ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದೇಶದ ಪ್ರಸಿದ್ದ ಕ್ಷೇತ್ರಗಳ ದರ್ಶನಕ್ಕೆ ಕಡಿಮೆ ವೆಚ್ಛದಲ್ಲಿ ಪ್ರವಾಸ ಆಯೋಜನೆ ಕಾರ್ಯ ಶ್ಲಾಘನೀಯ-ಎನ್.ಗೋಪಿನಾಥ್

ಶಿವಮೊಗ್ಗ: ದೇಶದ ಪ್ರಸಿದ್ದ ಕ್ಷೇತ್ರಗಳ ದರ್ಶನಕ್ಕೆ ಅತ್ಯಂತ ಕಡಿಮೆ ವೆಚ್ಛದಲ್ಲಿ ಉತ್ಕೃಷ್ಟ ಪ್ರವಾಸ ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ನಗರದಿಂದ ಪ್ರವಾಸಕ್ಕೆ ಹೊರಟವರಿಗೆ ಬಿಳ್ಕೋಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ವೇದಿಕೆ, ಯೂತ್ ಹಾಸ್ಟೇಲ್ಸ್ ತರುಣೋದಯ ಘಟಕ, ಸಾಹಸ ಮತ್ತು ಸಂಸ್ಕೃತಿ ವತಿಯಿಂದ ಸಂಯುಕ್ತವಾಗಿ ಪ್ರವಾಸ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಜನತೆಗೆ ಅತ್ಯುತ್ತಮ ಅನುಭವ ಮತ್ತು ಉತ್ತಮ ಅವಕಾಶ ಮಾಡಿ ಕೊಡುವ ಉದ್ದೇಶದಿಂದ ಹೊರ ರಾಜ್ಯ ಹಾಗೂ ದೇಶಗಳಿಗೂ ಪ್ರವಾಸ ಏರ್ಪಡಿಸಲಾಗುತ್ತಿದೆ. ಅದರ ಪ್ರಯೋಜನ ಪಡೆಯಬೇಕು. ಇನ್ನೂ ಹೆಚ್ಚಿನ ಯಶಸ್ಸು ಕಾಣಲು ಸಹಕರಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ವೈವಿಧ್ಯ ಪ್ರಸಿದ್ದ ಪ್ರವಾಸಿ ತಾಣಗಳಿದ್ದು, ಶಿವಮೊಗ್ಗ ಜಿಲ್ಲೆಯ ಸ್ಥಳಗಳಿಗೂ ಪ್ರವಾಸಿಗರು ಬರುವಂತಾಗಬೇಕು. ಪ್ರವಾಸಿತಾಣ ಜೀವಂತಿಕೆಯಿಂದ ಇರಬೇಕಾದರೆ ಚಟುವಟಿಕೆಯಿಂದ ಕೂಡಿರಬೇಕು ಎಂದರು.

ಯೂತ್ ಹಾಸ್ಟೇಲ್ಸ್ ಚೇರ‍್ಮನ್ ವಾಗೇಶ್ ಮಾತನಾಡಿ, ಪ್ರತಿಯೊಬ್ಬರು ಚಾರಣ ಹಾಗೂ ಪ್ರವಾಸಗಳನ್ನು ಕಾಲಕಾಲಕ್ಕೆ ಕೈಗೊಳ್ಳಬೇಕು. ಯೂತ್ ಹಾಸ್ಟೆಲ್ ವತಿಯಿಂದ ನಿರಂತರವಾಗಿ ಚಾರಣ ಹಾಗೂ ಪ್ರವಾಸಗಳನ್ನು ಏರ್ಪಡಿಸಲಾಗುವುದು. ಇದರಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಸಿದ್ದಿ ಪಡೆದ ಪ್ರವಾಸಿತಾಣಗಳನ್ನು ಜನಸಾಮಾನ್ಯರಿಗೆ ನೋಡಲು ಸಾಧ್ಯವಾಗುತ್ತದೆ ಎಂದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಅ.ನಾ.ವಿಜಯೇಂದ್ರ, ಜಿ.ವಿಜಯಕುಮಾರ್, ಮಲ್ಲಿಕಾರ್ಜುನ್, ಪ್ರೇಮಕುಮಾರ್, ಲಕ್ಷ್ಮೀ, ಶಿವಶಂಕರ ಶಾಸ್ತ್ರೀ ಮುಂತಾದವರಿದ್ದರು.

Related posts

ವಿಶ್ವ ಅರಿವಳಿಕೆ ದಿನಾಚರಣೆ: ಅರಿವು ಮೂಡಿಸುವ ತುರ್ತು ಚಿಕಿತ್ಸೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ.

ಮಹಿಳಾ ಮೀಸಲಾತಿ ಬಿಲ್ ಗೆ ಕಾಂಗ್ರೆಸ್ ಬೆಂಬಲ -ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಮಾತು.

 ಯಾರೂ ಬಿಜೆಪಿ ಬಿಟ್ಟು ಹೋಗಲ್ಲ:ಆ ರೀತಿ ಯಾವ ಬೆಳವಣಿಗೆ ಆಗಿಲ್ಲ. – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.