ನವದೆಹಲಿ: ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ಭಾರತ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆಯುತ್ತಿದೆ. ಇತ್ತಿಚೀಗಷ್ಟೆ ಚಂದ್ರಯಾನ-3 ಉಡಾವಣೆ ಮಾಡುವ ಮೂಲಕ ತನ್ನ ಶಕ್ತಿಯನ್ನ ಇಡೀ ವಿಶ್ವಕ್ಕೆ ಪಸರಿಸಿರುವ ಭಾರತ ಸಾಕಷ್ಟು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.
ಈ ಮಧ್ಯೆಯೇ 2026ರ ವೇಳೆಗೆ ಭಾರತಕ್ಕೆ ʻಇ-ಏರ್ ಟ್ಯಾಕ್ಸಿ ಕಾಲಿಡಲಿದ್ದು, ಇದರಿಂದ ಇನ್ಮುಂದೆ ಒಂದುವರೆ ಗಂಟೆ ಪ್ರಯಾಣ ಕೇವಲ 7 ನಿಮಿಷಗಳಲ್ಲೇ ಸಾಧ್ಯವಾಗುತ್ತದೆ. ಹೌದು, ಭಾರತದ ಉನ್ನತ ವಿಮಾನಯಾನ ಸಂಸ್ಥೆ ಇಂಡಿಗೋವನ್ನು ಬೆಂಬಲಿಸುವ ಇಂಟರ್ ಗ್ಲೋಬ್ ಎಂಟರ್ ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ 2026 ರಲ್ಲಿ ಭಾರತದಲ್ಲಿ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲಿದ್ದು ಅದು ಆನ್-ರೋಡ್ ಸೇವೆಗಳೊಂದಿಗೆ “ವೆಚ್ಚ-ಸ್ಪರ್ಧಾತ್ಮಕ”ವಾಗಿರುತ್ತದೆ ಎಂದು ಕಂಪನಿಗಳು ತಿಳಿಸಿವೆ.
ಆರ್ಚರ್ ಏವಿಯೇಷನ್, ಕ್ರಿಸ್ಲರ್-ಪೋಷಕ ಸ್ಟೆಲಾಂಟಿಸ್, ಬೋಯಿಂಗ್ ಮತ್ತು ಯುನೈಟೆಡ್ ಏರ್ಲೈನ್ಸ್ನ ಬೆಂಬಲದೊಂದಿಗೆ, ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳನ್ನು ತಯಾರಿಸುತ್ತದೆ. ಇದನ್ನು ನಗರ ವಾಯು ಚಲನಶೀಲತೆಯ ಭವಿಷ್ಯವೆಂದು ಹೇಳಲಾಗಿದೆ.
ಈ ‘ಮಿಡ್ನೈಟ್’ ಇ-ವಿಮಾನಗಳು ನಾಲ್ಕು ಪ್ರಯಾಣಿಕರನ್ನು ಮತ್ತು ಪೈಲಟ್ ಅನ್ನು 100 ಮೈಲುಗಳವರೆಗೆ (ಸುಮಾರು 161 ಕಿಲೋಮೀಟರ್) ಸಾಗಿಸಬಲ್ಲವು. ಈ ಸೇವೆಯು 200 ವಿಮಾನಗಳೊಂದಿಗೆ ಪ್ರಾರಂಭವಾಗುವ ಗುರಿಯನ್ನು ಹೊಂದಿದೆ ಮತ್ತು ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಪ್ರಾರಂಭಿಸುತ್ತದೆ.
ದೆಹಲಿಯಲ್ಲಿ ಕಾರಿನಲ್ಲಿ ಓಡಾಡುವುದಾದ್ರೆ, ಸಾಮಾನ್ಯವಾಗಿ 60 ರಿಂದ 90 ನಿಮಿಷಗಳ ಪ್ರಯಾಣವನ್ನು ತೆಗೆದುಕೊಳ್ಳುತ್ತದೆ. ಆದ್ರೆ, ಏರ್ ಟ್ಯಾಕ್ಸಿಯಲ್ಲಿ ಸುಮಾರು 7 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿಗಳು ತಿಳಿಸಿವೆ. ಇಂಟರ್ಗ್ಲೋಬ್ ಎಂಟರ್ಪ್ರೈಸಸ್, ಸುಮಾರು 38% ಇಂಡಿಗೋ-ಪೋರೆಂಟ್ ಇಂಟರ್ಗ್ಲೋಬ್ ಏವಿಯೇಷನ್ ಮತ್ತು ಆತಿಥ್ಯ ಮತ್ತು ಲಾಜಿಸ್ಟಿಕ್ಸ್ ವ್ಯವಹಾರಗಳನ್ನು ಹೊಂದಿದೆ. ಸರಕು, ಲಾಜಿಸ್ಟಿಕ್ಸ್, ವೈದ್ಯಕೀಯ, ತುರ್ತು ಮತ್ತು ಚಾರ್ಟರ್ ಸೇವೆಗಳಿಗೆ ಇ-ವಿಮಾನವನ್ನು ಬಳಸಲು ಯೋಜಿಸಿದೆ.
ಆರ್ಚರ್ ಆರು ಮಿಡ್ನೈಟ್ ವಿಮಾನಗಳನ್ನು ಒದಗಿಸಲು ಜುಲೈನಲ್ಲಿ US ಏರ್ ಫೋರ್ಸ್ನಿಂದ $142 ಮಿಲಿಯನ್ ಒಪ್ಪಂದವನ್ನು ಪಡೆದುಕೊಂಡರು ಮತ್ತು ಅಕ್ಟೋಬರ್ನಲ್ಲಿ UAE ನಲ್ಲಿ ಏರ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದರು.