ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಎಲ್ಲ ಚಿಕ್ಕ ಮಕ್ಕಳು ಸಿಹಿ ತಿನಿಸು ತಂದ ನಂತರ ತಪ್ಪದೇ ಬ್ರಷ್ ಮಾಡಿಸಬೇಕು-ಡಾ.ವಿನಯ ಶ್ರೀನಿವಾಸ್ ಸಲಹೆ

ಶಿವಮೊಗ್ಗ: ಎಲ್ಲ ಚಿಕ್ಕ ಮಕ್ಕಳು ಸಿಹಿ ತಿನಿಸು ತಂದ ನಂತರ ತಪ್ಪದೇ ಬ್ರಷ್ ಮಾಡಿಸಬೇಕು ಎಂದು ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್ ಸಲಹೆ ನೀಡಿದ್ದಾರೆ.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯವು ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಮಕ್ಕಳ ದಂತ ಆರೋಗ್ಯದ ಕುರಿತು ಜಾಗೃತಿ, ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಸಪ್ತಾಹ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕ ಮಕ್ಕಳ ಹಲ್ಲುಗಳ ಆರೋಗ್ಯ ತುಂಬ ಮುಖ್ಯವಾಗುತ್ತದೆ. ಬಿಸ್ಕೆಟ್, ಪ್ಯಾಸ್ಟಿç ಮತ್ತು ಪಾಸ್ಟಾ ಮುಂತಾದ ಹೆಚ್ಚಿನ ಸಕ್ಕರೆಯ ಅಂಶಗಳೊAದಿಗೆ ಆಹಾರ ಪದಾರ್ಥಗಳ ಸೇವನೆಯನ್ನು ಮಿತಿಗೊಳಿಸಬೇಕು. ಪೋಷಕರು  ಬಾಲ್ಯದಲ್ಲಿ ಮಕ್ಕಳಿಗೆ ಅತಿಯಾಗಿ ಸಿಹಿ ಪದಾರ್ಥಗಳ ತಿನಿಸುಗಳನ್ನು ನೀಡಬಾರದು. ನಿತ್ಯ ಹಲ್ಲುಗಳನ್ನು ಸ್ವಚ್ಛ ಮಾಡುವಂತೆ ಅಭ್ಯಾಸ ಮಾಡಿಸಬೇಕು ಎಂದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯವು ಒಂದು ವಾರಗಳ ಕಾಲ ಮಕ್ಕಳಿಗೆ ಉಚಿತ ತಪಾಸಣೆ ಹಾಗೂ ಶಿಬಿರವನ್ನು ಆಯೋಜಿಸಿದ್ದು, ಪೋಷಕರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರು ಡಾ.ಬಿ.ಎಸ್. ಸುರೇಶ್, ಉಪಪ್ರಾಂಶುಪಾಲರಾದ ಡಾ.ಕೆ.ಎಂ. ಮಿಥುನ್, ಮಕ್ಕಳ ದಂತ ವೈದ್ಯಕೀಯ ವಿಭಾಗದ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ  ಶಿಬಿರದಲ್ಲಿ ಭಾಗವಹಿಸಿದ್ದರು.

Related posts

33 ನೇ ರಾಜ್ಯ ಮಟ್ಟದ ಸಂಸ್ಕತ ಭಾಷಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ.

ಬರಗಾಲ ಘೋಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ-ಸಂಸದ ಬಿ.ವೈ. ರಾಘವೇಂದ್ರ

ಚಿಕ್ಕ ಸೇವೆಯಾದರೂ ನಿರಂತರ ಸೇವೆಗಳಿಂದ ಸಮಾಜದ ಉನ್ನತಿ ಸಾಧ್ಯ: ಲಯನ್ ಅಧ್ಯಕ್ಷ ಶಿವಯೋಗಿ ಗೌಡ