ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಕಾಂಗ್ರೆಸ್ ಕಚೇರಿಯಲ್ಲಿ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ: ಸಚಿವರು ಭಾಗಿ.

ಶಿವಮೊಗ್ಗ: ಸಚಿವತ್ರಯರಿಂದ ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಸಚಿವರಾದ ಕೆ.ಎನ್. ರಾಜಣ್ಣ, ಡಿ. ಸುಧಾಕರ್, ಮಧು ಬಂಗಾರಪ್ಪ ಅವರು ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ನೆಹರೂ ಅವರು ದೂರದೃಷ್ಟಿಯ ಪ್ರಧಾನಿಯಾಗಿದ್ದರು. ಸ್ವತಂತ್ರ ಭಾರತದಲ್ಲಿ ಅನೇಕ ಸಮಸ್ಯೆಗಳಿದ್ದವು. ಅವುಗಳನ್ನು ನಿವಾರಿಸಿ ಬಲಿಷ್ಟ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಿದವರು. ಪಂಚ ವಾರ್ಷಿಕ ಯೋಜನೆಗಳ ಮೂಲಕ ದೇಶವನ್ನು ಸಮರ್ಥವಾಗಿ ಕಟ್ಟಿದವರು. ಅವರ ಕಾಲದಲ್ಲಿ ಹೊಸ ಹೊಸ ವೈಜ್ಞಾನಿಕ, ಸಂಶೋಧನಾ ಕೇಂದ್ರಗಳು ದೊಡ್ಡ ದೊಡ್ಡ ಅಣೆಕಟ್ಟುಗಳು, ಹಲವು ನೀರಾವರಿ ಯೋಜನೆಗಳು, ಕೈಗಾರಿಕಾ ಅಭಿವೃದ್ಧಿ, ಕೃಷಿ ಕ್ರಾಂತಿ ಹೀಗೆ ತಮ್ಮ 17 ವರ್ಷದ ಪ್ರಧಾನ ಮಂತ್ರಿ ಹುದ್ದೆಯಲ್ಲಿ ಜಗತ್ತಿನಲ್ಲಿಯೇ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದವರು ಎಂದರು.
ನೆಹರೂ ಅವರ ಸಿದ್ಧಾಂತಗಳು ಎಂದಿಗೂ ಪ್ರಸ್ತುತವಾಗುತ್ತವೆ. ಅವರ ಕೊಡುಗೆಯನ್ನು ನಮ್ಮ ಯುವಕರು ಮರೆಯಬಾರದು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮತ್ತಷ್ಟು ಮೆರೆಯೋಣ ಎಂದರು.
ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್ ಮಾತನಾಡಿ, ನೆಹರೂ ಅವರ ಜನ್ಮದಿನವನ್ನು ಸಹಕಾರ ಕ್ಷೇತ್ರದ ದಿನವನ್ನಾಗಿ ಮಾಡಿವುದು ಹೆಮ್ಮೆಯ ವಿಷಯವಾಗಿದೆ. ಅವರ ಎಲ್ಲಾ ಯೋಜನೆಗಳು ಸಹಕಾರ ಕ್ಷೇತ್ರದ ಅಡಿಪಾಯದಲ್ಲೇ ಇವೆ. ನೆಹರೂ ಅವರು ಈ ದೇಶ ಎಂದಿಂದಿಗೂ ಇಷ್ಟಪಡುವ ವ್ಯಕ್ತಿಯಾಗಿದ್ದಾರೆ. ಅವರು ಭಾರತದ ಸ್ವಾತಂತ್ರ್ಯತೆ ಜತೆಗೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಾಗಿ ದುಡಿದವರು. ಅವರ ದೇಶಪ್ರೇಮ ಎಂದಿಗೂ ಮರೆಯಲಾರದ್ದು. ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಸಮರ್ಥ ಅಭಿವೃದ್ಧಿಯ ದೇಶ ಇಷ್ಟ ಪಡುವ ನಾಯಕರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಮುಖಂಡರಾದ ಎಸ್.ಪಿ. ಶೇμÁದ್ರಿ, ಎನ್. ರಮೇಶ್, ಪ್ರಸನ್ನಕುಮಾರ್, ಚಂದ್ರಶೇಖರ್, ಎಂ. ಶ್ರೀಕಾಂತ್, ಇಕ್ಕೇರಿ ರಮೇಶ್, ಮೊದಲಾದವರಿದ್ದರು.

Related posts

ರೋಟರಿ ವಲಯ ಮಟ್ಟದ ಕ್ರೀಡಾಕೂಟ ನ. 18, 19ಕ್ಕೆ

 ವಿ.ಸೋಮಣ್ಣರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ – ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

ಮಹಿಳೆಯನ್ನು ಕೊಂದು ಭೀತಿ ಹುಟ್ಟಿಸಿದ್ದ ಚಿರತೆ ಸೆರೆ.