ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸುಳ್ಳು ಸುದ್ದಿಗಳೀಗೆ ಬ್ರೇಕ್ ಹಾಕಲು ಸರ್ಕಾರದಿಂದ ಫ್ಯಾಕ್ಟ್ ಚೆಕ್ ಯುನಿಟ್ ಆರಂಭ.

ಬೆಂಗಳೂರು : ಸುಳ್ಳು ಸುದ್ದಿ ತಡೆಗಟ್ಟಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಮಾಹಿತಿ ಅಸ್ವಸ್ಥತೆ ನಿಭಾಯಿಸುವ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ.

ಫ್ಯಾಕ್ಟ್ ಚೆಕ್ ಯುನಿಟ್ ಆರಂಭಿಸಿರುವ ಸರ್ಕಾರ ಸುದ್ದಿಗಳನ್ನು ನಿಭಾಯಿಸಲು ಪ್ರತ್ಯೇಕ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಫ್ಯಾಕ್ಟ್ ಚೆಕ್ ಯುನಿಟ್ ಗೆ ಕಂಪನಿಗಳ ನೋಂದಣಿಗೆ ಸರ್ಕಾರ ಟೆಂಡರ್ ಕರೆದಿದ್ದು, 7 ಕಂಪನಿಗಳು ಈಗಾಗಲೇ ನೊಂದಾಯಿಸಿಕೊಂಡಿವೆ.

ಅವುಗಳಲ್ಲಿ ಐದು ಕಂಪನಿಗಳ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಇಲಾಖೆಯು ಕಂಪನಿಗಳ ಹಿನ್ನೆಲೆ ಪರಿಶೀಲನೆ ನಡೆಸಿದ್ದು, ನಂತರ ಹೆಸರು ಬಹಿರಂಗಪಡಿಸಲಿದೆ. ಐದು ಕಂಪನಿಗಳೇ ಬಹುತೇಕ ಫೈನಲ್ ಆಗುವ ಸಾಧ್ಯತೆ ಇದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕಂಪನಿಗಳು ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ನಕಲಿ ಸುದ್ದಿಗಳನ್ನು ತಡೆಯುವ ಮತ್ತು ಫ್ಯಾಕ್ಟ್ ಚೆಕ್ ನಲ್ಲಿ ಸಾಕಷ್ಟು ಅನುಭವ ಹೊಂದಿದೆ ಎಂದು ತಿಳಿಸಿದ್ದಾರೆ. ಕಂಪನಿಗಳು ಭಾರತೀಯ ಮೂಲದವುಗಳಾಗಿರಬೇಕು ಹಾಗೂ ಫ್ಯಾಕ್ಟ್ ಚೆಕಿಂಗ್ ಸೇವೆಗಳು ಅಥವಾ ಅಂತಹ ಚಟುವಟಿಕೆಗಳಲ್ಲಿ ಕನಿಷ್ಠ ಮೂರು ವರ್ಷ ಅನುಭವವಿರಬೇಕು. ಸರ್ಕಾರ ವಿಶ್ವಾಸಾರ್ಹ ಕೆಲಸ ಮಾಡಿದ ಕಂಪನಿಗಳನ್ನು ಮಾತ್ರ ಗುರುತಿಸಲಿದೆ ಎಂದು ವಿವರಿಸಿದ್ದಾರೆ.

ಈ ಏಳು ಕಂಪನಿಗಳು ಮಾತ್ರ ಏಕೆ ನೋಂದಾಯಿಸಿಕೊಂಡಿವೆ ಎಂಬ ಪ್ರಶ್ನೆಗೆ, ಇದಕ್ಕೆ ನೋಂದಾಯಿಸಿಕೊಳ್ಳುವ ಕಂಪನಿಗಳು ಭಾರತೀಯ ಮೂಲದವುಗಳಾಗಿರಬೇಕು. ಆಗಸ್ಟ್ 31, 2023 ರಂತೆ ಫ್ಯಾಕ್ಟ್ಚೆಕಿಂಗ್ ಸೇವೆಗಳು ಅಥವಾ ಅಂತಹುದೇ ಚಟುವಟಿಕೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು. ವಿಶ್ವಾಸಾರ್ಹ ಕೆಲಸ ಮಾಡಿದ ಕಂಪನಿಯನ್ನು ಸರ್ಕಾರ ಗುರುತಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಉಳಿದ ಎರಡು ಕಂಪನಿಗಳು ಹಿಂದೆ ವಿಶ್ವಾಸಾರ್ಹ ಕೆಲಸ ಮಾಡಿದ ಮತ್ತು ಸರ್ಕಾರದೊಂದಿಗೆ ಪಾಲುದಾರಿಕೆಗೆ ಸಿದ್ಧವಾಗಿರುವ ವ್ಯಕ್ತಿಗಳನ್ನು ಒಳಗೊಂಡಿದೆ. ನಾವು ಅವುಗಳನ್ನೂ ಕೂಡ ಪಟ್ಟಿಯೊಳಗೆ ಸೇರಿಸಿಕೊಳ್ಳಲು ಅವಕಾಶವಿದಯೇ ಎಂದು ಪರಿಶೀಲಿಸುತ್ತೇವೆ ಎಂದರು.

ಅಂತಿಮವಾಗಿ ಸರ್ಕಾರದ ಶಾರ್ಟ್ಲಿಸ್ಟ್ನಲ್ಲಿರುವ ಕಂಪನಿಗಳು ಮತ್ತು ವ್ಯಕ್ತಿಗಳನ್ನು ಮೂರು ಪ್ರಮುಖ ಕ್ಷೇತ್ರಗಳಾಗಿ ವಿಂಗಡಿಸಲಾಗುತ್ತದೆ, ಇದರಲ್ಲಿ ಒಂದು ಸತ್ಯ ಪರಿಶೀಲನಾ ತಂಡವಿದೆ, ಅದು ತಪ್ಪು ಮಾಹಿತಿಯನ್ನು ಪತ್ತೆ ಮಾಡುತ್ತದೆ ಮತ್ತು ಪರಿಹರಿಸುತ್ತದೆ. ಅನಾಲಿಟಿಕ್ಸ್ ಸ್ಕ್ವಾಡ್, ಇದು ತಪ್ಪು ಮಾಹಿತಿಯ ಪರಿಸರ ವ್ಯವಸ್ಥೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತದೆ. ಸಾಮರ್ಥ್ಯ ಅಭಿವೃದ್ಧಿ ತಂಡ, ಇದು ತಪ್ಪು ಮಾಹಿತಿ ಪರಿಸರ ವ್ಯವಸ್ಥೆಯ ಉಪಸ್ಥಿತಿ ಮತ್ತು ಪರಿಣಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನೆಡೆಸುತ್ತದೆ.

 

Related posts

ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್.

ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್ ಕಿಡಿ.

ಒಂದೇ ಕಡೆ 10 ವರ್ಷ ಪೂರೈಸಿದ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ಸಿದ್ಧತೆ.