ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಬಿವೈ ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದೂ ಬೇಡ- ಮತ್ತೆ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್

 

ಬೆಂಗಳೂರು:  ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ  ನೇಮಕ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ  ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.

ವಿಜಯೇಂದ್ರ ಅವರು ತಮ್ಮನ್ನು ಮಾತನಾಡಿಸಲು ಬರುವ ಅಗತ್ಯವಿಲ್ಲ. ಅವರು ತಮ್ಮ ಮನೆಗೆ ಕಾಲಿಡುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್​ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ವಿಜಯೇಂದ್ರ ಜೊತೆ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಮನೆಗೆ ವಿಜಯೇಂದ್ರ ಬರೋದು ಬೇಡ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ವೀಕ್ಷಕರ ಜೊತೆ ಯತ್ನಾಳ್ ಮನೆಗೆ ವಿಜಯೇಂದ್ರ ತೆರಳಿಲ್ಲ ಎನ್ನಲಾಗಿದೆ.

 

ಇನ್ನು ಮಾಧ್ಯಮಗಳ ಜೊತೆ ಮಾತನಾಡಿರುವ ಶಾಸಕ ಯತ್ನಾಳ್, ಬಿಜೆಪಿ ಕುಟುಂಬ ಪಕ್ಷವಾಗಲು ಬಿಡಲ್ಲ  ಉತ್ತರ ಕರ್ನಾಟಕಕ್ಕೆ ವಿಪಕ್ಷನಾಯಕನ ಸ್ಥಾನ ನೀಡಬೇಕು.  ನೀಡದಿದ್ದರೇ ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Related posts

ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಆರು ಪ್ರಥಮ, ಎರಡು ದ್ವಿತೀಯ ಸ್ಥಾನ ಪಡೆದು ಸಾಧನೆಗೈದ ದುರ್ಗಿಗುಡಿ ಶಾಲೆಯ ಮಕ್ಕಳು

ಪ್ರೀತಿಸಿ ಮದುವೆಯಾದ ಜೋಡಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ; ರಕ್ಷಣೆ ಕೋರಿ ಸಿಎಂ ಮತ್ತು ಸಚಿವರಿಗೆ ಮನವಿ…

ಬಡ ದಲಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸಿ: ದಸಂಸ ಪ್ರತಿಭಟನೆ.