ಡಾ.ರವಿಕಿರಣ್, ಎಸ್.ದತ್ತಾತ್ರಿ, ವಿಹೆಚ್‍ಪಿ ಅಧ್ಯಕ್ಷ ವಾಸುದೇವ್, ಗೀತಾ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಸ್ವದೇಶಿ ಮೇಳದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

Related posts

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಚಿವ ಜಮೀರ್ ಅಹ್ಮದ್ ಖಾನ್ ಗೆ ಹಿನ್ನಡೆ.

ಕಷ್ಟಗಳನ್ನು ಅರಗಿಸಿಕೊಂಡು ಪರಿಪಕ್ವವಾದವರು ಆರ್.ಎಂ ಮಂಜುನಾಥ ಗೌಡರು-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ನುಡಿ

ಬರ, ಕಾವೇರಿ ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿ.