ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನ. 18ರಂದು ಆನಂದ-ಆರೋಗ್ಯ-ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ.

ಶಿವಮೊಗ್ಗಃ ನಗರದ ಬಹುಮುಖಿ ವತಿಯಿಂದ ನ. 18ರ ಶನಿವಾರ ಸಂಜೆ 5.30ಕ್ಕೆ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮನೋವೈದ್ಯೆ, ಕಲಾವಿದೆ ಡಾ ಕೆ.ಎಸ್. ಪವಿತ್ರಾರವರು ಆನಂದ – ಆರೋಗ್ಯ ಕುರಿತ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.
ಡಾ. ಕೆ. ಎಸ್. ಪವಿತ್ರಾರವರು, ವೃತ್ತಿಯಿಂದ ವೈದ್ಯರು. ನೃತ್ಯ ಹಾಗೂ ಸಾಹಿತ್ಯ ರಚನೆ ಇವರ ಹವ್ಯಾಸಗಳಾಗಿದ್ದು, ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದಾರೆ. ಇವರಿಗೆ ಹತ್ತು ಹಲವು ಪ್ರಶಸ್ತಿಗಳ ಜೊತೆಗೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಫೆಲೋಷಿಪ್ ಗಳ ಮನ್ನಣೆ ಸಂದಿವೆ.
ದಿನ ನಿತ್ಯ ನೋಡುವ, ಓದುವ, ಕೇಳುವ ಸಾಹಿತ್ಯ,ಲಲಿತ ಕಲೆಗಳಿಂದ ಸ್ವಸ್ಥ ಜೀವನಕ್ಕೆ ಮಾರ್ಗದರ್ಶನ ಪಡೆಯುವ ಸಾಧ್ಯತೆಗಳ ಕುರಿತ ಒಂದು ಪ್ರಸ್ತುತಿ -ಆನಂದ ಆರೋಗ್ಯ. ಕನ್ನಡದ ಆಯ್ದ ಸಾಹಿತ್ಯ ಭಾಗಗಳನ್ನು ನೃತ್ಯ, ಸಂಗೀತ ಹಾಗೂ ಮಾತುಗಳ ಮೂಲಕ ಮಾನಸಿಕ ಆರೋಗ್ಯದ ಹಲವು ಮುಖಗಳನ್ನು ಪರಿಚಯಿಸುವ ಒಂದು ಪ್ರಯತ್ನ ಇದಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

Related posts

ನಾಲ್ಕು ಗ್ಯಾರಂಟಿ ಯೋಜನೆಗೆ ಈವರೆಗೆ ಆದ ಖರ್ಚು ಎಷ್ಟು..? ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನವೆಷ್ಟು? ಇಲ್ಲಿದೆ ವಿವರ…

ಜೆಡಿಎಸ್ ಅಂದ್ರೆ  ದೇವೇಗೌಡರ ಕುಟುಂಬವಷ್ಟೆ: ಮುಂದಿನದಿನಗಳಲ್ಲಿ ಬಿಜೆಪಿ ಜೊತೆ ವಿಲೀನ – ಸಿಎಂ ಸಿದ್ಧರಾಮಯ್ಯ ಟಾಂಗ್  .

ತೀವ್ರಗೊಂಡ ಕಾವೇರಿ ಹೋರಾಟ: ಅಖಂಡ ಕರ್ನಾಟಕ ಬಂದ್: ಬೀದಿಗಳಿದು ಪ್ರತಿಭಟನೆ..