ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪ್ರಖ್ಯಾತ ಜ್ಯೋತಿಷ್ಯ ಬರಹಗಾರ ಡಾ.ಎಸ್.ಕೃಷ್ಣ ಕುಮಾರ್ ನಿಧನ

ಬೆಂಗಳೂರುಜ್ಯೋತಿಷ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದ್ದ ವೈಜ್ಞಾನಿಕ ಹಿನ್ನೆಲೆಯಲ್ಲಿ ಭಾರತೀಯ ಜ್ಯೋತಿಷ ಕ್ಷೇತ್ರವನ್ನು ವಿಶ್ಲೇಷಿಸಿ ಪ್ರಾಚೀನ ಪರಂಪರೆಯನ್ನು ಆಧುನಿಕತೆಗೆ ತೆರದಿದ್ದ ಪ್ರಖ್ಯಾತ ಜ್ಯೋತಿಷ ಚಿಂತಕ ಡಾ.ಎಸ್.ಕೃಷ್ಣ ಕುಮಾರ್ (73) ಇಂದು ನಿಧನರಾಗಿದ್ದಾರೆ.

ಸ್ವಾಂತಂತ್ರ್ಯ ಹೋರಾಟಗಾರ ಶ್ರೀ ಕೆ.ಎಸ್.ಕುಮಾರ್ ಅವರ ಮಗನಾಗಿ 1951ರ ನವಂಬರ್ 16ರಂದು ಜನಿಸಿದ್ದ ಕೃಷ್ಣಕುಮಾರ್ ಬಾಲ್ಯದಿಂದಲೂ ಜ್ಯೋತಿಷ ಶಾಸ್ತ್ರದ ಬಗ್ಗೆ ಆಸಕ್ತರಾದವರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಹವರ್ತಿ ಸಂಸ್ಥೆಯಾಗಿ ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿ ಸ್ವಂತ  ಉದ್ಯಮವನ್ನು ಹೊಂದಿದ್ದ ಕೃಷ್ಣ ಕುಮಾರ್ ಸ್ವಂತ ಆಸ‍ಕ್ತಿಯಿಂದ ಜ್ಯೋತಿಷ ಕ್ಷೇತ್ರದ ಕಡೆಗೆ ಬಂದರು. ಪೊಟ್ಟಿ ಶ್ರೀರಾಮಲು ವಿಶ್ವ ವಿದ್ಯಾಲಯದಿಂದ ಜ್ಯೋತಿಷ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ  ಅವರು ಅಮೆರಿಕಾದ ಪ್ಲೊರಿಡಾದಲ್ಲಿರುವ ಯೋಗ ಸಂಸ್ಕೃತಮ್ ವಿಶ್ವವಿದ್ಯಾಲಯದಿಂದ  ‘ಅಚೀವ್‍ ಮೆಂಟ್ ಆಫ್ ಅಸ್ಟ್ರೋಲಜಿ ಅಂಡ್ ಮಹರ್ಷಿ ಪರಾಶರ’ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದರು. ಶ್ರೀಲಂಕಾ ಮುಕ್ತ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಜ್ಯೋತಿಷದ ಕುರಿತು ಸಂಶೋಧನೆಗೆ ಡಾಕ್ಟೊರೇಟ್ ಪದವಿಯನ್ನ ಪಡೆದಿದ್ದರು.

ಬಿ.ವಿ.ರಾಮನ್ ಅವರು ಆರಂಭಿಸಿದ ಇಂಡಿಯನ್ ಕೌನ್ಸಿಲ್ ಆಫ್ ಅಸ್ಟೋಲಾಜಿಕಲ್ ಸೈನ್ಸ್ ನ  ರಾಷ್ಟ್ರೀಯ ಉಪಾಧ್ಯಕ್ಷರಾಗಿ  ಸೇವೆ ಸಲ್ಲಿಸಿದ ಅವರು  ಅನೇಕ ದೇಶಗಳಲ್ಲಿ ಜ್ಯೋತಿಷದ ಕುರಿತು ಆಸಕ್ತಿ ಮೂಡಿಸುವ ಕೆಲಸನ್ನು ಮಾಡಿದ್ದರು. ದೇಶ, ವಿದೇಶಗಳ ಅನೇಕ ವಿಚಾರ ಸಂಕಿರಣಗಳಲ್ಲ ತಮ್ಮ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜ್ಯೋತಿಷ ಭಾನು, ಜ್ಯೋತಿಷ ಕೋವಿದ, ಜ್ಯೋತಿಷ ವಾಚಸ್ಪತಿ, ಜ್ಯೋತಿಷ ಭೂಷಣ ಮೊದಲಾದ ಗೌರವಗಳಿಗೆ ಅವರು ಪಾತ್ರರಾಗಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಕೂಡ ಜ್ಯೋತಿಷವನ್ನು ಅಳವಡಿಸಿದ ಮೊದಲಿಗರಾದ ಅವರು ತಮ್ಮ ವಿದ್ಯೆಯನ್ನು ಯಾವತ್ತೂ ಹಣಕ್ಕೆ ಬಳಸಿದವರಲ್ಲ, ಫಲ ಜ್ಯೋತಿಷವನ್ನು ಕರಾರು ವಕ್ಕಾಗಿ ಹೇಳುತ್ತಿದ್ದ ಅವರು ಅನೇಕ ವಾಹಿನಿಗಳ ಮೂಲಕವೂ ಕಾರ್ಯಕ್ರಮ ನಡೆಸುತ್ತಿದ್ದರು. ಎಂದಿಗೂ ಅವರು ಆಪೇಕ್ಷಿಗಳಿಂದ ಹಣ ಪಡೆದವರಲ್ಲ.

Related posts

ಇಸ್ರೇಲ್‌ನಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹ

ಹೊಸಮನೆಯಲ್ಲಿ ಐ ಮಾಸ್ಟ್ ದೀಪಗಳ ಉದ್ಘಾಟನೆ.

 ವಿ.ಸೋಮಣ್ಣರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ – ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ